ಕರ್ನಾಟಕದಲ್ಲಿರುವ ಅಹ್ಲುಸ್ಸುನ್ನತಿ ವಲ್ ಜಮಾಅತಿನ ಆಶಯಾದರ್ಶಗಳನ್ನು ಮೈಗೂಡಿಸಿಕೊಂಡು ಬದುಕುತ್ತಿರುವ ವಿಶ್ವಾಸಿಗಳಿಗೆ ಕಾರ್ಯಾಚರಿಸಲು ಮತ್ತು ಮುಸ್ಲಿಂ ಸಮುದಾಯದ ಬೇಡಿಕೆಗಳನ್ನು ಸರಕಾರ ಹಾಗೂ ಆಡಳಿತ ವರ್ಗಕ್ಕೆ ಸಮರ್ಪಕವಾಗಿ ಮತ್ತು ಸಕಾಲಿಕವಾಗಿ ತಲುಪಿಸಲು ಸಂಘಶಕ್ತಿಯ ಆವಶ್ಯಕತೆಯನ್ನು ಮನಗಂಡು ಸುಲ್ತಾನುಲ್ ಉಲಮಾ ಕಾಂತಪುರಂ ಎಪಿ ಉಸ್ತಾದ ರ ನಿರ್ದೇಶನದಂತೆ ಕರ್ನಾಟಕ ರಾಜ್ಯ ಸುನ್ನೀ ಜಂ ಇಯ್ಯತುಲ್ ಉಲಮಾದ ಅಧೀನದಲ್ಲಿ ಕರ್ನಾಟಕದ ಮುಸ್ಲಿಂ ಜಮಾಅತ್ ಎಂಬ ಸಂಘಟನೆಯನ್ನು ಕರ್ನಾಟಕಾದ್ಯಂತ ಅಸ್ತಿತ್ವಕ್ಕೆ ತರಲು ತೀರ್ಮಾನಿಸಲಾಗಿದೆ.
ಇದರ ರಾಜ್ಯ ಮಟ್ಟದ ಘೋಷಣಿ ಸಮಾವೇಶವು ಇದೇ ಬರುವ ದಿನಾಂಕ 27-1-2019 ನೇ ಆದಿತ್ಯವಾರ ಸಾಯಂಕಾಲ 4 ಕ್ಕೆ ಬೆಂಗಳೂರು ಹಳೇ ಹಜ್ಜ್ ಕ್ಯಾಂಪ್ ಮಿಲ್ಲರ್ಸ್ ರೋಡ್ ಮೈದಾನದಲ್ಲಿ ನಡೆಯಲಿರುವುದು.
ಈ ಕಾರ್ಯಕ್ರಮವು ಜನ ಸಹಸ್ರಗಳ ಪಾಲ್ಗೊಳ್ಳುವಿಕೆಯಿಂದ ಸಮ್ರಧ್ಧವಾಗಬೇಕಾಗಿದೆ.ಆದುದರಿಂದ ಎಸ್ ವೈ ಎಸ್ ದಕ್ಷಿಣ ಕನ್ನಡ ಜಿಲ್ಲೆ ಝೋನ್, ಸೆಂಟರ್, ಬ್ರಾಂಚ್ ಗಳ ಪ್ರತೀ ಸದಸ್ಯರು ಗಳು ಬೆಂಗಳೂರಲ್ಲಿ ಈ ಸಮಾವೇಶದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಗೊಳಿಸಲು. ಜಿಲ್ಲಾ ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ಅಶ್ರಪ್ ಕಿನಾರ ಮಂಗಳೂರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.