janadhvani

Kannada Online News Paper

ಗುರುವಾಯನಕೆರೆಯಲ್ಲಿ ನಾಳೆ ‘ಗ್ರ್ಯಾಂಡ್ ಹುಬ್ಬುರ್ರಸೂಲ್ ಕಾನ್ಫರೆನ್ಸ್’ ಹಾಗೂ ಬೃಹತ್ ‘ಸಮಸ್ತ ಸೆಂಟಿನರಿ ಜಾಥಾ’

<p>ಗುರುವಾಯನಕೆರೆ: ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ಅವರ 1501ನೇ ಜನ್ಮದಿನದ ಸುಸಂದರ್ಭದಲ್ಲಿ, ಬೆಳ್ತಂಗಡಿ ತಾಲೂಕು ಸುನ್ನೀ ಕೋ-ಆರ್ಡಿನೇಶನ್ ಸಮಿತಿಯ ಆಶ್ರಯದಲ್ಲಿ…</p>

ಗುರುವಾಯನಕೆರೆ: ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ಅವರ 1501ನೇ ಜನ್ಮದಿನದ ಸುಸಂದರ್ಭದಲ್ಲಿ, ಬೆಳ್ತಂಗಡಿ ತಾಲೂಕು ಸುನ್ನೀ ಕೋ-ಆರ್ಡಿನೇಶನ್ ಸಮಿತಿಯ ಆಶ್ರಯದಲ್ಲಿ ‘ಗ್ರ್ಯಾಂಡ್ ಹುಬ್ಬುರ್ರಸೂಲ್ ಕಾನ್ಫರೆನ್ಸ್’ ಹಾಗೂ ಸಮಸ್ತ ಶತಮಾನೋತ್ಸವದ ಪ್ರಯುಕ್ತ ಬೃಹತ್ ‘ಸಮಸ್ತ ಸೆಂಟಿನರಿ ಜಾಥಾ’ ನಾಳೆ (18/8/2026) ಸಂಜೆ ಗುರುವಾಯನಕೆರೆಯಲ್ಲಿ ಜರುಗಲಿದೆ.

ಕರ್ನಾಟಕ ಮುಸ್ಲಿಂ ಜಮಾಅತ್ (KMJ), ಸುನ್ನೀ ಯುವಜನ ಸಂಘ (SYS), ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (SSF), ಸುನ್ನೀ ಜಂಇಯ್ಯತುಲ್ ಉಲಮಾ (SJU), ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (SJM) ಹಾಗೂ ಸುನ್ನೀ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ (SMA) ಸಂಘಟನೆಗಳ ಜಂಟಿ ನೇತೃತ್ವದಲ್ಲಿ ಈ ಕಾರ್ಯಕ್ರಮ ಸಂಘಟಿತಗೊಂಡಿದೆ.

ಕಾರ್ಯಕ್ರಮದ ರೂಪುರೇಷೆಗಳು:

  • ಬೃಹತ್ ಸಮಸ್ತ ಸೆಂಟಿನರಿ ಜಾಥಾ: ಸಂಜೆ 5 ಗಂಟೆಗೆ ಗುರುವಾಯನಕೆರೆ ದರ್ಗಾ ವಠಾರದಿಂದ ಹೊರಟು ಕಾರ್ಯಕ್ರಮದ ಸ್ಥಳವಾದ ಎಫ್.ಎಂ. ಗಾರ್ಡನ್ ಸಭಾಂಗಣದವರೆಗೆ ನಡೆಯಲಿದೆ.
  • ಹುಬ್ಬುರ್ರಸೂಲ್ ಮಜ್ಲಿಸ್: ಅಂತಾರಾಷ್ಟ್ರೀಯ ಖ್ಯಾತಿಯ ಧಾರ್ಮಿಕ ವಿದ್ವಾಂಸ ಹಾಗೂ ಕೇರಳ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಬದ್ರುಸ್ಸಾದಾತ್ ಅಸ್ಸಯ್ಯಿದ್ ಇಬ್ರಾಹೀಂ ಖಲೀಲುಲ್ ಬುಖಾರಿ ತಂಙಳ್ ಕಡಲುಂಡಿ ಅವರ ಮುಖ್ಯ ನೇತೃತ್ವದಲ್ಲಿ ಗ್ರ್ಯಾಂಡ್ ಹುಬ್ಬುರ್ರಸೂಲ್ ಕಾರ್ಯಕ್ರಮ ನೆರವೇರಲಿದೆ.
  • ಬುರ್ದಾ ಮಜ್ಲಿಸ್: ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ತ್ವಾಹಾ ತಂಙಳ್ ಅವರು ಬುರ್ದಾ ಮಜ್ಲಿಸ್ ನಡೆಸಿಕೊಡಲಿದ್ದಾರೆ.

ಅಧ್ಯಕ್ಷತೆ ಮತ್ತು ಮುಖ್ಯ ಅತಿಥಿಗಳು:

ಸುನ್ನೀ ಕೋ-ಆರ್ಡಿನೇಶನ್ ಸಮಿತಿ ಅಧ್ಯಕ್ಷ ಸಯ್ಯಿದ್ ಸಾದಾತ್ ತಂಙಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಸಾನ್ನಿಧ್ಯ ಹಾಗೂ ಮಾರ್ಗದರ್ಶನವನ್ನು ಅಸ್ಸಯ್ಯಿದ್ ಇಸ್ಮಾಈಲ್ ತಂಙಳ್, ಕಾಜೂರು ತಂಙಳ್, ಮಲ್ಜ‌ಅ ತಂಙಳ್, ಮಸ್‌ಹೂದ್ ತಂಙಳ್, ಮನ್‌ಶರ್ ತಂಙಳ್, ವಾದೀ ಇರ್ಫಾನ್ ತಂಙಳ್, ಡಾ. ಕಾವಳಕಟ್ಟೆ ಹಝ್ರತ್, ಸಯ್ಯಿದ್ ಸಲಾಂ ತಂಙಳ್, ಕರ್ಪಾಡಿ ತಂಙಳ್, ಪೊಮ್ಮಾಜೆ ತಂಙಳ್, ಶರಫುದ್ದೀನ್ ತಂಙಳ್ ಮತ್ತು ಎಸ್.ಎಂ. ತಂಙಳ್ ವಹಿಸಲಿದ್ದಾರೆ.

ಪ್ರಮುಖ ಧಾರ್ಮಿಕ ಪಂಡಿತರಾದ ಕಾಸಿಂ ಮದನಿ ಉಸ್ತಾದ್, ಹೈದರ್ ಮದನಿ ಉಸ್ತಾದ್, ಖಾಝಿ ಇಬ್ರಾಹಿಂ ಮುಸ್ಲಿಯಾರ್, ಪಿ.ಪಿ. ಉಸ್ತಾದ್, ಪೆರ್ನೆ ಉಸ್ತಾದ್, ಅಬೂಸ್ವಾಲಿಹ್ ಉಸ್ತಾದ್ ಹಾಗೂ ಯಾಕೂಬ್ ಉಸ್ತಾದ್ ಸೇರಿದಂತೆ ಹಲವಾರು ಉಲಮಾಗಳು, ದಾವತ್ ನಾಯಕರು ಭಾಗವಹಿಸಲಿದ್ದಾರೆ.

ಈ ಐತಿಹಾಸಿಕ ಕಾರ್ಯಕ್ರಮದಲ್ಲಿ 2,000ಕ್ಕೂ ಅಧಿಕ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಸುನ್ನೀ ಕೋ-ಆರ್ಡಿನೇಶನ್ ಸಮಿತಿ ತಾಲೂಕು ಪ್ರಧಾನ ಕಾರ್ಯದರ್ಶಿ ಸಲೀಂ ಕನ್ಯಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿರಿ...