janadhvani

Kannada Online News Paper

ಇಮಾಮ್ ನವವಿ ಅಕಾಡೆಮಿಯಿಂದ ಹಜ್ಜ್ ಯಾತ್ರಿಕರಿಗೆ ಬೀಳ್ಕೊಡುಗೆ ಸಮಾರಂಭ

ಪುತ್ತೂರು: ಇಸ್ಲಾಮಿನ ಪಂಚಸ್ತಂಬಗಳಲ್ಲೊಂದಾದ ಪವಿತ್ರ ಹಜ್ಜ್ ಕರ್ಮ ನಿರ್ವಹಿಸಲು ಮಕ್ಕಾಕ್ಕೆ ತೆರಳುವ ಹಜ್ಜಾಜಿಗಳನ್ನು ಬೀಳ್ಕೊಡುವ ಸಮಾರಂಭವವು ಇತ್ತೀಚೆಗೆ ಇಮಾಮ್ ನವವಿ ಅಕಾಡೆಮಿ ಬೆಟ್ಟಂಪಾಡಿ ಪುತ್ತೂರಿನಲ್ಲಿ ನಡೆಯಿತು.ಸಂಸ್ಥೆಯ ಹಿತೈಷಿಗಳಾದ ಶಾಹುಲ್ ಹಮೀದ್ ಕೊರಿಂಗಿಲ, ಆಲಿ ಕುಂಞಿ ಕೊರಿಂಗಿಲ, ಬಡವ ಕುಂಞಿ ಕೊಂಬೆಮಾರ್, ಅಬ್ದುಲ್ಲಾ ಚುರಿಪದವು, ಮುಹಮ್ಮದ್ ಮನ್ನಾಪು ರವರನ್ನು ಸಂಸ್ಥೆಯ ಪ್ರಾಂಶುಪಾಲರಾದ ಅಬ್ದುಲ್ ರಝಾಕ್ ಸಅದಿ ಪರಿಯಕ್ಕಳ ,ಜನರಲ್ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಖ್ ಸಖಾಫಿ ಸಜೀಪ, ಮುದರ್ರಿಸ್ ಇಸ್ಮಾಯಿಲ್ ಸಖಾಫಿ ಅಲ್ ಅಝ್ಹರಿ ಬಂಟ್ವಾಳ, ಖತೀಜತುಲ್ ಖುಬುರಾ ಮಸ್ಜಿದ್ ಕಾರ್ಯದರ್ಶಿ ಅಶ್ರಫ್ , ಸದಸ್ಯರುಗಳಾದ ಜಾಬಿರ್, ಸಿದ್ದೀಖ್ ಉಪಸ್ಥಿತರಿದ್ದರು