janadhvani

Kannada Online News Paper

ಭಾರತೀಯ ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸಲು ಸೌದಿ ತಲುಪಿದ ವಿದೇಶಾಂಗ ಸಹ ಮಂತ್ರಿ

ರಿಯಾದ್: ರಿಯಾದಿನ ಜೆ ಆ್ಯಂಡ್ ಪಿ ಕಂಪನಿಯಲ್ಲಿರುವ ಭಾರತೀಯ ಕಾರ್ಮಿಕರ ಕೆಲಸದ ಬಗೆಗಿನ ಸಮಸ್ಯೆಗೆ ಪರಿಹಾರ ಕಾಣುವ ಸಲುವಾಗಿ ಕೇಂದ್ರ ವಿದೇಶಾಂಗ ಸಹ ಸಚಿವ ವಿ.ಕೆ.ಸಿಂಗ್ ರಿಯಾದ್ ತಲುಪಿದ್ದಾರೆ.

ಸೌದಿ ಅರೇಬಿಯಾದಲ್ಲಿನ ಭಾರತದ ರಾಯಭಾರಿ ಅಹ್ಮದ್ ಜಾವೇದ್, ಡಿಸಿಎಂ ಡಾ. ಹುಸೈನ್ ಅಜಾಝ್ ಖಾನ್ ಇತರ ಹಿರಿಯ ಅಧಿಕಾರಿಗಳು ಸೇರಿ ಸಚಿವರನ್ನು ಸ್ವೀಕರಿಸಿದರು.

ಕಾರ್ಮಿಕರ ಸಮಸ್ಯೆಗೆ ಪರಿಹಾರ ಕಾಣುವ ಸಲುವಾಗಿ ಸಚಿವರು, ಸೌದಿ ಕಾರ್ಮಿಕ, ಸಾಮಾಜಿಕ ಸಚಿವ ಅಹ್ಮದ್ ಸುಲೈಮಾನ್ ಅಲ್ ರಾಜ್ಹಿ, ಗೃಹಖಾತೆಯ ಸಹಸಚಿವ ನಾಸರ್ ಬಿನ್ ಅಬ್ದುಲ್ ಅಝೀಝ್ ಜೊತೆ ಮಾತುಕತೆ ನಡೆಸಿದರು.

ಅಂಬಾಸಿಡರ್ ಅಹ್ಮದ್ ಜಾವಿದ್, ಡಾ. ಹುಸೈನ್ ಅಜಾಝ್ ಖಾನ್ ಸಭೆಯಲ್ಲಿ ಉಪಸ್ಥಿತರಿದ್ದರು.
ಲ್ಯಾಬ್ ಸಂದರ್ಶಿಸಿದ ಸಚಿವರು, ಕಾರ್ಮಿಕರಿಂದ ವಿವರಗಳನ್ನು ಪಡೆದರು. ಸಂಬಳ ಮತ್ತು ಕೆಲಸವೂ ಇಲ್ಲದೆ ಸುಮಾರು 800 ಕಾರ್ಮಿಕರು ಕ್ಯಾಂಪ್ನಲ್ಲಿ ಉಳಿದುಕೊಂಡಿದ್ದಾರೆ. ಇವರ ಪೈಕಿ ಹೆಚ್ಚಿನವರ ಇಖಾಮಾ ಕಾಲಾವಧಿ ಮುಗಿದಿರುವ ಕಾರಣ ಊರಿಗೆ ಮರಳುವುದೂ ಕಷ್ಟಕರವಾಗಿದೆ. ಈ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ಗೆ ಮಾಹಿತಿ ನೀಡಿದಾಗ ಅವರು, ಪ್ರತ್ಯೇಕ ನಿರ್ದೇಶನ ನೀಡಿ ಸಹ ಸಚಿವ ವಿ.ಕೆ.ಸಿಂಗ್‌ರನ್ನು ಸೌದಿ ಅರೇಬಿಯಾಗೆ ಕಳುಹಿಸಿದ್ದರು.

error: Content is protected !! Not allowed copy content from janadhvani.com