ಕೆ.ಸಿ.ಎಫ್ ನೂತನ ಕುದೈ ಯೂನಿಟ್ ಅಸ್ತಿತ್ವಕ್ಕೆ

ಮಕ್ಕತುಲ್ ಮುಕರ್ರಮಃ: ಕೆ.ಸಿ.ಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಅಧೀನದಲ್ಲಿ ನೂತನ ಕುದೈ ಯೂನಿಟ್ ರಚನೆ ಹಾಗೂ ಆತ್ಮೀಯ ಮಜ್ಲಿಸ್ ಸೆಕ್ಟರ್ ಅಧ್ಯಕ್ಷರು ಹನೀಫ್ ಸಖಾಫಿ ಬೊಳ್ಮಾರ್ ರವರ ಅಧ್ಯಕ್ಷತೆಯಲ್ಲಿ ಬತಾ ಖುರೈಶ್ ನಲ್ಲಿ ಜರಗಿತು.

ಕಾರ್ಯಕ್ರಮವನ್ನು ಜಿದ್ದಾ ಝೋನ್ ಕಾರ್ಯಕಾರಿ ಸದಸ್ಯರು ಹಾಗೂ ಉಜಿರೆ ಮಲ್ಜಅ್ ಇದರ ಆರ್ಗನೈಝರ್ ಖಾಲಿದ್ ಕಬಕ ಉದ್ಘಾಟಿಸಿದರು. ಕೆಸಿಎಫ್ ನಲ್ಲಿ ಹೇಗೆ ಕಾರ್ಯಚರಿಸಬೇಕು,ಕೆಸಿಎಫ್ ನ ಮಹತ್ವ ಇನ್ನಿತರ ವಿಷಯವನ್ನು ಹನೀಫ್ ಸಖಾಫಿ ಬೊಳ್ಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಂತರ ಸೆಕ್ಟರ್ ನಿಂದ R.O ಆಗಿ ಆಗಮಿಸಿದ ಇಕ್ಬಾಲ್ ಕಕ್ಕಿಂಜೆಯವರು ನೂತನ ಪದಾಧಿಕಾರಿಗಳನ್ನು ಘೋಷಣೆ ಮಾಡಿದರು.

ಅಧ್ಯಕ್ಷರಾಗಿ RK ಅಬ್ದುಲ್ ರಝ್ಝಾಖ್ ರಂತಡ್ಕ, ಪ್ರ.ಕಾರ್ಯದರ್ಶಿ ಅಬ್ದುಲ್ಲಾ ಕಿನ್ಯಾ, ಕೋಶಾಧಿಕಾರಿ ಹನೀಫ್ ಕೋಳಿಯೂರು, ಉಪಾಧ್ಯಕ್ಷರುಗಳಾಗಿ ನವಾಝ್ ಇಮ್ದಾದಿ ಬಜಾಲ್, ಉಮರುಲ್ ಫಾರೂಖ್ ಹನೀಫಿ ಬೋವು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ಲತೀಫ್ ನೆಲ್ಯಾಡಿ, ಅಬ್ದುಲ್ ಖಾದರ್ ಬಜ್ಪೆ ಹಾಗೂ ಕಾರ್ಯಕಾರಿ ಸದಸ್ಯರಾಗಿ ಉಸ್ಮಾನ್ ಸಅದಿ ನೆಲ್ಯಾಡಿ, ಇಸ್ಮಾಯಿಲ್ ಝುಹ್ರಿ ಕನ್ಯಾಡಿ, ಅಬ್ದುಲ್ ಬಶೀರ್ ನೆಲ್ಯಾಡಿ,
ಹುಸೈನ್ ನೆಲ್ಯಾಡಿ ರವರನ್ನೊಳಗೊಂಡ 11 ಕಾರ್ಯಕರ್ತರನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಗೊಳಿಸಲಾಯಿತು.

ಈ ವೇಳೆ ನೂತನ ಅಧ್ಯಕ್ಷರು ಅಬ್ದುಲ್ ರಝ್ಝಾಖ್ ರಂತಡ್ಕ, ನವಾಝ್ ಇಮ್ದಾದಿ ಬಜಾಲ್ ಹಾಗೂ ಉಮರುಲ್ ಫಾರೂಖ್ ಹನೀಫಿ ಬೋವು ಕೆಸಿಎಫ್ ಗೆ ಕಾರ್ಯಚರಿಸಿದರೆ ಸಿಗುವ ಪರಿಣಾಮಗಳ ಬಗ್ಗೆ ಹೇಳಿ ಶುಭ ಹಾರೈಸಿ ಮಾತನಾಡಿದರು

ಕಾರ್ಯಕ್ರಮವನ್ನು ನೂತನ ಪ್ರ. ಕಾರ್ಯದರ್ಶಿ ಅಬ್ದುಲ್ಲಾ ಕಿನ್ಯಾ ಸ್ವಾಗತಿಸಿ, ಕೋಶಾಧಿಕಾರಿ ಹನೀಫ್ ಕೋಳಿಯೂರು ಧನ್ಯವಾದ ಸಲ್ಲಿಸಿದರರು ಈ ಸಂದರ್ಭ ಕೆಸಿಎಫ್ ಝಾಯಿದಿ ಯೂನಿಟ್ ಅಧ್ಯಕ್ಷರು ಬಶೀರ್ ಕೆಜೆಕಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!