janadhvani

Kannada Online News Paper

ಏ.16 ರಿಂದ ದುಬೈಯಿಂದ ಹೊರಡಬೇಕಿದ್ದ ಕೆಲವು ವಿಮಾನಗಳು ಶಾರ್ಜಾ ಕೆ ಸ್ಥಳಾಂತರ

ದುಬೈ: ದುಬೈ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾನದ ಪಶ್ಚಿಮ ಭಾಗದಲ್ಲಿನ ಕಾಮಗಾರಿ ನಿರ್ವಹಣೆಗಾಗಿ ಏಪ್ರಿಲ್ 16 ರಿಂದ 30ರವರೆಗೆ ಮುಚ್ಚಲಾಗುತ್ತದೆ.

ಈ ಕಾರಣದಿಂದಾಗಿ, ಏರ್ ಇಂಡಿಯಾದ ಕೆಲವು ವಿಮಾನಗಳು ಶಾರ್ಜಾ ಅಂತ‌ರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿದ್ದು, ಮರಳಿ ಶಾರ್ಜಾ ವಿಮಾನ ನಿಲ್ದಾಣಕ್ಕೆ ತಲುಪಲಿವೆ.

ಚೆನ್ನೈ (ಎಐ 905, 906), ವಿಶಾಖಪಟ್ಟಣಂ (ಎಐ 951, 952), ಹೈದರಾಬಾದ್ (ಎಐ 951, 952), ಬೆಂಗಳೂರು (ಎಐ 993, 994), ಗೋವಾ (ಎಐ 993 ಮತ್ತು 994) ಅನ್ನು ಶಾರ್ಜಾಕ್ಕೆ ವರ್ಗಾಯಿಸಲಾದ್ದು, ಈ ಬದಲಾವಣೆಯು ದುರಸ್ತಿ ಕೆಲಸದ ದಿನಗಳಲ್ಲಿ ಮುಂದುವರಿಯಲಿದೆ. ಏರ್ ಇಂಡಿಯಾದ ಇತರ ಸೇವೆಗಳು ದುಬೈನಿಂದಲೇ ಹೊರಡಲಿವೆ.

ಈ ದಿನಗಳಲ್ಲಿ, ಇತರ ವಿಮಾನಯಾನ ಸಂಸ್ಥೆಗಳ ಸೇವೆಯಲ್ಲೂ ಬಲದಲಾವಣೆಯಾಗಿದ್ದು, ಕೆಲವು ಸೇವೆಗಳನ್ನು ದುಬೈ ಸೌತ್ ನಲ್ಲಿನ ಮಖ್ದೂಂ ಅಂತ‌ರ್‌ರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ.

error: Content is protected !! Not allowed copy content from janadhvani.com