ಕುವೈತ್ ಸಿಟಿ: ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್ ದಾಳಿಯಿಂದಾಗಿ ಕುವೈತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಒಂದಕ್ಕೆ ತೀವ್ರ ಹಾನಿ ಸಂಭವಿಸಿದ ಹಿನ್ನೆಲೆಯಲ್ಲಿ, ವಿದೇಶಿ ಮತ್ತು ಗಲ್ಫ್ ವಿಮಾನಯಾನ ಸಂಸ್ಥೆಗಳಿಗೆ ಟರ್ಮಿನಲ್ ನಾಲ್ಕರಿಂದ ಸೀಮಿತ ಸೇವೆಗಳನ್ನು ನಡೆಸಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಅನುಮತಿ ನೀಡಿದೆ.
ದಾಳಿಯಲ್ಲಿ ಒಬ್ಬ ಭಾರತೀಯ ಮೃತಪಟ್ಟು, ಅರವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡ ಬೆನ್ನಲ್ಲೇ ಟರ್ಮಿನಲ್ ಒಂದರಿಂದ ಕಾರ್ಯಾಚರಣೆ ನಡೆಸುತ್ತಿದ್ದ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ದುರಸ್ತಿ ಕಾರ್ಯಗಳಿಗಾಗಿ ಟರ್ಮಿನಲ್ ಒಂದನ್ನು ಮುಚ್ಚಿರುವ ಪರಿಸ್ಥಿತಿಯಲ್ಲಿ, ಕುವೈತ್ ಏರ್‌ವೇಸ್ ಮಾತ್ರ ಬಳಸುತ್ತಿದ್ದ ಟರ್ಮಿನಲ್ ನಾಲ್ಕನ್ನು ವಿದೇಶಿ ವಿಮಾನಗಳಿಗಾಗಿ ತಾತ್ಕಾಲಿಕವಾಗಿ ಮುಕ್ತಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಪ್ರಸ್ತುತ ಜಝೀರಾ ಏರ್‌ವೇಸ್ ಟರ್ಮಿನಲ್ ಐದರಿಂದ ತನ್ನ ಸೇವೆಯನ್ನು ಮುಂದುವರಿಸುತ್ತಿದೆ.
ಶಾಲಾ ರಜೆ ಆರಂಭವಾಗಿರುವುದರಿಂದ ತಾಯ್ನಾಡಿಗೆ ಮರಳಲು ಸಾಧ್ಯವಾಗದೆ ಪರದಾಡುತ್ತಿದ್ದ ಸಾವಿರಾರು ಅನಿವಾಸಿ ಕುಟುಂಬಗಳಿಗೆ ಈ ನಿರ್ಧಾರವು ದೊಡ್ಡ ಸಮಾಧಾನ ತಂದಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ವಿಮಾನಗಳು ಸೇವೆ ಆರಂಭಿಸುವುದರಿಂದ ಗಗನಕ್ಕೇರಿರುವ ಟಿಕೆಟ್ ದರದಲ್ಲಿ ಇಳಿಕೆಯಾಗಬಹುದು ಎಂಬುದು ಅನಿವಾಸಿಗಳ ನಿರೀಕ್ಷೆಯಾಗಿದೆ. ಭದ್ರತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸೇವೆಗಳನ್ನು ಹಂತಹಂತವಾಗಿ ವಿಸ್ತರಿಸಲಾಗುವುದು ಮತ್ತು ಪ್ರಯಾಣಿಸುವ ಮುನ್ನ ವಿಮಾನದ ವೇಳಾಪಟ್ಟಿಯನ್ನು ಆಯಾ ವಿಮಾನಯಾನ ಸಂಸ್ಥೆಗಳೊಂದಿಗೆ ಸಂಪರ್ಕಿಸಿ ಖಚಿತಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಪ್ರಯಾಣಿಕರಲ್ಲಿ ವಿನಂತಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ