janadhvani

Kannada Online News Paper

ಯಾತ್ರಾರ್ಥಿಗಳಿಗೆ ಹೆಚ್ಚಿನ ಗುಣಮಟ್ಟದ ಸೌಕರ್ಯ- ಹಜ್ ಸಚಿವಾಲಯದಿಂದ ಒಪ್ಪಂದ

ಮಕ್ಕಾ: ಯಾತ್ರಾರ್ಥಿಗಳಿಗೆ ಹೆಚ್ಚಿನ ಗುಣಮಟ್ಟದ ಸೌಕರ್ಯವನ್ನು ಖಚಿತಪಡಿಸಿಕೊಳ್ಳಲು ಹೋಟೆಲ್ ವಲಯದಲ್ಲಿ ತಜ್ಞರಾದ ಒವೈಒ ಸಂಸ್ಥೆಯೊಂದಿಗೆ ಹಜ್ ಸಚಿವಾಲಯ ಒಪ್ಪಂದ ಮಾಡಿಕೊಂಡಿದೆ.

ಹಜ್ ಮತ್ತು ಉಮ್ರಾ ಖಾತೆಯ ಸಚಿವ ಮಹಮ್ಮದ್ ಸಾಲಿಹ್ ಬಿಂದನ್ ಮತ್ತು ಕಂಪೆನಿಯ ಸಿಇಒ ರಿಚ್ ಆಕ್ರೋಲ್ ನಡುವೆ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಮಕಾ, ಮದೀನಾ ಮತ್ತು ಮಶಾಹಿರ್ನಲ್ಲಿ ಯಾತ್ರಿಗಳ ಸೌಕರ್ಯವನ್ನು ಇನ್ನಷ್ಟು ಉತ್ತಮಗೊಳಿಸಲು ಮಾರ್ಗದರ್ಶನವನ್ನು ಒದಗಿಸುವ ನಿಟ್ಟಿನಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ವಸತಿ ಕಟ್ಟಡಗಳನ್ನು ಪರಿಶೀಲಿಸಲು ಕಂಪನಿಯು ಹಜ್ ಸಚಿವಾಲಯ ಜಂಟಿ ಸಹಯೋಗದಿಂದ ವ್ಯವಸ್ಥೆಗೊಳಿಸಲಿದೆ. ಮುಂದೆ ಉಮ್ರಾ ವಲಯದಲ್ಲಿ ಯಾತ್ರಾರ್ಥಿಗಳ ಹೆಚ್ಚಳದ ದೃಷ್ಟಿಯಿಂದ ಈ ಒಪ್ಪಂದ ಮಾಡಲಾಗಿದ್ದು, ಹಜ್ ಸಮಯದಲ್ಲಿ, ಸುಮಾರು 7000 ಕಟ್ಟಡಗಳನ್ನು ಯಾತ್ರಿಗಳಿಗಳ ವಾಸಕ್ಕಾಗಿ ಸಜ್ಜುಗೊಳಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

error: Content is protected !! Not allowed copy content from janadhvani.com