janadhvani

Kannada Online News Paper

ಫೆ.5 ರಂದು ಪುತ್ತೂರಿನ ಚರಿತ್ರೆಗೆ ಹೊಸ ಭಾಷ್ಯವನ್ನು ಬರೆಯಲಿರುವ ಹಿಂದ್ ಸಫರ್!

🖋ಸ್ನೇಹಜೀವಿ ಅಡ್ಕ

ಎಸ್ಸೆಸ್ಸಫ್!
ಕೇಳುವಾಗಲೇ ಅದೇನೋ ಒಂದು ರೀತಿಯ ಆವೇಶ. ಪುತ್ತೂರಿನ ನವ ತರುಣರಿಗಂತೂ ಅದೇನೋ ಒಂದು ರೀತಿಯ ಹುರುಪು, ಆಹ್ಲಾದ. ಅಷ್ಟರ ಮಟ್ಟಿಗೆ ಪುತ್ತೂರಿನಲ್ಲಿ ಎಸ್ಸೆಸ್ಸಫ್ ಬೆಳೆದು ನಿಂತಿದ್ದರೆ ಅದರ ಹಿಂದೆ ಅದೆಷ್ಟೋ ತ್ಯಾಗದ ಕಥೆಗಳಿವೆ, ನೋವಿನ ವ್ಯಥೆಗಳಿವೆ!.

ಎಸ್ಸೆಸ್ಸಫ್ ಅನ್ನಲೂ ಭಯ ಪಡುತ್ತಿದ್ದಂತಹ ಪುತ್ತೂರಿನ ಕಾರ್ಯಕರ್ತರ ಮನದಲ್ಲಿ ಅಭಿಮಾನದಿಂದ ನಾನೊಬ್ಬ ಎಸ್ಸೆಸ್ಸಫ್ ಕಾರ್ಯಕರ್ತ ಎಂದು ಧೈರ್ಯದಿಂದ ಹೇಳಿ ಪುತ್ತೂರಿನ ರಾಜಬೀದಿಯಲ್ಲಿ ಝಿಂದಾಬಾದ್ ಹೇಳುತ್ತಾ ನಡೆಯಲು ಇರುವಂತಹ ಧೈರ್ಯ, ಸ್ಥೈರ್ಯ ಬೆಳೆದು ಬಂದುದರ ಹಿಂದೆಯೂ ಸ್ವಾರ್ಥ ಬಯಸದ, ಹೆಸರು ಇಷ್ಟಪಡದ ನಿಸ್ವಾರ್ಥ ನಾಯಕರ ನಿದ್ದೆಗೆಟ್ಟು ಕಾರ್ಯಾಚರಿಸಿದ ಪರಿಶ್ರಮದ ಫಲವಿದೆ.

ಪುತ್ತೂರಿನ ಎಸ್ಸೆಸ್ಸಫ್ ಕಾರ್ಯಕರ್ತರ ಆವೇಶ ಇನ್ನುಳಿದ ಊರಿನ ಕಾರ್ಯಕರ್ತರಿಗೆ ಆವೇಶ ತೋರುವುದಾದರೆ ಅಂತಹ ತಂಡವನ್ನು ಕಟ್ಟಲು ಆ ಕಾರ್ಯಕರ್ತರ ಹಿಂದೆ ಬಂಡೆಗಲ್ಲಿನಂತೆ ನಿಂತು ಧೈರ್ಯ ನೀಡಿದ ನಾಯಕರು ಇದ್ದೇ ಇರ್ತಾರೆ!.

ಹೌದು,
ಪುತ್ತೂರಿನ ಕಾರ್ಯಕರ್ತರು ಸಂಘಟನೆಗಾಗಿ ಬೇಕಾಗಿ ಅದೆಷ್ಟೋ ತ್ಯಾಗ ಸಹಿಸಿದ ಇತಿಹಾಸಗಳೇ ಇವೆ. ಪೋಸ್ಟರ್ ಅಂಟಿಸಿದ ಕಾರಣಕ್ಕೆ ಪೆಟ್ಟು ತಿಂದು ಸಂಘಟನೆ ಕಟ್ಟಿದವರೂ, ವಾಹನದಲ್ಲಿ ಎಸ್ಸೆಸ್ಸಫ್ ಹೆಸರು ಹಾಕಿಸಿದ ಕಾರಣಕ್ಕಾಗಿ ಕಲ್ಲು ಹೊಡೆಸಿಕೊಂಡವರೂ ಇದ್ದಾರೆ.
ಇಂದಿಗೂ ಪುತ್ತೂರಿನಲ್ಲಿ ಕಾರ್ಯಾಚರಿಸುವಂತಾಗಲು ಸ್ವಂತದಾದ ಒಂದು ಆಸ್ಥಾನವಿಲ್ಲದಿದ್ದರೂ ಪುತ್ತೂರಿನ ಕಾರ್ಯಕರ್ತರ ಆವೇಶಗಳಿಗೇನು ಕೊರತೆಯಾಗಿಲ್ಲ. ಇಲ್ಲಿನ ಉಲಮಾ, ಉಮರಾ ನಾಯಕರ ಸಹಾಯ, ಸಹಕಾರ, ಮಾರ್ಗದರ್ಶನದೊಂದಿಗೆ ಅಲ್ ಹಮ್ದುಲಿಲ್ಲಾ ತೃಪ್ತಿದಾಯಕವಾದ ರೂಪದಲ್ಲಿ ಸಂಘಟನೆಯು ಕಾರ್ಯಾಚರಿಸುತ್ತಿದೆ.

ಇದೀಗ ಫೆಬ್ರವರಿ 5 ರಂದು ಎಸ್ಸೆಸ್ಸಫ್ ರಾಷ್ಟ್ರೀಯ ಸಮಿತಿ ನಡೆಸಿಕೊಂಡು ಬರುವ ಹಿಂದ್ ಸಫರ್ ಯಾತ್ರೆಯು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಗೆ ಆಗಮಿಸುತ್ತಿರುವುದು ಪುತ್ತೂರಿಗರ ಪಾಲಿಗಂತೂ ಹಬ್ಬದ ವಾತಾವರಣವನ್ನು ಮನ ಮಾಡಿದೆ.
ಎಸ್ಸೆಸ್ಸಫ್ ರಾಷ್ಟ್ರೀಯ ನಾಯಕರ ಆಗಮನ, ಉಸ್ತಾದರುಗಳ ಕಣ್ಮನ ಸೆಳೆಯುವ ಮಸೀರ ರ‌್ಯಾಲಿ, SYS ಸನ್ನದ್ಧ ಪಡೆಯ ಟೀಂ ಇಸಾಬ ರ‌್ಯಾಲಿ, SSF ಯುವ ಪಡೆಯ ರೈಟೀಂ ರ‌್ಯಾಲಿ ಪುತ್ತೂರಿನ ರಾಜಬೀದಿಯಲ್ಲಿ ಶಿಸ್ತಿನ ಸಿಪಾಯಿಗಳಾಗಿ ಶಿಸ್ತುಬದ್ಧವಾಗಿ ಹೆಜ್ಜೆ ಹಾಕುವಾಗ ಈ ಐತಿಹಾಸಿಕವಾದ ನಿಮಿಷಗಳಿಗೆ ನೀವೂ ದೃಶ್ಯ ಸಾಕ್ಷಿಗಳಾಗಿರಿ. ನಿಮ್ಮನ್ನೂ ಪ್ರೀತಿ ಪೂರ್ವಕವಾಗಿ ಸ್ವಾಗತಿಸುತ್ತಿದ್ದೇವೆ. ಸವಿನಯವಾಗಿ ಆಮಂತ್ರಿಸುತ್ತಿದ್ದೇವೆ.

error: Content is protected !! Not allowed copy content from janadhvani.com