ಕುವೈತ್ ಸಿಟಿ: ದೇಶದ 58ನೇ ಸ್ವಾತಂತ್ರ್ಯೋತ್ಸವ, 28 ನೇ ವಿಮೋಚನಾ ಉತ್ಸವ ಮತ್ತು ಅಮೀರರು ಅಧಿಕಾರಕ್ಕೇರಿದ 13 ನೇ ವಾರ್ಷಿಕೋತ್ಸವ ಆಚರಣೆಯ ಭಾಗವಾಗಿ ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಬಾವುಟವನ್ನು ಹಾರಿಸಿ ಕುವೈತ್ ಗಿನ್ನೆಸ್ ದಾಖಲೆ ಬರೆದಿದೆ.
ಮುಬಾರಕ್ ಅಲ್ ಕಬೀರ್ ವಿದ್ಯಾಲಯದ ವಿದ್ಯಾರ್ಥಿಗಳು, ಅಧ್ಯಾಪಕರು ಸೇರಿದಂತೆ 4000 ಜನರ ಸಹಭಾಗಿತ್ವದಲ್ಲಿ ಈ ಬಾವುಟವನ್ನು ನಿರ್ಮಿಸಲಾಗಿದೆ. 2019 ಮೀಟರ್ ಉದ್ದವಿರುವ ಈ ಬಾವುಟವು ರವಿವಾರ ನಡೆದ ಕಾರ್ಯಕ್ರಮದಲ್ಲಿ ಅನಾವರಣಗೊಂಡಿತು.
ಕುವೈತ್ ವಿದ್ಯಾಭ್ಯಾಸ ಸಚಿವ ಡಾ. ಹಾಮಿದ್ ಅಲ್ ಆಸಿಮಿ ಅವರ ಮುಂದಾಳುತ್ವದಲ್ಲಿ,ಸರಕಾರಿ ಕಾರ್ಯಕ್ರಮಗಳು ನಡೆಯುವ ಸಬ್ಹಾನಿನಲ್ಲಿ ನಡೆಯಿತು.
ರಕ್ಷಣಾ ಸಚಿವ ಶೈಖ್ ನಾಸರ್ ಅಲ್ ಸಬಾಹ್, ಗೃಹಸಚಿವ ಶೈಖ್ ಖಾಲಿದ್ ಅಲ್ ಜರ್ರಾಹ್ ಅಲ್ ಸಬಾಹ್ ಹಾಗೂ ಗಿನ್ನೆಸ್ ದಾಖಲೆಗೊಳಿಸಲಿರುವ ಅಧಿಕಾರಿಗಳೂ ಭಾಗವಹಿಸಿದ್ದರು.