janadhvani

Kannada Online News Paper

ಮಕ್ಕಾ: ಮಕ್ಕಾ -ಮದೀನಾ ನಗರಗಳನ್ನು ಸಂಪರ್ಕಿಸುವ ಹರಮೈನ್ ಹೈ ಸ್ಪೀಡ್ ರೈಲ್ವೆಯ ಸೇವೆಗಳು ಇನ್ನು ಮುಂದೆ ಬುಧವಾರ ಕೂಡ ಲಭ್ಯವಾಗಲಿದ್ದು, ಈ ತಿಂಗಳ 13 ರಂದು ಬುಧವಾರದ ರೈಲು ಸೇವೆ ಪ್ರಾರಂಭವಾಗಲಿದೆ.

ಅಧಿಕಾರಿಗಳು ಹರಮೈನ್ ಹೈಸ್ಪೀಡ್ ರೈಲ್ವೆಯ ಯಾತ್ರಿಕರಲ್ಲಿ ಅಭಿಪ್ರಾಯ ಸರ್ವೇ ನಡೆಸಿದ್ದು, ಅದರ ಆಧಾರದಲ್ಲಿ ಬುಧವಾರ ಕೂಡ ಸೇವೆ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಸ್ಪೀಡ್ ರೈಲ್ ಕಾರ್ಯಾಚರಣೆ ಮತ್ತು ನಿರ್ವಹಣೆ ಇಲಾಖೆಯ ನಿರ್ದೇಶಕ ಜನರಲ್ ಇಂಜಿನೀಯರ್‌ ರಯಾನ್ ಅಲ್ ಹರ್ಬಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಗುರುವಾರ, ಶುಕ್ರವಾರ, ಶನಿವಾರ ಮತ್ತು ರವಿವಾರಗಳಲ್ಲಿ ಕಾರ್ಯಾಚರಿಸುತ್ತಿರುವ ಹರಮೈನ್ ಹೈ ಸ್ಪೀಡ್ ರೈಲು ಇನ್ನು ಮುಂದೆ ಬುಧವಾರ ಕೂಡ ಲಭ್ಯವಾಗಲಿದೆ. 453 ಕಿಮೀ ವ್ಯಾಪ್ತಿಯನ್ನು ಹೊಂದಿರುವ ಹರಮೈನ್ ಹೈ ಸ್ಪೀಡ್ ರೈಲ್ವೆ, ಮಕ್ಕಾ, ಜಿದ್ದಾ, ರಾಬಿಗ್ ಮತ್ತು ಮದೀನಾ ನಗರಗಳನ್ನು ಸಂಪರ್ಕಿಸುತ್ತದೆ.
ಬುಧವಾರ, ಮದೀನಾದಿಂದ ಮಕ್ಕಾಕ್ಕೆ ಮತ್ತು ಮಕ್ಕಾದಿಂದ ಮದೀನಾಗೆ ಎಂಟು ಸರ್ವೀಸ್‌ಗಳು ಲಭ್ಯವಿದೆ.

ಬುಧವಾರ ಕೂಡ ಪ್ರಾರಂಭವಾಗುವ ಸೇವೆಗಳೊಂದಿಗೆ, ಹರಮೈನ್ ಹೈ ಸ್ಪೀಡ್ ರೈಲ್ವೆಯ ಸಾಪ್ತಾಹಿಕ ಸೇವೆಗಳು 40ಕ್ಕೆ ಏರಲಿದೆ.ಮುಂದಿನ ರಮಝಾನ್‌ನಿಂದ ವಾರದ ಏಳು ದಿನಗಳು ಕೂಡ ರೈಲು ಓಡಾಡಲಿದೆ ಎಂದು ರಯಾನ್ ಅಲ್ ಹರ್ಬಿ ಹೇಳಿದ್ದಾರೆ.

error: Content is protected !! Not allowed copy content from janadhvani.com