ಉಡುಪಿ: ನಮ್ಮ ನಾಡ ಒಕ್ಕೂಟ ಇದರ ಅಂಗ ಸಂಸ್ಥೆ ಕುಂದಾಪುರದಲ್ಲಿ ಕಾರ್ಯಚರಿಸುತ್ತಿರುವ ಕಮ್ಯುನಿಟಿ ಸೆಂಟರ್ ( ಮಾಹಿತಿ ಮತ್ತು ಸೇವಾ ಕೇಂದ್ರ) ಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜೀಂ ರವರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಅವರನ್ನು ನಮ್ಮ ನಾಡ ಒಕ್ಕೂಟ ಸೆಂಟ್ರಲ್ ಕಮಿಟಿ ಹಾಗೂ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ನಮ್ಮ ನಾಡ ಒಕ್ಕೂಟ ಕಾರ್ಯಕ್ರಮಗಳು ಹಾಗೂ ಸೇವೆಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಶುಭ ಕೋರಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ. ಕೇಂದ್ರ ಸಮಿತಿಯ ಸಂಘಟನ ಕಾರ್ಯದರ್ಶಿ ಹುಸೇನ್ ಹೈಕಾಡಿ. ಗೌರವ ಅಧ್ಯಕ್ಷ ಮೊಹಮ್ಮದ್ ರಫೀಕ್ ಗಂಗೊಳ್ಳಿ. ಟ್ರಸ್ಟ್ ಸದ್ಯಸ್ಯರಾದ ಪಿರ್ ಸಾಹೇಬ್ ಉಡುಪಿ. ಮಾಜಿ ಉಪಾಧ್ಯಕ್ಷ ರಾದ ಎಮ್ ಪಿ ಮೊಹಿದಿನಬ್ಬ ಕಾಪು.
ಉಪಾಧ್ಯಕ್ಷ ರಾದ ಅಬು ಮೊಹಮ್ಮದ್ ಕುಂದಾಪುರ. ಜಿಲ್ಲಾ ಪ್ರದಾನ ಕಾರ್ಯದರ್ಶಿ ಝಹಿರ್ ಅಹ್ಮದ್.ಜಿಲ್ಲಾ ಸದ್ಯಸ್ಯರಾದ ಶಾಬಾನ್ ಹಂಗಳೂರ್.ನಿಹಾರ್ ಅಹ್ಮದ್ ಕುಂದಾಪುರ. ಅಬ್ದುಲ್ ಖಾದರ್ ಮೂಡ್ ಗೋಪಾಡಿ. ಮೊಹಮ್ಮದ್ ಗುಲ್ವಾಡಿ. ಉಸ್ಮಾನ್ ಪಳ್ಳಿ. ಅಕ್ರಮ್ ಉಡುಪಿ. ಏನ್ ಏನ್ ಒ ಕಮ್ಯೂನಿಟಿ ಸೆಂಟರ್ ನ ಉಪಾಧ್ಯಕ್ಷ ರಾದ ಜಮಾಲ್ ಗುಲ್ವಾಡಿ ಇನ್ನಿತರರು ಉಪಸ್ಥಿತರಿದ್ದರು.