ಉಡುಪಿ: ಕರಾವಳಿ ಕರ್ನಾಟಕದಲ್ಲಿ ಕೋಮು ಸೌಹಾರ್ದವನ್ನು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ‘ಹೃದಯ ಹೃದಯಗಳನ್ನು ಬೆಸೆಯೋಣ’ ಎಂಬ ಧ್ಯೇಯವಾಕ್ಯದೊಂದಿಗೆ ಎಲ್ಲ ಜಾತಿ ಮತಗಳ ಜನರನ್ನು ಸೇರಿಸಿ ನಡೆಸುವ ‘ಸೌಹಾರ್ದ ಸಂಚಾರ’ ವು ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆಯಲ್ಲಿ ಉಡುಪಿ ನಗರದಲ್ಲಿ ನಡೆಯಿತು.
ಉಡುಪಿ ನಗರದಲ್ಲಿ ನಡೆದ ಜಾಥಾ ಮತ್ತು ಸಾರ್ವಜನಿಕ ಸಭೆಯಲ್ಲಿ ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಪ್ರಾಸ್ತವಿಕ ಭಾಷಣ ಮಾಡಿದರು. ಹಾಫಿಳ್ ಯಾಕೂಬ್ ಸಅದಿ ನಾವೂರು ಸಂದೇಶ ಭಾಷಣ ಮಾಡಿದರು.




ಬೈಂದೂರು ಹಲಗೇರಿ ಜೋಗಿ ಮನೆಯ ಶ್ರೀ ವಸಂತನಾಥ ಗುರೂಜಿ, ವಿಠಲ್ ಹೆಗ್ಡೆ, ಅಮೃತ್ ಶೆಣೈ, ಹಂಝತ್ ಹೆಜಮಾಡಿ, ಬೈಂದೂರು ಜೋಗಿಮನೆಯ ಶ್ರೀವಸಂತನಾಥ ಗುರುಜೀ, ಚರ್ಚಿನ ಸಹಾಯಕ ಧರ್ಮಗುರು ರೆ.ಫಾ. ಲಿಯೋ ಪ್ರವೀಣ್ ಡಿಸೋಜಧರ್ಮಗುರು ಫಾದರ್ ವಿಲಿಯಂ ಮಾರ್ಟಿಸ್, ನ್ಯಾಯವಾದಿ ಹಬೀಬ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ವೌಲಾ, ಎಂ.ಎ.ಗಫೂರ್, ಡಾ.ಗಣನಾಥ ಎಕ್ಕಾರು, ಪ್ರಶಾಂತ್ ಜತ್ತನ್ನ, ರಮೇಶ್ ಕಾಂಚನ್, ಸುಂದರ್ ಮಾಸ್ಟರ್, ಶ್ಯಾಮರಾಜ್ ಬಿರ್ತಿ, ನಾಗೇಶ್ ಉದ್ಯಾವರ, ಪ್ರಭಾಕರ ಪೂಜಾರಿ, ಸುಭಾನ್ ಹೊನ್ನಾಳ, ಬಿ ಎಮ್ ಮೊಯ್ದಿನ್ ಕಟಪಾಡಿ,ಹನೀಫ್ ಹಾಜಿ ಅಂಬಾಗಿಲು, ತೌಫಿಕ್ ಹಾಜಿ ನಾವುಂದ,.ಎಸ್ ವೈ ಎಸ್ ರಾಜ್ಯ ಉಪಾಧ್ಯಕ್ಷರುಗಳಾದ
ಸಯ್ಯಿದ್ ಇಲ್ಯಾಸ್ ತಂಙಳ್ ಎಮ್ಮೆಮಾಡು,ಸಯ್ಯಿದ್ ,ಶಾಫೀ ನಈಮೀ ತಂಙಳ್ ಮಾರ್ನಹಳ್ಳಿ,ಸಯ್ಯಿದ್ ಹಾಮಿಮ್ ತಂಙಳ್ ಚಿಕ್ಕಮಂಗಳೂರು, ಇಬ್ರಾಹಿಂ ಸಖಾಫಿ ಪಯೋಟ,ಇಸ್ಹಾಖ್ ಝುಹ್ರಿ ಕಾನಕೆರೆ,ಮಹ್ಬೂಬ್ ಸಖಾಫಿ ಕಿನ್ಯ,ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ,ಅಬ್ದುರ್ರಹ್ಮಾನ್ ಹಾಜಿ ಪ್ರಿಂಟೆಕ್,ಅಶ್ರಪ್ ಎಮ್ಮೆಮಾಡು,ಅತ್ತಾವುಳ್ಳ ಮೈಸೂರು,ಇಬ್ರಾಹಿಂ ಮೂಡಿಗೆರೆ,ಸಲೀಂ ಕನ್ಯಾಡಿ,ಕಲಂದರ್ ಕಕ್ಕೆಪದವು,ಯಾಕೂಬ್ ಸಅದಿ ನಾವೂರು,ನವಾಝ್ ಸಖಾಫಿ ಅಡ್ಯಾರ್, ಫಾರೂಕ್ ಶೇಡಿಗುರಿ ಮೊದಲಾದವರು ಉಪಸ್ಥಿತರಿದ್ದರು.
ಎಸ್‌ವೈಎಸ್ ರಾಜ್ಯ ಸಂಯೋಜಕ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.







