ಪುತ್ತೂರು: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ಅತಿಥಿ ಶಿಕ್ಷಕರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ವತಿಯಿಂದ ಉಪ ತಹಶೀಲ್ದಾರ್‌ರವರಿಗೆ ಮನವಿ ಸಲ್ಲಿಸಲಾಯಿತು.
ಸಮಾಜದಲ್ಲಿ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರು ಬೀದಿ ಪಾಲಾಗಿದ್ದಾರೆ. ಲಾಕ್‌ಡೌನ್ ನಂತರ ಸರಿಯಾದ ವೇತನ ಪಾವತಿಯಾಗದೆ ಪರಿತಪಿಸುತ್ತಿದ್ದಾರೆ. ಕಳೆದ 18 ತಿಂಗಳುಗಳಿಂದ ಯಾವುದೇ ವರಮಾನವಿಲ್ಲದೆ ತಮ್ಮ ಜೀವನೋಪಾಯಕ್ಕಾಗಿ ದಿನಗೂಲಿ ಮಾಡುತ್ತಿದ್ದಾರೆ ಹಾಗಾಗಿ ಸರ್ಕಾರ ಈ ಎಲ್ಲಾ ಸಮಸ್ಯೆಯನ್ನು ಮನಗಂಡು ಅತಿಥಿ ಶಿಕ್ಷಕರನ್ನು ಖಾಯಂ ಆಗಿ ಭಡ್ತಿ ನೀಡಬೇಕು. ಬಾಕಿ ವೇತನ ಬಿಡುಗಡೆಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಮುಸ್ತಾಫ ಕೊಡಿಪ್ಪಾಡಿ ಸಮಿತಿ ಸದಸ್ಯರಾದ ಫಾರೂಕ್ ಕಬಕ,ಸಮ್ಮಾಸ್ ಬನ್ನೂರು ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
















ಇನ್ನಷ್ಟು ಸುದ್ದಿಗಳು
ಇಡ್ಕಿದು ಗ್ರಾಮದ ಕೋಲ್ಪೆ ವಡ್ಯರ್ಪೆ – ವಾದಿಮಜಲು ರಸ್ತೆ: ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ
ಎಸ್ ಎಂ ಎ ಈಸ್ಟ್ ಜಿಲ್ಲಾ ಸಮಿತಿ ವತಿಯಿಂದ ಎಸ್ ಎಂ ಎ ನಡೆ ಮೊಹಲ್ಲಾ ಕಡೆ- ಸ್ವಾಗತ ಸಮಿತಿ ರಚನೆ
ಬೆಳ್ಳಾರೆಯಲ್ಲಿ ಸುನ್ನೀ ಆದರ್ಶ ಸಮ್ಮೇಳನ- ಬಹು|ವಹ್ಹಾಬ್ ಸಖಾಫಿ ಮಂಬಾಡ್ ಮುಖ್ಯ ಭಾಷಣ
ಕಾಣಿಯೂರು ಹಲ್ಲೆ ಪ್ರಕರಣ: ಅ.28 ರಂದು ಯುವಜನ ಪರಿಷತ್ ಪ್ರತಿಭಟನಾ ಜಾಥಾ- ಯಶಸ್ವಿಗೊಳಿಸಲು ಕರೆ
ಅ.5 ರಂದು ಪುತ್ತೂರಿನಲ್ಲಿ ಮೀಲಾದ್ ರ್ಯಾಲಿ- SYS ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಸುಳ್ಯ ವಿದ್ಯಾರ್ಥಿಗೆ ಹಲ್ಲೆ ಪ್ರಕರಣ: ಕಲಂ 307 ಅಡಿಯಲ್ಲಿ ಪ್ರಕರಣ ದಾಖಲಿಸಲು ಕ್ಯಾಂಪಸ್ ಫ್ರಂಟ್ ಡಿವೈಎಸ್ಪಿಗೆ ಮನವಿ
ಕ್ಯಾಂಪಸ್ ಫ್ರಂಟ್ ಸದಸ್ಯತ್ವ ಅಭಿಯಾನಕ್ಕೆ ಪುತ್ತೂರಿನಲ್ಲಿ ಚಾಲನೆ
ಪುತ್ತೂರು: ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸಿಎಫ್ಐ ವತಿಯಿಂದ ಸನ್ಮಾನ
ಪಠ್ಯಕ್ರಮದಲ್ಲಿ ಆರೆಸ್ಸೆಸ್ ಸಂಸ್ಥಾಪಕ ಹೆಡ್ಗೆವಾರ್ ಭಾಷಣ ಸೇರ್ಪಡೆ- ಹಿಂಪಡೆಯಲು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ
ಬನ್ನೂರು: ತಾಜುಲ್ ಉಲಮಾ ಸುನ್ನಿ ಚಾರಿಟೇಬಲ್ ಟ್ರಸ್ಟ್ ನ ಘೋಷಣಾ ಸಮಾವೇಶ