janadhvani

Kannada Online News Paper

ಸಅದಿಯ್ಯದಿಂದ ಯೇನಪೋಯ ಅಬ್ದುಲ್ಲ ಕುಂಞಿ ಹಾಜಿಯವರಿಗೆ ಗೌರವಾರ್ಪಣೆ

ಕಾಸರಗೋಡು: ಯೇನಪೋಯ ಅಬ್ದುಲ್ಲ ಕುಂಞಿ ಹಾಜಿ… ಈ ಹೆಸರು ಕೇಳದವರು ಯಾರೂ ಇರಲಿಕ್ಕಿಲ್ಲ. ಶೈಕ್ಷಣಿಕ – ಸಾಮಾಜಿಕ ಕ್ಷೇತ್ರದಲ್ಲಿ ಅಪೂರ್ವವಾದ ಸಾಧನೆ ಮಾಡಿದ, ಸಅದಿಯ್ಯ ಅನಾಥಾಲಯದ 7 ವಿದ್ಯಾರ್ಥಿಗಳ ಸಹಿತ ಹಲವಾರು ಅನಾಥರಿಗೆ ಎಂಬಿಬಿಎಸ್ ಕಲಿಯಲು ಅವಕಾಶ ಮಾಡಿಕೊಟ್ಟ ಯೇನಪೋಯ ಗ್ರೂಪ್ ಚೇರ್ಮೇನ್ ವೈ. ಅಬ್ದುಲ್ಲ ಕುಂಞಿ ಹಾಜಿಯವರಿಗೆ ಸಅದಿಯ್ಯ ಗೌರವಾರ್ಪಣೆ ಸಲ್ಲಿಸುತ್ತಿದೆ.

ಪೆಬ್ರವರಿ 13 ರಂದು ಬೆಳಿಗ್ಗೆ 10.30 ಕ್ಕೆ ಮಂಗಳೂರಿನ ಟೌನ್ ಹಾಲ್ ನಲ್ಲಿ ನಡೆಯುವ “ಗೋಲ್ಡನ್ ಜುಬಿಲಿ ಘೋಷಣಾ ಸಮಾವೇಶ” ಕಾರ್ಯಕ್ರಮವು ಈ ಗೌರವಾರ್ಪಣೆಗೆ ಸಾಕ್ಷಿಯಾಗಲಿದೆ. ಸಅದಿಯ್ಯದ ಸ್ಥಾಪಕ ಹಾಗೂ ದೀರ್ಘಕಾಲದ ಅಧ್ಯಕ್ಷರಾಗಿದ್ದ ತಾಜುಲ್ ಉಲಮಾ ಉಳ್ಳಾಲ ತಂಙಳ್‌ರೊಂದಿಗೂ ಜನರಲ್ ಮ್ಯಾನೇಜರ್ ನೂರುಲ್ ಉಲಮಾ ಎಂ.ಎ. ಉಸ್ತಾದರೊಂದಿಗೂ ಉತ್ತಮ ಭಾಂದವ್ಯ ಹೊಂದಿದ್ದ ಅಬ್ದುಲ್ಲ ಕುಂಞಿ ಹಾಜಿಯವರು ಸ‌ಅದಿಯ್ಯದ ಏಳಿಗೆಗಾಗಿ ದುಡಿದರಲ್ಲದೆ, ಜನರ ನಾಡಿಮಿಡಿತ ಅರಿತು ಕಾರ್ಯಾಚರಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಗೌರವಾರ್ಪಣೆ ಕಾರ್ಯಕ್ರಮವು ಸ‌ಅದಿಯ್ಯದ ಅಧ್ಯಕ್ಷ ಸಯ್ಯಿದ್ ಕೆ.ಎಸ್.ಆಟ್ಟಕೋಯ ತಂಙಳ್‌ರವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಮೌಲಾನಾ ಶಂಸುಲ್ ಹಖ್ ಖಾದಿರೀ ಉದ್ಘಾಟಿಸಲಿದ್ದಾರೆ.ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ದುಆ ನಡೆಸುವರು. ತಾಜುಶ್ಶರೀಅ ಅಲಿಕುಂಞಿ ಉಸ್ತಾದ್ ಆಶಂಸ ಭಾಷಣ ಹಾಗೂ ಕೂಟಂಬಾರ ಅಬ್ದುರ್ರಹ್ಮಾನ್ ದಾರಿಮಿ ಮುಖ್ಯ ಭಾಷಣ ಮಾಡುವರು. ಸಯ್ಯಿದ್ ಅತಾವುಲ್ಲ ತಂಙಳ್, ತಾಜುಲ್ ಫುಖ‌ಆ ಬೇಕಲ್ ಉಸ್ತಾದ್, ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್,ಎ.ಪಿ.ಅಬ್ದುಲ್ಲ ಮುಸ್ಲಿಯಾರ್ ಮಾಣಿಕೋತ್, ಲತೀಫ್ ಸಅದಿ ಪಯಶ್ಶಿ ಭಾಷಣ ಮಾಡಲಿದ್ದಾರೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.

error: Content is protected !! Not allowed copy content from janadhvani.com