janadhvani

Kannada Online News Paper

ಮದೀನಾ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಯಾಂಬೊ ಸೆಕ್ಟರ್ ಇದರ ವಾರ್ಷಿಕ ಮಹಾಸಭೆಯು ಶುಕ್ರವಾರ ಯಾಂಬೊದಲ್ಲಿ ನಡೆಯಿತು.

ಕಾರ್ಯಕ್ರಮ ವನ್ನು ಕೆಸಿಎಫ್ ಮದೀನಾ ಸೆಕ್ಟರ್ ಅಧ್ಯಕ್ಷ ಅಶ್ರಫ್ ಸಖಾಫಿ ನೂಜಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಅನಿವಾಸಿಗಳು ವಾಟ್ಸಾಪ್, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುತ್ತಾರೆ.ಇಲ್ಲಿ ನಮ್ಮನ್ನು ಪ್ರಶ್ನಿಸಲು ಕೂಡ ಯಾರೂ ಇರುವುದಿಲ್ಲ. ಯುವತ್ವವನ್ನು ಹೊಂದಿದ ಈ ಸಮಯದಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡ, ಕೆಸಿಎಫ್ ಕಾರ್ಯಕರ್ತರ ಸೇವೆ ಎಲ್ಲರ ಮೆಚ್ಚಗೆಗೆ ಪಾತ್ರವಾಗಿದೆ.ಕೆಸಿಎಫ್ ಸಂಘಟನೆ ದೇಶವಿದೇಶವ್ಯಾಪಕವಾಗಿದ್ದು, ಧಾರ್ಮಿಕವಾಗಿ ಜನರಿಗೆ ತಿಳುವಳಿಕೆ ನೀಡುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದ ಕೆಸಿಎಫ್ ಯಾಂಬೊ ಸೆಕ್ಟರ್ ಅಧ್ಯಕ್ಷ ಇಕ್ಬಾಲ್ ಸಅದಿ ಮಾತನಾಡಿ ಅಲ್ಲಾಹನ ಅನುಗ್ರಹದಿಂದ ಕೆಸಿಎಫ್ ನಲ್ಲಿ ಪ್ರವರ್ತಿಸಲು ಸಾಧ್ಯವಾಯಿತು. ಇಂದು ಅರ್ಹರಿಗೆ ವಿವಿಧ ಜವಾಬ್ದಾರಿ ಲಭಿಸಲಿದ್ದು, ಉತ್ತಮ ರೀತಿಯಲ್ಲಿ ಕಾರ್ಯಾಚರಿಸಿ ಕೆಸಿಎಫ್ ಸಂಘಟನೆಯನ್ನು ಮುನ್ನಡೆಸಬೇಕೆಂದರು.
ಕೆಸಿಎಫ್ ಯಾಂಬೊ ಸೆಕ್ಟರ್ ಕಾರ್ಯದರ್ಶಿ ಮುಹಮ್ಮದ್ ಇರ್ಷಾದ್ ಜೋಗಿಬೆಟ್ಟು ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ನಂತರ ಸೆಕ್ಟರ್ ರಿ-ಆರ್ಗನೈಸರ್ ಡೈರೆಕ್ಟರ್ ಅಶ್ರಫ್ ಕಿನ್ಯಾ, ತಾಜುದ್ದೀನ್ ಸುಳ್ಯ ಅವರ ನೇತೃತ್ವದಲ್ಲಿ ಹಳೆ ಕಮಿಟಿ ಬರಕಾಸ್ತುಗೊಳಿಸಿ ನೂತನ ಕಮಿಟಿ ರಚಿಸಲಾಯಿತು.

ನೂತನ ಪದಾಧಿಕಾರಿಗಳು
ಅಧ್ಯಕ್ಷ – ಇಕ್ಬಾಲ್ ಅಲ್ ಫಲಾಹ್

ಪ್ರಧಾನ ಕಾರ್ಯದರ್ಶಿ- ಮುಹಮ್ಮದ್ ಇರ್ಷಾದ್ ಜೋಗಿಬೆಟ್ಟು
ಖಜಾಂಚಿ- ಅಬ್ದುಲ್ ಸಲಾಂ ಕೆಸಿರೋಡ್

ಎಜುಕೇಶನ್ ವಿಂಗ್

ಚೇರ್ಮನ್ -ಇಕ್ಬಾಲ್ ಸ ಅದಿ ಕಾಟಿಪಳ್ಳ
ಕಾರ್ಯದರ್ಶಿ- ಅಬ್ದುಲ್ ನಾಸಿರ್ ಮರ್ಝೂಕಿ

ಆರ್ಗನೈಸೇಷನಲ್ ವಿಂಗ್

ಚೇರ್ಮನ್- ಝೈನುಲ್ ಆಬೀದ್ ಪಡುಬಿದ್ರೆ
ಕನ್ವೀನರ್- ಮುಹಮ್ಮದ್ ಶಫೀಕ್ ಸೂರಿಂಜೆ

ರಿಲೀಫ್ ವಿಂಗ್

ಚೇರ್ಮನ್-ಮುಹಮ್ಮದ್ ಮುಸ್ತಫಾ ಕೃಷ್ಣಾಪುರ
ಕನ್ವೀನರ್-ಝಾಕೀರ್ ಹುಸೈನ್ ಕೋಡಿ

ಪಬ್ಲಿಷಿಂಗ್ ವಿಂಗ್

ಚೇರ್ಮನ್- ಫಯಾಝ್ ಫಕ್ರುದ್ದೀನ್ ಪಕ್ಷಿಕೆರೆ
ಕನ್ವೀನರ್- ಅಬ್ದುಲ್ ಮಜೀದ್ ಉಪ್ಪಿನಂಗಡಿ

ಅಬ್ದುಲ್ ನಾಸೀರ್ ಮರ್ಝೂಕಿ ಸ್ವಾಗತಿಸಿದರು, ಝೈನುಲ್ ಆಬೀದ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು.

ವರದಿ : ಹಕೀಂ ಬೋಳಾರ್

error: Content is protected !! Not allowed copy content from janadhvani.com