janadhvani

Kannada Online News Paper

ದುಬೈ: ಯುಎಇಯಲ್ಲ ಪ್ರಾಯೋಜಕ ಮರಣಿಸಿದಲ್ಲಿ ಗೃಹ ಕಾರ್ಮಿಕರ ಒಪ್ಪಂದವನ್ನು ರದ್ದುಗೊಳಿಸಲಾಗುತ್ತದೆ ಎಂದು ಮಾನವ ಸಂಪನ್ಮೂಲ ಸಚಿವಾಲಯ ತಿಳಿಸಿದೆ.
ಅದೇರೀತಿ ನೌಕರನು ಚಿಕಿತ್ಸಾ ರಜೆಯಲ್ಲಿದ್ದರೆ ಪ್ರಾಯೋಜಕರಿಗೆ ಒಪ್ಪಂದವನ್ನು ರದ್ದುಗೊಳಿಸಲು ಅನುಮತಿ ಇದೆ ಎಂದು ಸಚಿವಾಲಯ ತಿಳಿಸಿದೆ.

ಉದ್ಯೋಗ ಒಪ್ಪಂದಗಳಿಗೆ ಪ್ರಥಮ ವ್ಯಕ್ತಿ ಪ್ರಾಯೋಜಕನಾಗಿರುವ ಕಾರಣ ಪ್ರಾಯೋಜಕನ ಮರಣದಿಂದ ಸ್ವಾಭಾವಿಕವಾಗಿ ಒಪ್ಪಂದ ರದ್ದುಗೊಳ್ಳುತ್ತದೆ ಎಂದು ಸಚಿವಾಲಯ ವ್ಯಕ್ತಪಡಿಸಿದೆ. ಆದಾಗ್ಯೂ, ಕೆಲಸಗಾರನಿಗೆ ಪ್ರಾಯೋಜಕರ ಮನೆಯಲ್ಲಿ ಕೆಲಸ ಮಾಡಲು ಆಸಕ್ತಿ ಇದ್ದರೆ, ಸಚಿವಾಲಯಕ್ಕೆ ತೆರಳಿ ಒಪ್ಪಂದದ ಅವಧಿಯನ್ನು ಪೂರ್ಣಗೊಳಿಸುವ ಕ್ರಮವನ್ನು ಪೂರ್ತಿಗೊಳಿಸಬೇಕು.

ವೈದ್ಯಕೀಯ ಪರೀಕ್ಷೆಯ ಫಲಿತಾಂಶವು ಕಾರ್ಮಿಕನು ಸೇವೆಯಲ್ಲಿ ಮುಂದುವರಿಯಲು ಅಸಾಧ್ಯ ಎಂದು ಸೂಚಿಸಿದರೆ ಪ್ರಾಯೊಜಕನಿಗೆ ಒಪ್ಪಂದವನ್ನು ಕೊನೆಗೊಳಿಸಬಹುದಾಗಿದ್ದು, 2017ನೇ ಹತ್ತನೇ ಫೆಡರಲ್ ಕಾರ್ಮಿಕ ಕಾನೂನಿನ ಅಡಿಯಲ್ಲಿ ವ್ಯವಸ್ಥೆಯಿದೆ ಎಂದು ಸಚಿವಾಲಯ ತಿಳಿಸಿದೆ.

ಕ್ರಿಮಿನಲ್ ಅಪರಾಧದ ಮೇಲೆ ನ್ಯಾಯಾಲಯ ಕಾರ್ಮಿಕನಿಗೆ ಶಿಕ್ಷೆ ವಿಧಿಸಿದರೆ,ಒಪ್ಪಂದದ ಅವಧಿಯಲ್ಲಿ ಹತ್ತು ದಿನಗಳು ಅನಧಿಕೃತವಾಗಿ ಕೆಲಸಕ್ಕೆ ಹಾಜರಾಗದಿದ್ದರೆ ಒಪ್ಪಂದವನ್ನು ರದ್ದುಮಾಡುವ ಹಕ್ಕನ್ನು ಮಾಲೀಕರು ಹೊಂದಿರುತ್ತಾನೆ ಎಂದು ಕಾನೂನು ಸೂಚಿಸುತ್ತದೆ.

error: Content is protected !! Not allowed copy content from janadhvani.com