janadhvani

Kannada Online News Paper

ಅಬುಧಾಬಿ: ಭಾರತದ ಹೊರಗೆ ಪ್ರಕಾಶನವಾಗುತ್ತಿರುವ ಪ್ರಪ್ರಥಮ ಕನ್ನಡ ಮಾಸಿಕ ಗಲ್ಫ್ ಇಶಾರ ನಾಲ್ಕನೇ ಚಂದಾ ಅಭಿಯಾನದ ಪ್ರಯುಕ್ತ ಹಮ್ಮಿಕೊಂಡ “ಇಶಾರ ಡೇ” ಯುಎಇಯಾದ್ಯಂತ ಚರಿತ್ರೆಯನ್ನು ಸೃಷ್ಟಿಸಿ ಮುನ್ನುಗ್ಗಿದ್ದು, ಅನಿವಾಸಿ ಕನ್ನಡಿಗರಲ್ಲಿ ಹೊಸ ಸಂಚಲನ ಮೂಡಿಸಿತು, ಫೆಬ್ರವರಿ ಒಂದು ಶುಕ್ರವಾರ ಇಡೀ ಯುಎಇ ರಾಷ್ಟ್ರಾದ್ಯಂತ ಕನ್ನಡಿಗರದ್ದೆ ಕಾರುಬಾರು, ಮೂಲೆ ಮೂಲೆಗಳಲ್ಲಿ ಕನ್ನಡ ಮಾಸಿಕದ ಹವಾ ಬೀಸುತ್ತಿತ್ತು.

ಕರ್ನಾಟಕ ಕಲ್ಚರಲ್ ಫೌಂಡೇಷನ್ – ಕೆಸಿಎಫ್ ಯುಎಇ ಸಮಿತಿಯ ಅಧೀನದಲ್ಲಿ ಯುಎಇ ಯಲ್ಲಿ ಪ್ರಕಾಶನ ಗೊಳ್ಳುತ್ತಿರುವ ಗಲ್ಫ್ ಇಶಾರ ಮಾಸಿಕದ ಚಂದಾ ಅಭಿಯಾನಕ್ಕೆ ಕೈ ಜೋಡಿಸಿ ಕೆಸಿಎಫ್ ಕಾರ್ಯಕರ್ತರುಗಳು ಫೀಲ್ಡ್ ಗೆ ಇಳಿದಾಗ ಅನಿವಾಸಿ ಕನ್ನಡಿಗರು ಚಂದಾದಾರರಾಗಲು ಮುಗಿ ಬಿದ್ದು ಅಕ್ಷರಶ ಯುಎಇ ಯಲ್ಲೊಂದು ಕನ್ನಡ ಜಾತ್ರೆಯ ಅನುಭೂತಿಯನ್ನು ನೀಡಿತು. ರಾಜಧಾನಿ ಅಬುಧಾಬಿಯಿಂದ ಹಿಡಿದು, ಮಾಂತ್ರಿಕ ನಗರ ದುಬೈ, ಅರಬ್ ಸಾಂಸ್ಕೃತಿಕ ರಾಜಧಾನಿ ಶಾರ್ಜಾ, ಪುರಾತನ ನಗರಿ ಅಜ್ಮಾನ್, ಗುಡ್ಡಗಳ ಬೀಡು ಫುಜೈರಃ ಮತ್ತು ರಾಸಲ್ ಖೈಮಾ, ಕಲ್ಬಾ, ದಿಬ್ಬ, ಉಮ್ಮುಲ್ ಕ್ವೀನ್ ಸೇರಿದಂತೆ ಯುಎಇಯಾದ್ಯಂತ ಅಕ್ಷರ ಮೈತ್ರಿ ಅಭಿಯಾನದ ಜೋಶ್ ಮುಗಿಲು ಮುಟ್ಟಿತ್ತು. ಮಾಲ್, ಅಂಗಡಿ, ರೆಸ್ಟೋರೆಂಟ್, ಆಸ್ಪತ್ರೆ, ಹೋಟೆಲ್ ಗಳಲ್ಲಿರುವಂತಹ ಪ್ರತಿಯೊಬ್ಬ ಕನ್ನಡಿಗನನ್ನು ಭೇಟಿಯಾಗಿ ಕನ್ನಡ ಮಾಸಿಕ ಗಲ್ಫ್ ಇಶಾರವನ್ನು ಪರಿಚಯ ಪಡಿಸಿದಾಗ ಖ್ಯಾತ ಉದ್ಯಮಿಗಳು, ಸಾಮಾಜಿಕ ಕಾರ್ಯಕರ್ತರುಗಳು, ಸಾಂಘಿಕ ನಾಯಕರುಗಳು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರುಗಳು ಅಭಿಯಾನಕ್ಕೆ ಕೈ ಜೋಡಿಸಿದ್ದು ಕೆಸಿಎಫ್ ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸನ್ನು ನೀಡಿದೆ.

ಅಧಿಕೃತವಾಗಿ ಸರ್ಕಾರದ ಅನುಮತಿಯೊಂದಿಗೆ ಕರ್ನಾಟಕ ರಾಜ್ಯ ವಿಧಾನಸಭೆಯ ಅಧ್ಯಕ್ಶರಾಗಿದ್ದ ಹಿರಿಯ ರಾಜಕಾರಿಣಿ ಸನ್ಮಾನ್ಯ ಕಾಗೋಡು ತಿಮ್ಮಪ್ಪರವರಿಂದ ಲೋಕಾಪರ್ಣೆಗೊಂಡ ಗಲ್ಫ್ ಇಶಾರ, ಮೊದಲನೇ ವಾರ್ಷಿಕೋತ್ಸವದಲ್ಲಿ ಇಂದಿನ ಮುಖ್ಯಮಂತ್ರಿ ಆಗಿರುವ ಸನ್ಮಾನ್ಯ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಸಾಮಾಜಿಕ ರಾಜಕೀಯ ಮುಂದಾಳುಗಳ ಪ್ರಶಂಸೆಯನ್ನು ಪಡೆದಿದೆ.

ಯಶಸ್ವಿ ಮೂರು ವರ್ಷ ದಾಟಿ ನಾಲ್ಕನೇ ವರ್ಷಕ್ಕೆ ಪದಾರ್ಪಣೆಗೊಂಡ ಗಲ್ಫ್ ಇಶಾರ ಚಂದಾ ಅಭಿಯಾನ ಯುಎಇ ಯಾದ್ಯಂತ “ವಿಜ್ಞಾನ ಕ್ರಾಂತಿಯ ಬರಹ ರೂಪ ಅಕ್ಷರ ಮೈತ್ರಿ ಅಭಿಯಾನ 2019” ಈಗಾಗಲೇ ನಡೆಯುತ್ತಿದ್ದು ಯುಎಇ ಯಲ್ಲಿರುವ ಸರ್ವ ಅನಿವಾಸಿ ಕನ್ನಡಿಗರು ಇದರ ಸದುಪಯೋಗ ಪಡೆಯಬೇಕೆಂದು ಕೆಸಿಎಫ್ ಯುಎಇ ಪ್ರಕಾಶ ವಿಭಾಗವು ವಿನಂತಿಸಿ ಕೊಂಡಿದೆ, ಆಯಾ ಎಮಿರೇಟ್ಸ್ ಗಳಲ್ಲಿ ಚಂದಾದಾರರಾಗಲು ಈ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಬಹುದು.

ಅಬುಧಾಬಿ
ಹಮೀದ್ ಮುಸ್ಲಿಯಾರ್ : 0558745486
ಅಶ್ರಫ್ ಸರಳೀಕಟ್ಟೆ : 0505615690

ಶಾರ್ಜಾ
ಹುಸೈನ್ ಇನೋಳಿ 0508483722
ಅಬ್ದುಲ್ ಕರೀಂ : 0508885916

ದುಬೈ ನಾರ್ತ್
ಮಜೀದ್ ಮಂಜನಾಡಿ : 0555369282
ರಹ್ಮಾನ್ ಉಪ್ಪಳ : 0502885065

ದುಬೈ ಸೌತ್
ಆಸಿಫ್ ಇಂದ್ರಾಜೆ : 0567453522
ಮುಹಮ್ಮದ್ ಅಲಿ : 0508908878

ಅಜ್ಮಾನ್
ಖಾದರ್ : 0524164437
ಮುಜೀಬ್ ಸಅದಿ :0568369910.

ಅಲ್ ಐನ್
ಮುನೀರ್ : 0558729460
ಫೈಝಲ್ : 0552890030

ರಾಸಲ್ ಖೈಮಾ
ಮುಸ್ಥಾಕ್ : 0525508016
ಹಸನ್ : 0529823402

ಫುಜೈರಃ
ಮನ್ಸೂರ್ : 0552869442
ಹಂಝ : 0503309168

ಉಮ್ಮುಲ್ ಕ್ವೀನ್
ಸಿದ್ದೀಕ್ ಅಮಾನಿ : 0522705036
ಆದಂ : 0558163394

error: Content is protected !! Not allowed copy content from janadhvani.com