janadhvani

Kannada Online News Paper

ಎಸ್ಎಸ್ಎಫ್ ಮಠ ಶಾಖೆ ವಾರ್ಷಿಕ ಮಹಾಸಭೆ: ಅಧ್ಯಕ್ಷರಾಗಿ ಕಾಸಿಂ ಕೊಪ್ಪಳ ಆಯ್ಕೆ

ಉಪ್ಪಿನಂಗಡಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಎಸ್ಎಫ್) ಮಠ ಶಾಖೆ ಇದರ ವಾರ್ಷಿಕ ಮಹಾಸಭೆಯು ದಿನಾಂಕ 21/01/19 ನೇ ಗುರುವಾರ ಸಿರಾಜ್ ಸಖಾಫಿ ಮಠ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

SSF ಮಠ ಶಾಖೆಯ ಮಾಜಿ ಅಧ್ಯಕ್ಷರಾದ ಸಿರಾಜ್ ಸಖಾಫಿ ಮಠರವರು ಸಂಘಟನಾ ತರಗತಿ ನಡೆಸಿ ಕೊಟ್ಟರು, SSF ಉಪ್ಪಿನಂಗಡಿ ಸೆಕ್ಟರ್ ಆದ್ಯಕ್ಷರಾದ ಹಾರಿಸ್ ಸಖಾಫಿಯವರು ಸಂಘಟನೆ ಯಾಕೆ ಅದರ ಅನಿವಾರ್ಯದ ಕುರಿತು ಕಾರ್ಯಕರ್ತರಿಗೆ ಮನಮುಟ್ಟುವ ಶೈಲಿಯಲ್ಲಿ ತರಗತಿ ನಡೆಸಿದರು.

ಇದೇ ವೇಳೆ 22 ಸದಸ್ಯರನ್ನು ಒಳಗೊಂಡ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಕಾಸಿಂ ಕೊಪ್ಪಳ, ಉಪಾಧ್ಯಕ್ಷರುಗಳಾಗಿ ಹನೀಫ್ ಕೊಪ್ಪಳ, ರಫೀಕ್ ಶೇಕಬ್ಬ, ಪ್ರ,ಕಾರ್ಯದರ್ಶಿಯಾಗಿ ನೌಫಲ್ ಹಿರ್ತಡ್ಕ, ಜತೆ ಕಾರ್ಯದರ್ಶಿಗಳಾಗಿ ಇರ್ಶಾದ್, ಹಮೀದ್ ಹಿರ್ತಡ್ಕ, ಕೋಷಾದಿಕಾರಿಯಾಗಿ ಕೈಸ್ ಕೊಪ್ಪಳ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮುಝಮ್ಮಿಲ್ ಹಿರ್ತಡ್ಕ, ಸೇರಿದಂತೆ 22 ಮಂದಿಯ ಹೊಸ ಕಮಿಟಿಯನ್ನು ಆರಿಸಲಾಯಿತು.
ಝುಬೈರ್ ಮುಸ್ಲಿಯಾರ್ ಕಿರಾಅತ್ ಪಠಿಸಿ, ಅಬ್ದುರ್ರಹ್ಮಾನ್ ಕೊಪ್ಪಲ ಲೆಕ್ಕ ಪತ್ರ ವರದಿ ಮಂಡಿಸಿದರು.

ವರದಿ:ರಿಯಾ ನೆಲ್ಯಾಡಿ

error: Content is protected !! Not allowed copy content from janadhvani.com