ದಮ್ಮಾಮ್: ಹೌಸ್ ಡ್ರೈವರ್ ಕೆಲಸಕ್ಕಾಗಿ ಸುಮಾರು 15 ದಿನಗಳ ಹಿಂದೆ ದಮ್ಮಾಮ್ ಅಲ್ ಖೋಬರ್ ವ್ಯಾಪ್ತಿಗೆ ಆಗಮಿಸಿದ್ದ ಮಂಗಳೂರು ಮೂಲದ ಅಬ್ದುಲ್ ರಝಾಕ್ ಎಂಬುವವರು ಮೆಡಿಕಲ್ ಸಮಸ್ಯೆಯಿಂದಾಗಿ ಕಫೀಲ್ ರಿಂದ ರಿಜೆಕ್ಟ್ ಆಗಿ ಸಂಕಷ್ಟಕ್ಕೆ ಸಿಲುಕಿದ್ದರು.
ವಿಷಯವು ಕೆಸಿಎಫ್ ರಾಷ್ಟ್ರೀಯ ಸಮಿತಿಯ ಗಮನಕ್ಕೆ ಬಂದ ಕೂಡಲೇ, ಕರ್ನಾಟಕ ಕಲ್ಚರ್ ಫೌಂಡೇಶನ್ (ಕೆ ಸಿ ಎಫ್ )ದಮ್ಮಾಮ್ ಝೋನ್ ನಾಯಕರಾದ ಮುಹಮ್ಮದ್ ಮಲೆಬೆಟ್ಟು ಅವರ ನೇತೃತ್ವದ ತಂಡವು ತಕ್ಷಣ ಕಾರ್ಯಾಚರಣೆ ಆರಂಭಿಸಿತು. ಕಫೀಲ್ ರವರೊಂದಿಗೆ ನಿರಂತರ ಮಾತುಕತೆ ನಡೆಸಿ, ಕಫೀಲ್ ಕೇಳಿದ ಹಣವನ್ನು ಇವರ ಕುಟುಂಬದ ಸಹಕಾರದೊಂದಿಗೆ ನೀಡಿ ಎಕ್ಸಿಟ್ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು. ಬಳಿಕ ವಿಮಾನ ಟಿಕೆಟ್ ವ್ಯವಸ್ಥೆ ಮಾಡಿ ಇವರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕಳುಹಿಸಿಕೊಡುವಲ್ಲಿ ಕೆಸಿಎಫ್ ತಂಡವು ಯಶಸ್ವಿಯಾಯಿತು.
ಈ ಅವಧಿಯಲ್ಲಿ ರೂಮಿನಲ್ಲಿ ಕಷ್ಟದಲ್ಲಿದ್ದಾಗ ಊಟ-ವಸತಿಯ ವ್ಯವಸ್ಥೆ ಸೇರಿದಂತೆ ಎಲ್ಲಾ ಅಗತ್ಯ ನೆರವನ್ನು ಒದಗಿಸಲಾಯಿತು. ಈ ಮಾನವೀಯ ಕಾರ್ಯದಲ್ಲಿ ಸಹಕರಿಸಿದ ಎಲ್ಲಾ ಹಿತೈಷಿಗಳು, ಕೆಸಿಎಫ್ ರಾಷ್ಟ್ರೀಯ ಸಮಿತಿ, ಖೋಬರ್ ಸೆಕ್ಟರ್ ಹಾಗೂ ಮುಹಮ್ಮದ್ ಮಲೆಬೆಟ್ಟು ತಂಡಕ್ಕೆ ಅಭಿನಂದನೆಗಳು.
ಕೆಸಿಎಫ್ ದಮ್ಮಾಮ್ ಝೋನ್
ಖೋಬರ್ ಸೆಕ್ಟರ್
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಸೌದಿ ಅರೇಬಿಯಾ ಮೇಲೆ ಡ್ರೋನ್, ಕ್ಷಿಪಣಿ ದಾಳಿ: ರಕ್ಷಣಾ ಪಡೆಯಿಂದ ಯಶಸ್ವಿ ಪ್ರತಿರೋಧ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ