janadhvani

Kannada Online News Paper

ಕುವೈತ್: ಕುಟುಂಬ ವಿಸಾಕೆ ವಿಮಾ ಠೇವಣೆ ಅಗತ್ಯವಿಲ್ಲ

ಕುವೈಟ್ ಸಿಟಿ: ಕುಟುಂಬ ವಿಸಾದಲ್ಲಿ ಹೆಂಡತಿ, ಮಕ್ಕಳನ್ನು ಹೊರತುಪಡಿಸಿ ಕುಟುಂಬದವರನ್ನು ಕರೆ ತರಲು ಖಾಸಗಿ ವಿಮಾ ಕಂಪೆನಿಯಲ್ಲಿ ಪ್ರೀಮಿಯಂ ಪಾವತಿಸಬೇಕೆಂಬ ನಿಬಂಧನೆಯನ್ನು ಕೈಬಿಡಲಾಗಿದೆ. 2017 ರಲ್ಲಿ ಈ ನಿಬಂಧನೆ ತರಲಾಗಿದ್ದು, ಆ ಪ್ರಕಾರ ಮಾತಾ ಪಿತರು, ಒಡಹುಟ್ಟಿದವರು ಮುಂತಾದವರನ್ನು ಕರೆತರುವುದಕ್ಕೆ 3,000 ದಿನಾರ್‌ಗಳನ್ನು ಖಾಸಗಿ ವಿಮೆ ಕಂಪೆನಿಗಳಲ್ಲಿ ಪಾವತಿಸುವುದು ಖಡ್ಡಾಯವಾಗಿತ್ತು.

ಬದಲಾಗಿ ಪ್ರೀಮಿಯಂ 50 ದಿನಾರ್ ಮತ್ತು ಒಂದು ವರ್ಷದ ವಾಸಕ್ಕಾಗಿ 200 ದಿನಾರ್ ಪಾವತಿಸಿದರೆ ಕುಟುಂಬದ ವೀಸಾ ಪಡೆಯಲು ಸಾಧ್ಯವಾಗಲಿದೆ ಎಂದು ಸಂಬಂಧಪಟ್ಟ ವಿಭಾಗದ ಅಂಡರ್ ಸೆಕ್ರೆಟರಿ ಮೇಜರ್ ಜನರಲ್ ತಲಾಲ್ ಅಲ್ ಮರಾಫಿ ಹೇಳಿದರು.

2017 ರ ನಿರ್ಧಾರದ ನಂತರ ಪತ್ನಿ/ಮಕ್ಕಳಲ್ಲದ ಕುಟುಂಬ ಸಂಬಂಧಿಗಳಿಗೆ ವೀಸಾವನ್ನು ಪಡೆಯಲು ಖಾಸಗಿ ವಿಮಾ ಕಂಪೆನಿಗೆ ಪಾವತಿಸಿದ ಪ್ರೀಮಿಯಂನ್ನು ಚಿಕಿತ್ಸೆಗಾಗಿ ಉಪಯೋಗಿಸದಿದ್ದಲ್ಲಿ ಅದನ್ನು ಹಿಂದಕ್ಕೆ ಪಡೆಯಲು ಪ್ರಯತ್ನಿಸಬಹುದು ಎಂದು ಸೂಚಿಸಲಾಗಿದೆ.

error: Content is protected !! Not allowed copy content from janadhvani.com