ಜಿದ್ದಾ ವಿಮಾನ ನಿಲ್ದಾಣ: ಎರಡನೇ ಟರ್ಮಿನಲ್‌ ನಿಯಂತ್ರಣ ಕೊಠಡಿ ಆರಂಭ

ಜಿದ್ದಾ: ಜಿದ್ದಾದಲ್ಲಿನ ಕಿಂಗ್ ಅಬ್ದುಲ್ ಅಝೀಝ್ ವಿಮಾನ ನಿಲ್ದಾಣದ ಹಜ್, ಉಮ್ರಾದ ಎರಡನೇ ಟರ್ಮಿನಲ್‌ನ ನಿಯಂತ್ರಣ ಮತ್ತು ಕಾರ್ಯಾಚರಣಾ ಕೊಠಡಿಯ ಉದ್ಘಾಟನೆ ಜರುಗಿತು.

ಯಾತ್ರಾರ್ಥಿಗಳ ಪ್ರಯಾಣ ಸಂಬಂಧಿತ ಚಟುವಟಿಕೆಗಳ ವೇಗವನ್ನು ಹೆಚ್ಚಿಸಲು ಮತ್ತು ಸೇವೆಗಳನ್ನು ಉತ್ತಮಗೊಳಿಸಲು ಇದನ್ನು ರೂಪಿಸಲಾಗಿದೆ. ಹಜ್, ಉಮ್ರಾ ಜಿದ್ದಾ ವಲಯದ ಶಾಖಾ ಕಚೇರಿಯ ಅಧಿಕಾರಿ ಇಂಜಿನಿಯರ್ ಸುಲೈಮಾನ್ ಮರ್ವಾನಿ ಅವರ ಸಮ್ಮುಖದಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು.

ಹಜ್-ಉಮ್ರಾಗೆ ಸಂಭಂಧಿಸಿದ ವಿಚಾರಗಳನ್ನು ಕಂಟ್ರೋಲ್‌ ರೂಂನ ಮೂಲಕ ಸುಲಭವಾಗಿ ಸಂಪರ್ಕಿಸಿ, ಸಂಬಂಧಿಸಿದ ವಿಭಾಗಳ ಮೂಲಕ ಸಮಸ್ಯೆಗಳು ಮತ್ತು ದೂರುಗಳನ್ನು ಪರಿಹರಿಸಬಹುದು ಎಂದು ಮುಖ್ಯಸ್ಥರು ಹೇಳಿದ್ದಾರೆ. ಯಾತ್ರಾರ್ಥಿಗಳ ಚಲನವಲನ, ಬಸ್‌ಗಳ ಯಾತ್ರಾ ಹಾದಿ, ಪ್ರಯಾಣ ಕ್ರಮಗಳು, ಸೇವೆಗಳನ್ನು ತಿಳಿಯಲು ಈ ಮೂಲಕ ಸಾಧ್ಯ ವಿದೆ ಎಂದವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!