ಅಬುಧಾಬಿ: ಅನಿವಾಸಿ ಕನ್ನಡಿಗರ ಪ್ರಮುಖ ಸಾಮಾಜಿಕ ಸಂಘಟನೆಯಾದ ಕೆಸಿಎಫ್ ಯುಎಇ (KCF UAE) ವತಿಯಿಂದ ಸದಸ್ಯರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣವನ್ನು ಮುನ್ನಿಟ್ಟುಕೊಂಡು ರೂಪಿಸಲಾದ ಮಹತ್ವಾಕಾಂಕ್ಷಿ ‘ಮೆಂಬರ್ ರಿಲೀಫ್ ಫಂಡ್’ (MRF) ಯೋಜನೆಯ 2026–2028ರ ಸಾಲಿನ ಅವಧಿಗೆ ಅಧಿಕೃತ ಚಾಲನೆ ನೀಡಲಾಗಿದೆ. ಇಲ್ಲಿನ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೆಸಿಎಫ್ ಯುಎಇ ಅಧ್ಯಕ್ಷರಾದ ಕೆದುಂಬಾಡಿ ಇಬ್ರಾಹಿಂ ಸಖಾಫಿ ಉಸ್ತಾದರು ಯೋಜನೆಗೆ ಚಾಲನೆ ನೀಡಿದರು.
ಯುಎಇಯಲ್ಲಿರುವ ಕೆಸಿಎಫ್ ಸದಸ್ಯರು ಎದುರಿಸಬಹುದಾದ ಅನಿರೀಕ್ಷಿತ ಸಂಕಷ್ಟಗಳು, ಅಪಘಾತಗಳು, ಗಂಭೀರ ಆರೋಗ್ಯ ಸಮಸ್ಯೆಗಳು ಹಾಗೂ ಇತರ ತುರ್ತು ಸಂದರ್ಭಗಳಲ್ಲಿ ತಕ್ಷಣದ ಆರ್ಥಿಕ ಮತ್ತು ಮಾನವೀಯ ನೆರವು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಸದಸ್ಯರ ಸಂಕಷ್ಟದ ಸಮಯದಲ್ಲಿ ಭರವಸೆಯ ಹಸ್ತ ಚಾಚುವ ನಿಟ್ಟಿನಲ್ಲಿ ಈ ಕಲ್ಯಾಣ ಯೋಜನೆಯನ್ನು ಅತ್ಯಂತ ವ್ಯವಸ್ಥಿತವಾಗಿ ರೂಪಿಸಲಾಗಿದೆ.
ಎಂಆರ್‌ಎಫ್ ಯೋಜನೆಯು ಮೊದಲ ಬಾರಿಗೆ 2016ರಲ್ಲಿ ಸ್ಥಾಪನೆಯಾಗಿದ್ದು, ಕಳೆದ ಅವಧಿಗಳಲ್ಲಿ ಹಲವಾರು ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ನೆರವು ನೀಡುವ ಮೂಲಕ ಯಶಸ್ಸು ಕಂಡಿತ್ತು. ಪ್ರಸ್ತುತ ಸಮಾಜ ಎದುರಿಸುತ್ತಿರುವ ವಿವಿಧ ಆರ್ಥಿಕ ಅನಿಶ್ಚಿತತೆಗಳು ಮತ್ತು ಆರೋಗ್ಯ ರಂಗದ ಸವಾಲುಗಳನ್ನು ಮನಗಂಡು, ಸದಸ್ಯರ ಹಿತರಕ್ಷಣೆಗಾಗಿ ಈ ಯೋಜನೆಯನ್ನು ಮತ್ತಷ್ಟು ಬಲಪಡಿಸಿ ಪುನಃ ಮರುಸ್ಥಾಪಿಸಲಾಗಿದೆ.
2013ರಲ್ಲಿ ಸಂಘಟನೆ ಅಸ್ಸಿತ್ವಕ್ಕೆ ಬಂದ ಬಳಿಕ ಕೆಸಿಎಫ್ ಯುಎಇ ಸಂಘಟನೆಯು ಶಿಕ್ಷಣ, ಸಾಂತ್ವನ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಿಗೆ ವಿಶೇಷ ಆದ್ಯತೆ ನೀಡುತ್ತಾ ಬಂದಿದೆ. ಈಗಾಗಲೇ ಪ್ರವಾಸಿ ಕನ್ನಡಿಗರು ಹಾಗೂ ಸಮುದಾಯದ ವಿವಿಧ ವರ್ಗಗಳ ಕಲ್ಯಾಣಕ್ಕಾಗಿ ಅಸ್ಸುಫ್ಫಾ (Assufa), ಇಹ್ಸಾನ್ (Ihsaan), ಗಲ್ಫ್ ಇಶಾರಾ, HVC, MRF, We Care, ದಾರುಲ್ ಅಮಾನ್, Blood Saibo, ಸ್ವಾಲಿಹ ಮತ್ತು MMP ಸೇರಿದಂತೆ ಹಲವು ಜನಪ್ರಿಯ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಈ ಯೋಜನೆಗಳು ಶಿಕ್ಷಣ, ಆರೋಗ್ಯ, ಪುನರ್ವಸತಿ ಮತ್ತು ಮಾನವೀಯ ಸೇವೆಗಳ ಮೂಲಕ ಸಾವಿರಾರು ಜನರ ಬದುಕಿನಲ್ಲಿ ಆಶಾಕಿರಣ ಮೂಡಿಸಿವೆ.
3,000 ಸದಸ್ಯರ ಸೇರ್ಪಡೆ ಗುರಿ
ಮುಂಬರುವ 2026–2028ರ ಅವಧಿಯಲ್ಲಿ ಒಟ್ಟು 3,000ಕ್ಕೂ ಅಧಿಕ ಸದಸ್ಯರನ್ನು ಎಂಆರ್‌ಎಫ್ ಯೋಜನೆಯ ವ್ಯಾಪ್ತಿಗೆ ತರುವ ಬೃಹತ್ ಗುರಿಯನ್ನು ಸಂಘಟನೆ ಹೊಂದಿದೆ. ಈ ಮೂಲಕ ಸದಸ್ಯರ ಸುರಕ್ಷತೆ ಮತ್ತು ಸಾಮಾಜಿಕ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ನಿರ್ಧರಿಸಲಾಗಿದೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ.
ಪ್ರಮುಖರ ಉಪಸ್ಥಿತಿ:
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಿಲ, ವೆಲ್ಫೇರ್ ಇಲಾಖೆಯ ಅಧ್ಯಕ್ಷರಾದ ಇಕ್ಬಾಲ್ ಕಾಜೂರು, ಪ್ರಕಾಶನ ಇಲಾಖೆಯ ಕಾರ್ಯದರ್ಶಿ ಕರೀಂ ಮುಸ್ಲಿಯಾರ್, ಯುಎಇ ಎಂಆರ್‌ಎಫ್ ಚೇರ್ಮನ್ ನಲ್ಕ ಅಬ್ದುಲ್ಲಾಹ್ ಹಾಜಿ, ಕೋ-ಆರ್ಡಿನೇಟರ್ ನವಾಝ್ ಹಾಜಿ ಕೋಟೆಕಾರ್ ಸೇರಿದಂತೆ ರಾಷ್ಟ್ರೀಯ ಕ್ಯಾಬಿನೆಟ್ ಹಾಗೂ ಕಾರ್ಯಕಾರಿ ಸಮಿತಿಯ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಮಾತನಾಡಿದ ಪ್ರಮುಖ ನಾಯಕರು, ಪ್ರಸ್ತುತ ಸಂದರ್ಭದಲ್ಲಿ ಸದಸ್ಯರ ಸುರಕ್ಷತೆ ಮತ್ತು ಕಲ್ಯಾಣ ಕಾಯ್ದುಕೊಳ್ಳುವಲ್ಲಿ ಎಂಆರ್‌ಎಫ್ ಯೋಜನೆ ಅತ್ಯಂತ ನಿರ್ಣಾಯಕ ಮತ್ತು ಮಹತ್ವದ ಪಾತ್ರ ವಹಿಸಲಿದೆ ಎಂದು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.
















ಇನ್ನಷ್ಟು ಸುದ್ದಿಗಳು
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ
ಮದ್ರಸ ಮುಅಲ್ಲಿಮರ ಮೇಲೆ ಹಲ್ಲೆ ಪ್ರಕರಣ: ಎಸ್ಜೆಎಂ ದ.ಕ. ಸೌತ್ ಜಿಲ್ಲಾ ಸಮಿತಿ ತೀವ್ರ ಖಂಡನೆ
ಮದ್ರಸಾ ಅಧ್ಯಾಪಕರ ಮೇಲೆ ಹಲ್ಲೆ- ಎಸ್.ವೈ.ಎಸ್ ದ.ಕ ಜಿಲ್ಲೆ ವೆಸ್ಟ್ ಖಂಡನೆ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ