ದುಬೈ: ಪವಿತ್ರ ಮಾಸ ರಂಝಾನ್ ಆರಂಭಗೊಂಡಿದೆ. ಯುಎಇಯಲ್ಲಿ ಉಷ್ಣಾಂಶವು ಕಠಿಣವಾಗಿರುವಂತೆಯೇ ರಂಝಾನ್ ಉಪವಾಸವು 15 ಗಂಟೆಗಳಷ್ಟು ದೀರ್ಘವಿದೆ.
ರಮಝಾನ್ ತಿಂಗಳ ಉಪವಾಸಕ್ಕಾಗಿ ಮಾನಸಿಕ ಮತ್ತು ದೈಹಿಕವಾಗಿ ಸನ್ನದ್ದರಾಗಿರುವ ವಿಶ್ವಾಸಿಗಳು ಹಸಿವು, ಬಾಯಾರಿಕೆ ಮತ್ತು ಭಾವನೆಗಳಿಂದ ದೂರವಿದ್ದು ದೇವರ ಮೆಚ್ಚುಗೆಯನ್ನು ಗಳಿಸಲು ಶ್ರಮಿಸುತ್ತಾರೆ.ದೀರ್ಘ ಉಪವಾಸದ ಸಮಯ ಅನಗತ್ಯ ಚರ್ಚೆ ಮತ್ತು ಕಾರ್ಯಗಳನ್ನು ತ್ಯಜಿಸಿ,ರಂಝಾನ್ ರಾತ್ರಿಯಲ್ಲಿ ಪಾಪಗಳನ್ನು ಮನ್ನಿಸುವಂತೆ ಅಲ್ಲಾಹನ ಮುಂದೆ ಕಣ್ಣೀರಿಳಿಸಿ ಪ್ರಾರ್ಥಿಸುತ್ತಾರೆ.
ಆತ್ಮಹರ್ಷದ ದಿನ ಮತ್ತು ರಾತ್ರಿಗಳನ್ನು ಸ್ವಾಗತಿಸಿರುವ ವಿಶ್ವಾಸಿಗಳು ಮೂವತ್ತು ದಿನಗಳವರೆಗೆ ವಿಶ್ರಾಂತಿ ಪಡೆಯದೆ ಅಲ್ಲಾಹನ ಆಜ್ಞೆಯನ್ನು ಪಾಲಿಸಲು ಮುನ್ನುಗ್ಗುತ್ತಾರೆ.
ಉಪವಾಸದ ದಿನಗಳನ್ನು ಸಂತೋಷದೊಂದಿ ಬರಮಾಡಿಕೊಳ್ಳಲು ಮಾನಸಿಕ ಮತ್ತು ದೈಹಿಕ ತಯಾರಿಯಲ್ಲಿದ್ದ ವಿಶ್ವಾಸಿಗಳು,ಮಾಡಿದ ಪಾಪಗಳನ್ನು ಪಶ್ಚಾತಾಪಪಟ್ಟು ದೇವರಲ್ಲಿ ಪ್ರಾರ್ಥಿಸುವುದು ಮತ್ತು ದಾನ ನೀಡುವುದರಲ್ಲಿ ದೃಷ್ಟಿ ಹಾಯಿಸಲಿದ್ದಾರೆ.
ಯುಎಇ ಯಲ್ಲಿನ ಮಸೀದಿ ಪರಿಸರದಲ್ಲಿ ಇಫ್ತಾರ್ ಔತಣಕೂಟವು ಸಕ್ರಿಯವಾಗಲಿವೆ.ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಗಳು ಮತ್ತು ವ್ಯಾಪಾರ ಸಂಸ್ಥೆಗಳು ಸೇರಿ ಇಫ್ತಾರ್ ಕೂಟಗಳನ್ನು ಸಂಘಟಿಸುತ್ತಾರೆ.
ರಾತ್ರಿ ತರಾವೀಹ್ ನಮಾಜಿನಲ್ಲಿ ಭಾಗವಹಿಸಿ, ನಿದ್ರೆ ತ್ಯಜಿಸಿ, ಅನ್ನ ಪಾನೀಯಗಳನ್ನು ನಿಯಂತ್ರಿಸುವಾಗ ಆಡಂಬರ, ಅನಾವಶ್ಯಕ ಕರ್ಚುಗಳನ್ನು ನಿಯಂತ್ರಿಸಿ ಬಡವರನ್ನು ಆರ್ಥಿಕವಾಗಿ ಸಹಕರಿಸುತ್ತಾ ಒಂದು ಉನ್ನತ ಜೀವನಕ್ಕೆ ಕಾಲಿರಿಸಲು ಸಾಧ್ಯವಾಗುತ್ತದೆ.
ಸಮುದಾಯದ ಧಾರ್ಮಿಕ ವಿದ್ವಾಂಸರು ವಿಶ್ವಾಸಿ ಸಮೂಹಕ್ಕೆ ಹಿತೋಪದೇಶಗಳನ್ನು ನೀಡುತ್ತಾರೆ ರಮಝಾನನ್ನು ಸ್ವಾಗತಿಸಲು ಖರ್ಜೂರ ಹಣ್ಣುಗಳು, ಧಾನ್ಯಗಳು, ಪಾನೀಯಗಳು, ನೀರು, ಮೀನು, ಇತ್ಯಾದಿಗಳನ್ನು ಖರೀದಿಸಲು ಮಾರುಕಟ್ಟೆಗಳು ಸಕ್ರಿಯಗೊಂಡಿದೆ.















ಇನ್ನಷ್ಟು ಸುದ್ದಿಗಳು
ಹೊರ್ಮುಜ್ ದಿಗ್ಬಂಧನ: ‘ಎಡವಟ್ಟು ಮಾಡಬೇಡಿ’- ಅಮೆರಿಕಕ್ಕೆ ಸೌದಿ ಅರೇಬಿಯಾ ಎಚ್ಚರಿಕೆ
ಹಜ್ ಸೀಸನ್: ಮಕ್ಕಾ ಪ್ರವೇಶದ ಅನುಮತಿ ಪತ್ರ ವಿತರಣೆ ಆರಂಭ
ಗಲ್ಫ್ ವಲಯದಲ್ಲಿ ಶಾಂತಿಯ ಹೊಸ ಪರ್ವ – ಕದನ ವಿರಾಮ ನಿರ್ಧಾರಕ್ಕೆ ಜಿಸಿಸಿ ಪೂರ್ಣ ಬೆಂಬಲ
ಬಹ್ರೇನ್ ವೈಮಾನಿಕ ಮಾರ್ಗ ಮುಕ್ತ- ವಿಮಾನಯಾನ ಪುನಾರಂಭಕ್ಕೆ ಹಸಿರು ನಿಶಾನೆ
ದಾಳಿಯ ಭೀತಿ: ಸೌದಿ-ಬಹ್ರೇನ್ ‘ಕಾಸ್ವೇ’ ಬಂದ್- ಸಂಚಾರ ಸಂಪೂರ್ಣ ಸ್ಥಗಿತ
ಸೌದಿ ಅರೇಬಿಯಾ: ಇನ್ನೂ 69 ಹುದ್ದೆಗಳಲ್ಲಿ ಶೇ.100 ಸ್ವದೇಶೀಕರಣ ಜಾರಿ
ಸೌದಿ: ನಾಳೆಯಿಂದ ಭಾರಿ ಮಳೆ ಸಾಧ್ಯತೆ- ಹವಾಮಾನ ಇಲಾಖೆ ಎಚ್ಚರಿಕೆ
ಇರಾನ್ ದಾಳಿ; ವಿಶ್ವದ ಅತಿದೊಡ್ಡ ‘ಎಮಿರೇಟ್ಸ್ ಗ್ಲೋಬಲ್ ಅಲ್ಯೂಮಿನಿಯಂ’ ಕಾರ್ಯಾಚರಣೆ ಸ್ಥಗಿತ
ಹಜ್-ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಪವಿತ್ರ ಮಕ್ಕಾದಲ್ಲಿ ವಿಮಾನ ನಿಲ್ದಾಣ ನಿರ್ಮಾಣ
ಚಾಲನೆ ವೇಳೆ ತಿಂಡಿ ಮತ್ತು ಮೇಕಪ್ಗೆ ಬ್ರೇಕ್- ಸೌದಿ ಸಂಚಾರಿ ವಿಭಾಗದ ಕಟ್ಟುನಿಟ್ಟಿನ ಸೂಚನೆ