ಮುಈನುಸುನ್ನಾ ಅಧ್ಯಕ್ಷ ರಾದ ಸಯ್ಯಿದ್ ಶಹೀರ್ ಅಲ್ ಬುಖಾರಿ ಪೋಸೋಟ್ ತಂಙಳ್ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಮರ್ಕಝ್ ವೈಸ್ ಚಾನ್ಸೆಲರ್ ಡಾ ಹುಸೈನ್ ಸಖಾಫಿ ಚುಳ್ಳಿಕ್ಕೋಡ್ ಉದ್ಘಾಟಿಸಿದರು . ಮುಈನುಸುನ್ನಾ ಡೈರೆಕ್ಟರ್ ಕೆ.ಎಂ ಮುಸ್ತಫಾ ನಈಮಿ ಹಿಮಮಿ ಹಾವೇರಿ ಪ್ರಾಸ್ತಾವಿಕ ಮಾತನಾಡಿದರು.
ಎಂಟು ವರ್ಷಗಳ ಮುಂಚೆ ಸ್ಥಾಪಿತವಾದ ಈ ಸಂಸ್ಥೆಯಲ್ಲಿ ವಿದ್ಯಾರ್ಜಿಸಿದ 32 ವಿದ್ಯಾರ್ಥಿಗಳಿಗೆ ಹುಸ್ನೀ ಸನದನ್ನು ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಪ್ರಧಾನ ಮಾಡಿ ಸನದುದಾನ ಪ್ರಭಾಷಣ ಗೈದರು. ಸಮಾರಂಭದಲ್ಲಿ ದಅವಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದವರಿಗೆ ನೀಡಲಾಗುವ ಸಯ್ಯಿದ್ ಉಮರುಲ್ ಫಾರೂಖ್ ತಂಙಳ್ ದಅವಾ ಅವಾರ್ಡನ್ನು GM ಮುಹಮ್ಮದ್ ಕಾಮಿಲ್ ಸಖಾಫಿ ಯವರಿಗೆ ನೀಡಿ ಪುರಸ್ಕರಿಸಲಾಯಿತು.
ಸಂಸ್ಥೆಯ ಉಪಾಧ್ಯಕ್ಷ ಸಯ್ಯಿದ್ ಮುನೀರುಲ್ ಅಹ್ದಲ್, ಹಾವೇರಿಯ ಪ್ರಮುಖ ವಿದ್ವಾಂಸರಾದ ಸಯ್ಯಿದ್ ರಿಫಾಯಿ ಬಾಷಾ, SYS ರಾಜ್ಯಾಧ್ಯಕ್ಷ ರಾದ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ , ಸಯ್ಯಿದ್ ಅತ್ಹರ್ ಸಖಾಫಿ ಸವಣೂರು ,SSF ಕೋಶಾಧಿಕಾರಿ ಹಾಫಿಝ್ ಸುಫಿಯಾನ್ ಸಖಾಫಿ ,ಆದಂ ಸಖಾಫಿ ಸೇರಿದಂತೆ ಹಲವು ಗಣ್ಯರು ಭಾಷಣಗೈದರು. ಕೋಶಾಧಿಕಾರಿ ಡಾ ಶೇಖ್ ಬಾವ ಹಾಜಿ ಉಪಸ್ಥಿತರಿದ್ದರು. ಸಯ್ಯಿದ್ ಅತ್ಹರ್ ಸಖಾಫಿ ಸ್ವಾಗತಿಸಿ ,ಮುಈನುಸುನ್ನ ಮ್ಯಾನೇಜರ್ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ