ನರಿಂಗಾನ: ಅನಾಥ ಮತ್ತು ಬಡ ಮಕ್ಕಳ ಆಶಾಕಿರಣ, ಮಂಜನಾಡಿ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ನ ಶಿಲ್ಪಿ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಉಚಿತ ಸಾಮೂಹಿಕ ವಿವಾಹ ಮತ್ತು ಶೈಕ್ಷಣಿಕ ಕ್ರಾಂತಿಯ ಹರಿಕಾರರಾಗಿದ್ದ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಅವರ ಏಳನೇ ವರ್ಷದ ಅನುಸ್ಮರಣೆ ಮತ್ತು ಪ್ರಾರ್ಥನಾ ಸಂಗಮವು (ಆಂಡ್ ನೇರ್ಚೆ) 2026 ಮೇ 13 ಮತ್ತು 14 ರಂದು ಅಲ್ ಮದೀನ ಮಂಜನಾಡಿ ಕ್ಯಾಂಪಸ್ನಲ್ಲಿ ನಡೆಯಲಿದೆ.
ಸಾರ್ವಕಾಲಿಕ ಮಾದರಿ ಪುರುಷರಾದ ಉಸ್ತಾದರ ಜೀವನ ಸಂದೇಶ ಹಾಗೂ ಅವರು ಸಮಾಜಕ್ಕೆ ನೀಡಿದ ಉದಾತ್ತ ಜ್ಞಾನ ಸೇವೆಯನ್ನು ಹೊಸ ತಲೆಮಾರಿಗೆ ತಲುಪಿಸುವ ಉದ್ದೇಶದಿಂದ ಈ ಎರಡು ದಿನಗಳ ಆಧ್ಯಾತ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮೇ 13 ಬುಧವಾರ ಬೆಳಿಗ್ಗೆ ಆರು ಗಂಟೆಗೆ ಸಯ್ಯಿದ್ ಜಲಾಲುದ್ದೀನ್ ತಂಙಳ್ ಮಲ್ಹರ್ ರವರ ನೇತೃತ್ವದಲ್ಲಿ ಖತಮುಲ್ ಕುರ್ಆನ್ ಮತ್ತು ಮೌಲಿದ್ ಮಜ್ಲಿಸ್ ನಡೆಯಲಿದೆ. ಅದೇ ದಿನ ರಾತ್ರಿ 7ಕ್ಕೆ ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಲ್ ರವರ ನೇತೃತ್ವದಲ್ಲಿ ಜಲಾಲಿಯಾ ಮಜ್ಲಿಸ್ ನಡೆಯಲಿದೆ.
ಮೇ 14ನೇ ಗುರುವಾರ ಸಂಜೆ 4 ಗಂಟೆಗೆ ಅನಿವಾಸೀ ಭಾರತೀಯರ ಸ್ನೇಹ ಸಂಗಮ (ಗಲ್ಫ್ ಮೀಟ್) ನಡೆಯಲಿದೆ.. ಅದೇ ದಿನ ರಾತ್ರಿ ಮಗ್ರಿಬ್ ನಮಾಜಿನ ನಂತರ ಅಲ್ ಮದಿನ ಪ್ರಧಾನ ಕಾರ್ಯದರ್ಶಿ; ಅಬ್ದುಲ್ ಖಾದರ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾವೇಶ ನಡೆಯಲಿದೆ. ಯೆನಪೋಯ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಹಾಜಿ ಯೇನೆಪೋಯ ಅಬ್ದುಲ್ಲ ಕುಂಞಿ ಸಮಾವೇಶವನ್ನು ಉದ್ಘಾಟಿಸಲಿರುವರು . ಸಯ್ಯಿದ್ ಮಸೂದ್ ತಂಙಳ್ ಕೂರತ್ ಪ್ರಾರ್ಥನೆ ನಡೆಸುವರು. ಖ್ಯಾತ ವಾಗ್ಮಿ ನೌಫಲ್ ಸಖಾಪಿ ಕಳಸ ಮುಖ್ಯ ಪ್ರಭಾಷಣ ಮಾಡಲಿರುವರು. ಮೌಲಾನಾ ಪೇರೋಡ್ ಅಬ್ದುಲ್ ರಹಮಾನ್ ಸಖಾಫಿ ಸಮಾರೋಪ ಭಾಷಣ ಮಾಡಲಿದ್ದಾರೆ. ನೂರುಸ್ಸಾದಾತ್ ಸಯ್ಯಿದ್ ಬಾಯಾರ್ ತಂಙಳ್ ಸಮಾರೋಪ ದುವಾ ನೆರವೇರಿಸಲಿರುವರು.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಝೈನುಲ್ ಉಲಮಾ ಮಾಣಿ ಉಸ್ತಾದ್,ವಿಧಾನಸಭಾ ಸ್ಪೀಕರ್ ಹಾಜಿ ಯು.ಟಿ. ಖಾದರ್ ಫರೀದ್, ಸಯ್ಯಿದ್ ಇಸ್ಮಾಯಿಲ್ ತಂಙಳ್ ಅಲ್ ಹಾದೀ ಉಜಿರೆ, ಡಾ. ಮುಹಮ್ಮದ್ ಫಾಝಿಲ್ ರಝ್ವಿ, ಡಾ. ಇಫ್ತಿಕಾರ್ ಫರೀದ್ ಸೇರಿದಂತೆ ರಾಜ್ಯ ಜಂಇಯ್ಯತುಲ್ ಉಲಮಾ, ಕೆ.ಸಿ.ಎಫ್, ಕೆ.ಎಂ.ಜೆ, ಎಸ್.ಎಂ.ಎ, ಎಸ್.ಜೆ.ಎಂ, ಎಸ್.ವೈ.ಎಸ್, ಎಸ್.ಎಸ್.ಎಫ್ ಸಂಘಟನೆಗಳ ನಾಯಕರು, ವಿವಿಧ ಮಸೀದಿ-ಮದ್ರಸಗಳ ಅಧ್ಯಕ್ಷರು ಹಾಗೂ ಉಸ್ತಾದರುಗಳು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಚೇರ್ಮನ್ ಹಾಜಿ ಎನ್.ಎಸ್. ಕರೀಂ, ಕನ್ವೀನರ್ ಕೆ.ಎಂ.ಕೆ. ಮಂಜನಾಡಿ, ಮುಹಮ್ಮದ್ ಕುಂಞಿ ಅಮ್ಜದಿ, ಅಬ್ದುಲ್ ರಹ್ಮಾನ್ ಮದನಿ ನೆಕ್ಕರೆ ಮತ್ತು ಅಬ್ದುಲ್ ರಝಾಕ್ ಮಾಸ್ಟರ್ ಉಪಸ್ಥಿತರಿದ್ದರು.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ