janadhvani

Kannada Online News Paper

ರಿಯಾದ್: ಸಲ್ಮಾನ್ ರಾಜರು ಘೋಷಣೆ ಮಾಡಿದ ಲೆವಿ ವಿನಾಯ್ತಿಗಾಗಿ ಅರ್ಜಿ ಸಲ್ಲಿಸಬೇಕಾದ ರೀತಿಯನ್ನು ಕಾರ್ಮಿಕ ಸಚಿವಾಲಯ ವ್ಯಕ್ತಪಡಿಸಿದೆ.

ಸಂಸ್ಥೆಯ ಮಾಲೀಕನ ಬ್ಯಾಂಕ್ ಖಾತೆ ಮಾಹಿತಿ ಮತ್ತು IBAN ಸೇರಿದಂತೆ ಕಮರ್ಷಿಯಲ್ ನೋಂದಣಿ ಸಂಖ್ಯೆ ಸಹಿತ ಕಾರ್ಮಿಕ ಸಚಿವಾಲಯದ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಸಂಸ್ಥೆಯು ಒದಗಿಸಿದ ಮಾಹಿತಿಯನ್ನು ಖಜಿತಪಡಿಸಿದ ನಂತರ, 2018ರ ಕಾಲಾವಧಿಗೆ ಪಾವತಿಸಲಾದ ಮೊತ್ತವನ್ನು ಖಾತೆಗೆ ಹಿಂತಿರುಗಿಸಲಾಗುತ್ತದೆ.

ವ್ಯಕ್ತಿಗತ ಸಣ್ಣ ಉಧ್ಯಮ ಹೊಂದಿದವರು ತಮ್ಮ ಐಡಿ, ಬ್ಯಾಂಕ್ ಖಾತೆ ಮಾಹಿತಿ ಮತ್ತು IBAN ಸೇರಿದಂತೆ ಕಮರ್ಷಿಯಲ್ ನೋಂದಣಿ ಸಂಖ್ಯೆ ಸಹಿತ ಸಂಪೂರ್ಣ ಮಾಹಿತಿ ನೀಡಿದ ಬಳಿಕ ಸೌದಿ ಅರೇಬಿಯನ್ ಹಣಕಾಸು ಪ್ರಾಧಿಕಾರವು (ಸಾಮಾ) ಖಚತಪಡಿಸಿಕೊಂಡು ಪಾವತಿಸಿದ ಮೊತ್ತವನ್ನು ಹಿಂತಿರುಗಿಸಲಿದೆ.

ಸಂಸ್ಥೆಯ ಕಾರ್ಮಿಕ ಸಚಿವಾಲಯದ ನೋಂದಣಿಯಲ್ಲಿ ನಮೂದಿಸಲಾದ ಲೆವಿ ಎಂಬುದನ್ನು ವಿನಾಯಿತಿ ಪರಿಗಣಿಸಿ ಲೆವಿ ಬಾಬ್ತಿನಲ್ಲಿ ಉಳಿದಿರುವ ಮೊತ್ತ ಎಂದು ತಿದ್ದುಪಡಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ವಿನಾಯಿತಿ ಮಾಡಲಾಗುವ ಸಂಖ್ಯೆಯನ್ನು ಬಿಟ್ಟು ದಾಖಲೆಯಲ್ಲಿನ ಉಳಿದ ಮೊತ್ತವನ್ನು ಪ್ರದರ್ಶಿಸಲಾಗುತ್ತದೆ.ಸಂಖ್ಯೆಯಲ್ಲಿ ಭಿನ್ನಾಭಿಪ್ರಾಯವಿದ್ದರೆ ಅದಕ್ಕೂ ಆನ್ ಲೈನ್ ಸಿಸ್ಟಮ್ನಲ್ಲಿ ಉಪಾಯವಿರುತ್ತದೆ ಎಂದು ಸಚಿವಾಲಯ ತಿಳಿಸಿದೆ.

error: Content is protected !! Not allowed copy content from janadhvani.com