janadhvani

Kannada Online News Paper

ಫೆಬ್ರವರಿ 13 ರಂದು ಜಾಮಿಅಃ ಸಅದಿಯ್ಯಃ ಗೋಲ್ಡನ್ ಜುಬಿಲಿ ಘೋಷಣಾ ಸಮಾವೇಶ

ಈ ವರದಿಯ ಧ್ವನಿಯನ್ನು ಆಲಿಸಿ


ಮಂಗಳೂರು: ಧಾರ್ಮಿಕ ಲೌಕಿಕ ಸಮನ್ವಯ ಶಿಕ್ಷಣದ ಮಾತೃಸಂಸ್ಥೆ ಜಾಮಿಅ ಸಅದಿಯ್ಯ ಅರಬಿಯ್ಯ ದೇಳಿ ಕಾಸರಗೋಡು ಇದರ ಸುವರ್ಣ ಮಹೋತ್ಸವ ಗೋಲ್ಡನ್ ಜುಬಿಲಿಯು 2019ನೇ ಡಿಸೆಂಬರ್ ತಿಂಗಳಲ್ಲಿ ನಡೆಯಲಿದ್ದು ಅದರ ಘೋಷಣಾ ಸಮಾವೇಶವು ಫೆಬ್ರವರಿ 13 ರಂದು ಬುಧವಾರ ಬೆಳಿಗ್ಗೆ 10.30ಕ್ಕೆ ಸರಿಯಾಗಿ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.

ಜಾಮಿಅ ಸಅದಿಯ್ಯ ಅಧ್ಯಕ್ಷರಾದ ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಮೌಲಾನ ಶಂಸುಲ್ ಹಕ್ಕ್ ಅಲ್ ಕಾದಿರಿ ಬೆಂಗಳೂರು ಉದ್ಘಾಟಿಸಲಿದ್ದಾರೆ.

ಸಅದಿಯ್ಯ ಪ್ರ.ಕಾರ್ಯದರ್ಶಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ದುವಾ ನೆರವೇರಿಸಲಿರುವರು. ಸಮಸ್ತ ಮುಶಾವರ ಉಪಾಧ್ಯಕ್ಷರಾದ ತಾಜುಶ್ಶರೀಅ ಅಲಿಕುಂಞಿ ಉಸ್ತಾದ್ ಶಿರಿಯ, ಕರ್ನಾಟಕ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ತಾಜುಲ್ ಫುಖಹಾಅ್ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಆಶೀರ್ವಚನ ನೀಡುವರು. ಸಅದಿಯ್ಯ ಮುಖ್ಯಸ್ಥರಾದ ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕೋತ್, ಕೆ.ಪಿ. ಅಬೂಬಕರ್ ಮುಸ್ಲಿಯಾರ್ ಪಟ್ಟುವಂ, ಶರಫುಲ್ ಉಲಮಾ ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ, ಝೈನುಲ್ ಉಲಮಾ ಹಮೀದ್ ಮುಸ್ಲಿಯಾರ್ ಮಾಣಿ, ಸಅದಿಯಾ ಪ್ರೊಫೆಸರ್ ಕೆ.ಪಿ.ಹುಸೈನ್ ಸಅದಿ ಕೆ.ಸಿ. ರೋಡ್ ಪ್ರವಚನ ನೀಡಲಿದ್ದಾರೆ.

ವಿದ್ಯಾಭ್ಯಾಸ, ಆರೋಗ್ಯ ಮತ್ತು ಜೀವ ಕಾರುಣ್ಯ ಕ್ಷೇತ್ರಗಳಲ್ಲಿ ನೀಡಿರುವ ಅಪಾರ ಸೇವೆಯನ್ನು ಗುರುತಿಸಿ ಯನೆಪೋಯ ಯೂನಿವರ್ಸಿಟಿಯ ಕುಲಾಧಿಪತಿಗಳಾದ ವೈ.ಎಂ.ಕೆ ಅಬ್ದುಲ್ಲ ಕುಂಞಿ ಹಾಜಿಯವರನ್ನು ಗೌರವಿಸಲಾಗುವುದು.

ಕಾರ್ಯಕ್ರಮದಲ್ಲಿ ಕೂಟಂಬಾರ ಅಬ್ದುರ್ರಹ್ಮಾನ್ ದಾರಿಮಿ, ಅಬ್ದುಲ್ಲತೀಫ್ ಸಅದಿ ಪಯಷಿ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ. ಎಸ್.ವೈ.ಎಸ್ ಪ್ರ.ಕಾರ್ಯದರ್ಶಿ ಡಾ| ಎಂ.ಎಸ್.ಎಂ ಝೈನಿ ಕಾಮಿಲ್, ಮುಸ್ಲಿಂ ಜಮಾಅತ್ ಪ್ರ.ಕಾರ್ಯದರ್ಶಿ ಎನ್.ಕೆ.ಎಂ ಶಾಫಿ ಸಅದಿ ಬೆಂಗಳೂರು ವಿವಿಧ ವಿಷಯಗಳಲ್ಲಿ ಮಾತನಾಡುವರು. ಕೆ.ಸಿ.ಎಫ್ ಅಂತರಾಷ್ಟ್ರೀಯ ಅಧ್ಯಕ್ಷ ಎಸ್.ಪಿ ಹಂಝ ಸಖಾಫಿ ಬಂಟ್ವಾಳ, ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಜಿ.ಎಂ ಕಾಮಿಲ್ ಸಖಾಫಿ, ಎಸ್.ಎಂ.ಎ ರಾಜ್ಯಾಧ್ಯಕ್ಷ ಸಯ್ಯಿದ್ ಜಲಾಲುದ್ದೀನ್ ತಂಙಳ್ ಮಲ್ಜಅ್, ಎಸ್.ಎಸ್.ಎಫ್ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಕೆ.ಎಂ ಅಬೂಬಕರ್ ಸಿದ್ದೀಖ್ ಮೋಂಟುಗೋಳಿ, ಎಸ್.ಜೆ.ಎಂ ರಾಜ್ಯಾಧ್ಯಕ್ಷ ಆತೂರು ಸಅದ್ ಮುಸ್ಲಿಯಾರ್, ಎಸ್.ಎಂ.ಎ ಪ್ರ.ಕಾರ್ಯದರ್ಶಿ ಅಬ್ದುರ್ರಹ್ಮಾನ್ ಮದನಿ ಜೆಪ್ಪು ಎಸ್.ಇ.ಡಿ.ಸಿ ಅಧ್ಯಕ್ಷ, ಕೆ.ಕೆ.ಎಂ ಕಾಮಿಲ್ ಸಖಾಫಿ, ಎಸ್.ಎಸ್.ಎಫ್ ರಾಜ್ಯಾಧ್ಯಕ್ಷ ಸಯ್ಯಿದ್ ಸಿ.ಟಿ.ಎಂ ಉಮರ್ ಅಸ್ಸಖಾಫ್ ತಂಙಳ್, ಸಯ್ಯಿದ್ ಇಬ್ರಾಹೀಂ ಪೂಕುಂಞಿ ತಂಙಳ್ ಕಲ್ಲಕಟ್ಟ, ಸಯ್ಯಿದ್ ಆಟಕೋಯ ತಂಙಳ್ ಪಂಜಿಕಲ್ಲು, ಮಾಜಿ ಶಾಸಕ ಬಿ.ಎ ಮೊಯ್ದಿನ್ ಬಾವ, ಕಣಚೂರು ಗ್ರೂಪ್ ಅಧ್ಯಕ್ಷ ಮೋನು ಹಾಜಿ ಕಣಚೂರು, ಮುಕ್ರಿ ಇಬ್ರಾಹೀಂ ಹಾಜಿ, ಅಬ್ದುಲ್ ಹಕೀಂ ಹಾಜಿ ಕಳನಾಡ್, ಲಂಡನ್ ಮುಹಮ್ಮದ್ ಹಾಜಿ, ಮುಲ್ಲಚ್ಚೇರಿ ಅಬ್ದುಲ್ ಖಾದರ್ ಹಾಜಿ, ಉಮರ್ ಹಾಜಿ ರಾಜ್ಕಮಲ್, ಹಾಜಿ ಮುಮ್ತಾಝ್ ಅಲಿ ಕೃಷ್ಣಾಪುರ ಮತ್ತಿತರರು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಹಾಫಿಳ್ ಯಾಕೂಬ್ ಸಅದಿ ನಾವೂರು(ಜನರಲ್ ಕನ್ವೀನರ್ ಘೋಷಣಾ ಸಮಾವೇಶ ಸಮಿತಿ),ಇಸ್ಮಾಯಿಲ್ ಸಅದಿ ಉರುಮಣೆ(ಪ್ರ.ಕಾರ್ಯದರ್ಶಿ ಸಅದೀಸ್ ಅಸೋಸಿಯೇಶನ್, ದ.ಕ.ಜಿಲ್ಲೆ), ಹಾಜಿ ಮೊದಿನ್ ಅಲ್ ಸಫರ್ ಮುಕ್ಕ (ಉಪಾಧ್ಯಕ್ಷರು ಸಅದಿಯಾ ಪ್ರಚಾರ ಸಮಿತಿ), ಕೆ.ಎಸ್. ಮೊದಿನ್ ಬಾವ ಹಾಜಿ ತಲಪಾಡಿ(ಅಧ್ಯಕ್ಷರು ಸಅದಿಯಾ ಮಂಗಳೂರು ಟೌನ್ ಕಮಿಟಿ), ರಿಯಾಝ್ ಸಅದಿ ಗುರುಪುರ (ಕಾರ್ಯದರ್ಶಿಘೋಷಣಾ ಸಮಾವೇಶ ಸಮಿತಿ)ಮುಂತಾದವರು ಭಾಗವಹಿಸಿದ್ದರು.

error: Content is protected !! Not allowed copy content from janadhvani.com