janadhvani

Kannada Online News Paper

ಪುಲ್ವಾಮ ಭಯೋತ್ಪಾದಕ ದಾಳಿ: “ಸುನ್ನೀ ಲೇಖಕರ ಬಳಗ” ವಾಟ್ಸಾಪ್ ಗ್ರೂಪ್ ಖಂಡನೆ

ಬೆಂಗಳೂರು: ದೇಶದ ರಕ್ಷಣೆಗೆ ಬೆನ್ನೆಲುಬಾಗಿ ನಿಂತಿರುವ ನಮ್ಮ ಹೆಮ್ಮೆಯ ಅಮಾಯಕ ವೀರ ಸೈನಿಕರ ಮೇಲೆ ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರ ದಾಳಿ ನಡೆದಿದ್ದು, 40ಕ್ಕೂ ಹೆಚ್ಚು ವೀರ ಯೋಧರು ಹುತಾತ್ಮರಾಗಿರುವುದು ಖೇದಕರ ಹಾಗೂ ವಿಷಾಧನೀಯ.ಈ ದುಷ್ಕೃತ್ಯ ಅತ್ಯಂತ ಪೈಶಾಚಿಕವಾಗಿದ್ದು ಸುನ್ನೀ ಲೇಖಕರ ಬಳಗ ವಾಟ್ಸಾಪ್ ಗ್ರೂಪ್ ಇದನ್ನು ತೀವ್ರವಾಗಿ ಖಂಡಿಸುತ್ತಿದೆ.

ದೇಶವನ್ನು ವಿಭಜಿಸುವುದು ಲಜ್ಜೆಗೆಟ್ಟ ಭಯೋತ್ಪಾದಕರ ಉದ್ದೇಶವಾಗಿದೆ, ಇಂಥಹ ಕ್ರೂರ ಕೃತ್ಯವನ್ನು ನಾವು ಮರೆಯಲು ಸಾಧ್ಯವಿಲ್ಲ,ಯಾವುದೇ ದುಷ್ಟಶಕ್ತಿಯಿಂದಲೂ ಭಾರತೀಯರನ್ನು ಹತ್ತಿಕ್ಕಲು ಸಾಧ್ಯವಿಲ್ಲ.ನರ ರಾಕ್ಷಸ ಭಯೋತ್ಪಾದಕರ ಇಂತಹ ಕುಕೃತ್ಯಗಳಿಂದ ನಮ್ಮ ಸೈನಿಕರ ಆತ್ಮಸ್ಥೈರ್ಯವನ್ನು ಕಿಂಚಿತ್ತೂ ಕುಗ್ಗಿಸಲು ಸಾಧ್ಯವಿಲ್ಲ.

ವೀರಮರಣ ವರಿಸಿದ ಸಿಆರ್‌ಪಿಎಫ್ ಯೋಧರ ಪರಮೋನ್ನತ ಬಲಿದಾನವನ್ನು ದೇಶವು ಮರೆಯಲಾರದು, ಅವರ ತ್ಯಾಗವು ವ್ಯರ್ಥವಾಗದು, ದೇಶಕ್ಕಾಗಿ ಹುತಾತ್ಮರಾದ ವೀರಯೋಧರಿಗೆ ಚಿರಶಾಂತಿ ಲಭಿಸಲಿ, ಅವರ ಕುಟುಂಬಕ್ಕೆ ತಾಳ್ಮೆಯನ್ನು ಭಗವಂತನು ಕರುಣಿಸಲಿ ಎಂದು ಸುನ್ನೀ ಲೇಖಕರ ಬಳಗ ಹಾರೈಸಿದೆ.

error: Content is protected !! Not allowed copy content from janadhvani.com