janadhvani

Kannada Online News Paper

ಉತ್ತರ ಕರ್ನಾಟಕದ ಸಮನ್ವಯ ಶಿಕ್ಷಣ ಸಂಸ್ಥೆ ಮುಈನುಸುನ್ನ ಹಾವೇರಿ ಇದರ ಹುಸ್ನೀ ಸನದುದಾನ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ

ಈ ವರದಿಯ ಧ್ವನಿಯನ್ನು ಆಲಿಸಿ

ಮುಈನುಸುನ್ನಾ ಅಧ್ಯಕ್ಷ ರಾದ ಸಯ್ಯಿದ್ ಶಹೀರ್ ಅಲ್ ಬುಖಾರಿ ಪೋಸೋಟ್ ತಂಙಳ್‌ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಮರ್ಕಝ್ ವೈಸ್ ಚಾನ್ಸೆಲರ್ ಡಾ ಹುಸೈನ್ ಸಖಾಫಿ ಚುಳ್ಳಿಕ್ಕೋಡ್ ಉದ್ಘಾಟಿಸಿದರು ‌. ಮುಈನುಸುನ್ನಾ ಡೈರೆಕ್ಟರ್ ಕೆ.ಎಂ ಮುಸ್ತಫಾ ನ‌ಈಮಿ ಹಿಮಮಿ ಹಾವೇರಿ ಪ್ರಾಸ್ತಾವಿಕ ಮಾತನಾಡಿದರು.

ಎಂಟು ವರ್ಷಗಳ ಮುಂಚೆ ಸ್ಥಾಪಿತವಾದ ಈ ಸಂಸ್ಥೆಯಲ್ಲಿ ವಿದ್ಯಾರ್ಜಿಸಿದ 32 ವಿದ್ಯಾರ್ಥಿಗಳಿಗೆ ಹುಸ್ನೀ ಸನದನ್ನು ‌ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಪ್ರಧಾನ ಮಾಡಿ ಸನದುದಾನ ಪ್ರಭಾಷಣ ಗೈದರು. ಸಮಾರಂಭದಲ್ಲಿ ದ‌ಅವಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದವರಿಗೆ ನೀಡಲಾಗುವ ಸಯ್ಯಿದ್ ಉಮರುಲ್ ಫಾರೂಖ್ ತಂಙಳ್ ದಅವಾ ಅವಾರ್ಡನ್ನು GM ಮುಹಮ್ಮದ್ ಕಾಮಿಲ್ ಸಖಾಫಿ ಯವರಿಗೆ ನೀಡಿ ಪುರಸ್ಕರಿಸಲಾಯಿತು.

ಸಂಸ್ಥೆಯ ಉಪಾಧ್ಯಕ್ಷ ಸಯ್ಯಿದ್ ಮುನೀರುಲ್ ಅಹ್ದಲ್, ಹಾವೇರಿಯ ಪ್ರಮುಖ ವಿದ್ವಾಂಸರಾದ ಸಯ್ಯಿದ್ ರಿಫಾಯಿ ಬಾಷಾ, SYS ರಾಜ್ಯಾಧ್ಯಕ್ಷ ರಾದ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ , ಸಯ್ಯಿದ್ ಅತ್ಹರ್ ಸಖಾಫಿ ಸವಣೂರು ,SSF ಕೋಶಾಧಿಕಾರಿ ಹಾಫಿಝ್ ಸುಫಿಯಾನ್ ಸಖಾಫಿ ,ಆದಂ ಸಖಾಫಿ ಸೇರಿದಂತೆ ಹಲವು ಗಣ್ಯರು ಭಾಷಣಗೈದರು. ಕೋಶಾಧಿಕಾರಿ ಡಾ ಶೇಖ್ ಬಾವ ಹಾಜಿ ಉಪಸ್ಥಿತರಿದ್ದರು. ಸಯ್ಯಿದ್ ಅತ್ಹರ್ ಸಖಾಫಿ ಸ್ವಾಗತಿಸಿ ,ಮುಈನುಸುನ್ನ ಮ್ಯಾನೇಜರ್ ವಂದಿಸಿದರು.

error: Content is protected !! Not allowed copy content from janadhvani.com