janadhvani

Kannada Online News Paper

ಮಾರ್ಚ್:8.ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ತರ್ಬಿಯತ್ ಕ್ಯಾಂಪ್

ಮುಡಿಪು:ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ವತಿಯಿಂದ “ತರ್ಬಿಯತ್ ಕ್ಯಾಂಪ್” ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ಅಧ್ಯಕ್ಷ ತೌಸೀಫ್ ಸ ಅದಿ ಹರೇಕಳರವರ ಅಧ್ಯಕ್ಷತೆಯಲ್ಲಿ ಮಾರ್ಚ್ 8 ಶುಕ್ರವಾರ ಮಧ್ಯಾಹ್ನ 2:30 ಗಂಟೆಗೆ ಎಜ್ಯುಪಾರ್ಕ್ ಮುಡಿಫು ವಿನಲ್ಲಿ ನಡೆಯಲಿರುವುದು.

ಎಜ್ಯು ಪಾರ್ಕ್ ಮುಡಿಪು ಶಿಲ್ಪಿ ಸಯ್ಯದ್ ಅಶ್ರಫ್ ತಂಙಳ್ ಆದೂರು ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಪ್ರಖ್ಯಾತ ವಾಗ್ಮಿ ಕೂಟಂಬಾರ ಅಬ್ದುಲ್ ರಹ್ಮಾನ್ ದಾರಿಮಿ ತರಗತಿಯನ್ನು ನಡೆಸಲಿದ್ದಾರೆ.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕಾರ್ಯದರ್ಶಿ ಜಮಾಲುದ್ದೀನ್ ಸಖಾಫಿ ಮುದುಂಗಾರುಕಟ್ಟೆ ಭಾಗವಹಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com