ರಿಯಾದ್: ಕಾರ್ಮಿಕ ಸಚಿವಾಲಯವು ವಿದೇಶಿ ಕಾರ್ಮಿಕರಿಗೆ ಏರ್ಪಡಿಸಿದ ಲೆವಿಯಲ್ಲಿ ವಿನಾಯ್ತಿ ನೀಡುವ ರಾಜರ ನಿರ್ಧಾರವು ಮೂರುವರೆ ಲಕ್ಷ ಖಾಸಗಿ ಸಂಸ್ಥೆಗಳಿಗೆ ವರದಾನವಾಗಲಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.
ಅಲ್ಲಿನ ರಾಜ ಸಲ್ಮಾನ್ ಅವರು ನೀಡಿದ ಘೋಷಣೆಯ ಬಳಿಕ 2018 ರಲ್ಲಿ ವಿಧಿಸಲಾದ ಲೆವಿಯನ್ನು ಮರಳಿಪಡೆಯುವ ಅಥವಾ ವಿನಾಯಿತಿ ಲಭಿಸುವ ಸಂವಿಧಾನ ಏರ್ಪಡಿಸಲಾಗಿದೆ. ಭಾಗಶಃ ಕಟ್ಟಿದವರಿಗೆ ಮರಳಿಸಲಿದ್ದು, ಉಳಿದ ಮೊತ್ತಕ್ಕೆ ವಿನಾಯಿತಿ ಲಭಿಸಲಿದೆ. ಲೆವಿ ಪಾವತಿಸದ, ನಿತಾಖಾತ್‌ನಲ್ಲಿ ಹಳದಿ, ಕೆಂಪು ವರ್ಗದ ಸಂಸ್ಥೆಗಳಿಗೆಸಂಪೂರ್ಣ ವಿನಾಯಿತಿ ಲಭಿಸಲಿದೆ
12 ತಿಂಗಳ ಲೆವಿ ರಿಯಾಯಿತಿ ಲಭಿಸಿದ ಕಾರಣ ಇಂತಹ ಸಂಸ್ಥೆಗಳು ನ್ಯಾಯಸಮ್ಮತವಾಗಿ ಮಾರ್ಪಡಬಹುದು.
ಕಾರ್ಮಿಕ ಸಚಿವಾಲಯವು ಲೆವಿ ಮರಳಿ ಪಡೆಯುವುದಕ್ಕೆ ಬೇಕಾದ ಅರ್ಜಿ ಸಲ್ಲಿಸುವ ವಿಧಾನವನ್ನು ಸ್ಪಷ್ಟಪಡಿಸಿದೆ.ಕಾರ್ಮಿಕ ಸಚಿವಾಲಯದ ಅಡಿಯಲ್ಲಿರುವ ‘ಹಾಫಿಝ್’ನ ಮೂಲಕ ಮೊತ್ತವನ್ನು ಮರಳಿಸಲಾಗುತ್ತಿದೆ.
ಸೌದಿ ಅರೇಬಿಯಾದಲ್ಲಿ ವಿದೇಶಿ ನೌಕರರಿಗೆ ವಿಧಿಸಲಾದ ಲೆವಿಯಿಂದಾಗಿ ಯಾತನೆ ಅನುಭವಿಸುವ ಖಾಸಗಿ ಸಂಸ್ಥೆಗಳಿಗೆ ಸಲ್ಮಾನ್ ರಾಜರು ಕಳೆದ ಶನಿವಾರ ವಿಶೇಷ ಆರ್ಥಿಕ ನೆರವು ಘೋಷಿಸಿದ್ದರು.
2018ರಲ್ಲಿ ಪಾವತಿಸಿದ ಲೆವಿಗೆ ಬದಲಾಗಿ ಈ ನೆರವು ಲಭಿಸಲಿದೆ. ಖಾಸಗಿ ವಲಯವನ್ನು ಬೆಂಬಲಿಸುವ ಮತ್ತು ಉತ್ತೇಜಿಸುವ ಭಾಗವಾಗಿ ಈ ನಡೆ ಎನ್ನಲಾಗಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ