ಐಸಿಸ್ ನಂಟು ಶಂಕೆ: ಪಿಎಫ್ಐ ನಿಷೇಧ

ಜಾರ್ಖಂಡ್: ಇಸ್ಲಾಮಿಕ್ ಸ್ಟೇಟ್ (ಐಸಿಸ್) ಜೊತೆಗೆ ನಂಟು ಹೊಂದಿದ ಆರೋಪದ ಮೇಲೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ಅನ್ನು ಮಂಗಳವಾರ ನಿಷೇಧ ಮಾಡಿ ಜಾರ್ಖಂಡ್ ರಾಜ್ಯ ಸರ್ಕಾರ ಆದೇಶ ಮಾಡಿದೆ. ಅಪರಾಧ ಕಾನೂನು ತಿದ್ದುಪಡಿ ಕಾಯ್ದೆ-1908 ಸೆಕ್ಷನ್ 16ರ ಅಡಿ ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಲಾಗಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಜಾರ್ಖಂಡ ರಾಜ್ಯ ಸರ್ಕಾರ ನಿಷೇಧ ಮಾಡುತ್ತಿರುವುದು ಇದೇ ಮೊದಲೇನಲ್ಲ.

ಸಂಘಟನೆ ಸದಸ್ಯರು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯಿಂದ ಪ್ರಭಾವ ಹೊಂದಿದ ಆರೋಪ ಮೇಲೆ ಕಳೆದ ವರ್ಷ ಫೆಬ್ರವರಿ 20 ರಂದು ರಘುಭಾರ್ ದಾಸ್ ನೇತೃತ್ವದ ಸರ್ಕಾರ ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಿದ್ದರು.

ಜಾರ್ಖಂಡ್ನಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವ ಪಿಎಫ್ಐ ಅನ್ನು ಅಪರಾಧ ಕಾನೂನು ತಿದ್ದುಪಡಿ ಕಾಯ್ದೆ 1908ರ ಅಡಿ ನಿಷೇಧ ಮಾಡುವಂತೆ ಗೃಹ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಪಿಎಫ್ಐಅನ್ನು ನಿಷೇಧ ಮಾಡಲಾಗಿದೆ.ಪಿಎಫ್ಐ ರಾಜ್ಯದ ಪಕುರ್ ಜಿಲ್ಲೆಯಲ್ಲಿ ಹೆಚ್ಚು ಕ್ರಿಯಾಶೀಲವಾಗಿದೆ.

ಕೇರಳದಲ್ಲಿ ಸ್ಥಾಪಿಸಲ್ಪಟ್ಟ ಪಿಎಫ್ಐನ ಸದಸ್ಯರು ಐಸಿಸ್ ಜೊತೆಗೆ ನಂಟು ಹೊಂದಿದ್ದಾರೆ ಎಂದು ಗೃಹ ಸಚಿವಾಲಯ ವರದಿ ಮಾಡಿತ್ತು. ಪಿಎಫ್ಐನ ಕೆಲ ಸದಸ್ಯರು ಸಿರಿಯಾಗೆ ತೆರಳಿ ಐಎಸ್ ಉಗ್ರ ಸಂಘಟನೆ ಸೇರಿ ಕೆಲಸ ಮಾಡುತ್ತಿದ್ದಾರೆ ಎಂದು ಇದೇ ವರದಿಯಲ್ಲಿ ಆರೋಪಿಸಿದೆ.

4 thoughts on “ಐಸಿಸ್ ನಂಟು ಶಂಕೆ: ಪಿಎಫ್ಐ ನಿಷೇಧ

  1. ಪಿಎಫ್ಐ ವಿರೋಧಗಳೇ ಈ ಖುಷಿ ತುಂಬಾ ದಿನ ಇರೋದಿಲ್ಲ.ಸಂಘಿಗಳ ದ್ವೇಷ ರಾಜಕೀಯಕ್ಕೆ ಧಿಕ್ಕಾರ

Leave a Reply

Your email address will not be published. Required fields are marked *

error: Content is protected !!