janadhvani

Kannada Online News Paper

ಸಂಘಟನಾ ಚಟುವಟಿಕೆಗಳು ಪ್ರತಿಯೊಂದು ವರ್ಗಕ್ಕೂ ತಲುಪಬೇಕು -ಹಾಫಿಲ್ ಸುಫ್ಯಾನ್ ಸಖಾಫಿ

ಬನ್ನೂರು: ಎಸ್ಸೆಸ್ಸೆಫ್ ಬನ್ನೂರು ಶಾಖೆಯ ವತಿಯಿಂದ ಎಸ್ಸೆಸ್ಸೆಫ್ ರಾಜ್ಯಸಮಿತಿಗೆ ನೂತನ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಹಾಫಿಲ್ ಸುಫಿಯಾನ್ ಸಖಾಫಿಯವರಿಗೆ ಅಭಿನಂಧನಾ ಕಾರ್ಯಕ್ರಮವು ಶಾಖಾಧ್ಯಕ್ಷರಾದ ಅಶ್ರಫ್ ಝುಹ್ರಿಯವರ ಅಧ್ಯಕ್ಷತೆಯಲ್ಲಿ ಬನ್ನೂರು ಸುನ್ನೀ ಸೆಂಟರ್ ನಲ್ಲಿ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಪ್ರಥಮವಾಗಿ ರಾಜ್ಯದ ಒಂದನೇ ಶಾಖೆಯಲ್ಲಿ ಸನ್ಮಾನ ಸ್ವೀಕರಿಸಲು ಸಂತೋಷವಾಗುತ್ತಿದೆ ಎಂದರಲ್ಲದೆ, ಇಖ್ಲಾಸ್ ನಿಂದ ಕೂಡಿದ ಕಾರ್ಯ ಚಟುವಟಿಕೆ ನಮ್ಮದಾಗಬೇಕು ಎಂದರು.
ನಮ್ಮ ಕಾರ್ಯಾಚರಣೆಗಳು ಊರಿನ ಜಾತಿ,ಮತ ನೋಡದೆ ಪ್ರತಿಯೊಂದು ವರ್ಗಕ್ಕೂ ತಲುಪಬೇಕು ಆ ನಿಟ್ಟಿನಲ್ಲಿ ಕಾರ್ಯಕರ್ತರೆಲ್ಲರೂ ಕಾರ್ಯಪ್ರವ್ರತ್ತರಾಗಬೇಕು ಎಂದರು. ಅನಾವಶ್ಯಕ ಚಟುವಟಿಕೆಗಳಿಂದ ದೂರ ಇದ್ದು ಒಳಿತಿನ ಹಾದಿಗೆ ಮುನ್ನುಗ್ಗಿ ಮಾದರೀ ಯುವ ಸಮೂಹ ನಾವಾಗಬೇಕೆಂದರು.

ಎಸ್ಸೆಸ್ಸೆಫ್ ರಾಜ್ಯ ಸಮಿತಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಹಾಫಿಲ್ ಸುಫಿಯಾನ್ ಸಖಾಫಿ ಹಾಗೂ ಕಾರ್ಯದರ್ಶಿಯಾಗಿ ಆಯ್ಕೆಯಾದ ನವಾಝ್ ಭಟ್ಕಳ ರವರನ್ನು ಬನ್ನೂರು ಶಾಖಾ ಕಾರ್ಯಕರ್ತರು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಬನ್ನೂರು ಶಾಖಾ ಉಪಾಧ್ಯಕ್ಷರಾದ ಹನೀಫ್,ಕಾರ್ಯದರ್ಶಿ ಹಕ್ಕ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಶಾಖಾ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಸ್ವಾಗತಿಸಿ ಖಾದಿಸಿಯ್ಯ ಕಾವಲ್ ಕಟ್ಟೆ ವಿದ್ಯಾರ್ಥಿ ಬನ್ನೂರು ಶಾಖಾ ಸದಸ್ಯರಾದ ಮುಹಮ್ಮದ್ ಫಾರೂಕ್ ವಂದಿಸಿದರು.

ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ವತಿಯಿಂದ ಜನವರಿ 10 ರಿಂದ ಫೆಬ್ರವರಿ 7 ರ ತನಕ ನಡೆಯಲಿರುವ ಹಿಂಧ್ ಸಫರ್ ಯಾತ್ರೆ ಫೆಬ್ರವರಿ 5 ರಂದು ಪುತ್ತೂರು ತಲುಪಲಿದ್ದು ಈ ಕಾರ್ಯಕ್ರಮ ವನ್ನು ಯಶಸ್ವಗೊಳಿಸಲು ಕರೆ ನೀಡಿದರು.

error: Content is protected !! Not allowed copy content from janadhvani.com