janadhvani

Kannada Online News Paper

ಕೆಸಿಎಫ್ ಒಮಾನ್ ಪ್ರಾಯೋಜಕತ್ವದ ಮಾಝಿನ್ ಹೆರಿಟೇಜ್ ಜಗಳೂರು ಉದ್ಘಾಟನೆ

ಈ ವರದಿಯ ಧ್ವನಿಯನ್ನು ಆಲಿಸಿ

ಕರ್ನಾಟಕ ಕಲ್ಚರಲ್ ಫೌಂಡೇಷನ್ KCF ಪ್ರಾಯೋಜಕತ್ವದ ಇಹ್ಸಾನ್ ಕರ್ನಾಟಕ ಎಜು & ಚಾರಿಟೇಬಲ್ ಟ್ರಸ್ಟ್ , ದಾರುಲ್ ಉಲೂಮ್ ಇಹ್ಸಾನಿಯ್ಯ ಇದರ ಉದ್ಘಾಟನೆಯನ್ನು 2022 ಜುಲೈ 13 ರಂದು ಹಝ್ರತ್ ಮುಹಮ್ಮದ್‌ ಫಾಝಿಲ್ ರಝ್ವಿ ಕಾವಲ್ ಕಟ್ಟೆ ಇವರು ನೆರವೇರಿಸಿದ್ದಾರೆ.

ಂತರ ನೂತನ ಕಟ್ಟಡದಲ್ಲಿ ಮಹ್ಲರತುಲ್ ಬದ್ರಿಯ ಮಜ್ಲಿಸ್ ಒಮಾನ್ ಇಮಾಮ್ ನವವಿ ಮದರಸ ಪ್ರಾಂಶುಪಾಲರಾದ ಎಂ ಎಸ್ ಉಬೈದುಲ್ಲ ಸಖಾಫಿ ಇವರ ನೇತೃತ್ವದಲ್ಲಿ ನಡೆಸಲಾಯಿತು. ಸಯ್ಯದ್ ಸೈಫುದ್ದೀನ್ ಅಲ್ ಹೈದ್ರೋಸಿ ತಂಙಳ್ ಕೊಡಗು ಇವರ ದುಅ ದೊಂದಿಗೆ ಆರಂಭಗೊಂಡ ಸಮಾರಂಭದಲ್ಲಿ ಇಹ್ಸಾನ್ ಕರ್ನಾಟಕ ಇದರ ಅಧ್ಯಕ್ಷ ರಾದ ಬಹು ಎಂ ಐ ಅಬ್ದುಲ್ ಹಫೀಲ್ ಸ ಅದಿ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಶಾಫಿ ಸ ಅದಿ ಇವರು ನೆರವೇರಿಸಿದರು..ಕಾರ್ಯಕ್ರಮ ದಲ್ಲಿ ಗಣ್ಯ ಉಪಸ್ಥಿತಿಗಳಾಗಿ KCF ಒಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಜನಾಬ್ ಅಯ್ಯೂಬ್ ಕೋಡಿ , SYS ರಾಜ್ಯಾಧ್ಯಾಕ್ಷ ಡಾ. ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, SSF ರಾಜ್ಯಾಧ್ಯಕ್ಷ ಅಬ್ದುಲ್ ಲತೀಫ್ ಸ ಅದಿ, ಸ್ಥಳೀಯ ಶಾಸಕ ಎಸ್. ವಿ. ರಾಮಚಂದ್ರ, ನವ ಚೇತನ ಇಂಗ್ಲಿಷ್ ಸ್ಕೂಲ್ ಜಗಳೂರು ಕಾರ್ಯದರ್ಶಿ ಶ್ರೀ ಅರವಿಂದನ್,
ಇಹ್ಸಾನ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಬಜ್ಪೆ, ಸಮಾಜ ಸೇವಕರಾದ ದೇವೇಂದ್ರಪ್ಪ.ಬಿ ಜಗಳೂರು , ಇವರು ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಭಾ ವೇದಿಕೆಯಲ್ಲಿ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ
ಕೋಶಾಧಿಕಾರಿ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ , ಜಗಳೂರು ಪಟ್ಟಣ ಪಂಚಾಯತ್ ಅಧ್ಯಕ್ಷ ಎಸ್ ಸಿಧ್ದಪ್ಪ,
ಮಾಝಿನ್ ಹೆರಿಟೇಜ್ ಕಟ್ಟಡ ನಿರ್ಮಾಣ ಸಮಿತಿ ಚಯರ್ಮೆನ್ ಇಕ್ಬಾಲ್ ಬೊಲ್ಮಾರ್ ಬರ್ಕ, ಮಾಝಿನ್ ಹೆರಿಟೇಜ್ ಕಟ್ಟಡ ನಿರ್ಮಾಣ ಸಮಿತಿ ಕನ್ವೀನರ್ ಸಯ್ಯದ್ ಆಬಿದ್ ಅಲ್ ಹೈದ್ರೋಸಿ ತಂಙಳ್ ಕೊಡಗು, KCF ಒಮಾನ್ ಕೋಶಾಧಿಕಾರಿ ಜನಾಬ್ ಆರಿಫ್ ಕೋಡಿ, KCF ಅಂತರರಾಷ್ಟ್ರೀಯ ಕೌನ್ಸಿಲರ್ ಇಬ್ರಾಹಿಮ್ ಹಾಜಿ ಅತ್ರಾಡಿ, ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಸಾದಿಕ್ ಮಾಸ್ಟರ್ ಮಲೆಬೆಟ್ಟು, ಕೆಸಿಎಫ್ ಒಮಾನ್ ಮೀಡಿಯಾ ವಿಭಾಗದ ಅಧ್ಯಕ್ಷ ಸಿದ್ದೀಕ್ ಮಾಂಬ್ಲಿ‌ ಸುಳ್ಯ, ಕೆಸಿಎಫ್ ಒಮಾನ್ ಐಟೀಮ್ ಕೋರ್ಡಿನೇಟರ್ ಹನೀಫ್ ಮನ್ನಾಫು, ಸಯ್ಯದ್ ಸೈಫುಲ್ಲ ಸಾಬ್ ಜಗಳೂರು,
ಕೆಸಿಎಫ್ ಜುಬೈಲ್ ಸೆಕ್ಟರ್ ಇಹ್ಸಾನ್ ವಿಭಾಗದ ಕಾರ್ಯದರ್ಶಿ ‌ಅಬ್ದುಲ್ ಸಮದ್ ಕಾನಕೆರೆ ,
ಹನೀಫ್ ಸ ಅದಿ ಶಿಕಾರಿಪುರ ,ಕೆಸಿಎಫ್ ಬೌಶರ್ ಝೋನ್ ಅಧ್ಯಕ್ಷ ಸಲೀಮ್ ಮಿಸ್ಬಾಯಿ , ಎಲ್ ವಿಶ್ವನಾಥ್ ಜಗಳೂರು , ಟಿ ನೂರ್ ಮುಹಮ್ಮದ್ ಸಾಬ್, ಸಯ್ಯದ್ ಮುಕ್ತಿಯಾರ್ ಅಹಮದ್ ರಝ್ವಿ, ಶಮೀರ್ ಉಸ್ತಾದ್ ಹೂಡೆ, ಮನಾಫ್ ಹಾಜಿ ದಾವಣಗೆರೆ, ಜೆ ಆರ್ ಶಫೀಉಲ್ಲ ಖಾನ್, ಖಲಂದರ್ ಹಝ್ರತ್ ಜಗಳೂರು, ಸಯ್ಯದ್ ಸೈಫುದ್ದೀನ್ ರಝ್ವಿ, ಮುಹಮ್ಮದ್ ಅರ್ಪಾತ್ ಮೌಲಾನ, ಮುಹಮ್ಮದ್ ಜಿಯಾಉಲ್ಲ ಹಝ್ರತ್, ಇಮಾಮ್ ಹಸೇನ್ ಹಝ್ರತ್, ಇಹ್ಸಾನ್ ಕರ್ನಾಟಕ ಉಪಾಧ್ಯಕ್ಷ ಬಿ ಎ ಇಬ್ರಾಹಿಮ್ ಸಖಾಫಿ, ಶಿವಮೊಗ್ಗ, ಇಹ್ಸಾನ್ ಕರ್ನಾಟಕ ಕೋಶಾಧಿಕಾರಿ ಅಬ್ದುಲ್ ರಹಮಾನ್ ರಝ್ವಿ ಕಲ್ ಕಟ್ಟ,
ಇಹ್ಸಾನ್ ನಾಯಕರಾದ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಇಸ್ಮಾಯಿಲ್ ಸ ಅದಿ ಕಿನ್ಯ, ಅಬ್ದುಲ್ ಹಮೀದ್ ಮಡಿಕೇರಿ, ಇಸ್ಹಾಕ್ ಝಹುರಿ ಸೂರಿಂಜೆ, ಕೆಸಿಎಫ್ ನಿಝ್ವ ಝೋನ್ ನ ಶಿಕಾರಿಪುರ ಶಾಫಿ ಮದ್ರಸ ಉಸ್ತಾದ್ ಹನೀಫ್
ಸ ಅದಿ, ಅಬ್ದುರಹ್ಮಾನ್ ಮೊಗರ್ಪಣೆ ಸುಳ್ಯ, ಸಿದ್ದೀಕ್ ಕಟ್ಟೆಕ್ಕಾರ್ ಸುಳ್ಯ,
ಮಾಝಿನ್ ಹೆರಿಟೇಜ್ ಕಟ್ಟಡ ಕಾಮಗಾರಿಯ ಕಾಂಟ್ರಾಕ್ಟರ್ ಜನಾಬ್ ಅಕ್ಬರ್ ಉಪ್ಪಳ್ಳಿ ಹಾಗೂ KCF ಒಮಾನ್ ರಾಷ್ಟ್ರೀಯ , ಝೋನ್, ಸೆಕ್ಟರ್ ನಾಯಕರು, ಸದಸ್ಯರು, SYS ,SSF ನಾಯಕರು ಮತ್ತು ಸದಸ್ಯರು ಉಪಸ್ಥಿತರಿದ್ಮರು.
ಕಾರ್ಯಕ್ರಮ ದಲ್ಲಿ ಇಹ್ಸಾನ್ ಕರ್ನಾಟಕ ವತಿಯಿಂದ ಕೆಸಿಎಫ್ ಒಮಾನ್ ನ ರಾಷ್ಟ್ರೀಯ ನಾಯಕರನ್ನು ವೇದಿಕೆಯಲ್ಲಿ ‌ಗೌರವಿಸಲಾಯಿತು ಹಾಗೂ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಕಾವಲ್ಕಟ್ಟೆ ಹಝ್ರತ್, ಶಾಫಿ ಸ ಅದಿ, ಝೈನಿ ಉಸ್ತಾದ್, ಲತೀಫ್ ಸ ಅದಿ, ಅಕ್ಬರ್ ಉಪ್ಪಳ್ಳಿ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಆರಂಭದಲ್ಲಿ ಇಹ್ಸಾನ್ ಕರ್ನಾಟಕ ಕಾರ್ಯದರ್ಶಿ ಶಾಹುಲ್ ಹಮೀದ್ ಮುಸ್ಲಿಯಾರ್ ಸ್ವಾಗತಿಸಿ ಮುಹಮ್ಮದ್ ಇಸ್ಹಾಕ್ ಸಖಾಫಿ ವಂದಿಸಿದರು.

error: Content is protected !! Not allowed copy content from janadhvani.com