janadhvani

Kannada Online News Paper

ಕೆಮ್ಮಾರ ಮಸೀದಿಯಲ್ಲಿ ಪಂಚದಿನ ಧಾರ್ಮಿಕ ಉಪನ್ಯಾಸ

ಕೆಮ್ಮಾರ: ಇಲ್ಲಿನ ಮುಹ್ಯಿಯುದ್ದೀನ್ ಜುಮುಅ ಮಸ್ಜಿದ್ ನಲ್ಲಿ ಅಶೈಖ್ ಮುಹ್ಯಿಯುದ್ದೀನ್ ಅಬ್ದುಲ್ ಖಾದಿರ್ ಜೀಲಾನಿ (ಖ.ಸಿ.ಅ) ರವರ ಹೆಸರಿನಲ್ಲಿ ಪ್ರತೀ ವರ್ಷ ಆಚರಿಸಿಕೊಂಡು ಬರುತ್ತಿರುವ ಮೌಲೂದು ನೇರ್ಚೆಯ ಅಂಗವಾಗಿ ಐದು ದಿನಗಳ ಮತಪ್ರವಚನ ಕಾರ್ಯಕ್ರಮವು ದಿನಾಂಕ 1-4-2018 ರಿಂದ 5-4-2018ರವರೆಗೆ ಅಸ್ಸಯ್ಯದ್ ಕೆ.ಎಸ್.ಆಟಕೋಯ ತಂಙಳ್, ಕುಂಬೋಳ್ ಇವರ ಘನ ಅಧ್ಯಕ್ಷತೆಯಲ್ಲಿ ಕೆಮ್ಮಾರ ಮಸೀದಿ ವಠಾರದಲ್ಲಿ ನಡೆಯಲಿದೆ. ಪ್ರತೀ ದಿನ ರಾತ್ರಿ 8ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದೆ.

ಸ್ಥಳೀಯ ಮುದರಿಸ್ ಹಾಫಿಳ್ ಮುಹಮ್ಮದ್ ಇಲ್ಯಾಸ್ ಸಖಾಫಿ, ಮಾಡನ್ನೂರು,ಬಹು: ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು, ದ.ಕ. ಜಿಲ್ಲಾ ಎಸ್ಸೆಸ್ಸಫ್ ಅಧ್ಯಕ್ಷರಾದ ಸಿರಾಜುದ್ದೀನ್ ಸಖಾಫಿ ಕನ್ಯಾನ, ಬಹು:ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು ಹಾಗೂ ಕೊನೆಯ ದಿನ ಸ್ವಲಾಹುದ್ದೀನ್ ಸಖಾಫಿ ಮುಂತಾದವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.ಶುಕ್ರವಾರ ಮಹಾಸಭೆ ಹಾಗೂ ಶನಿವಾರ ಮದ್ಯಾಹ್ನ ಮೌಲಿದ್ ನೇರ್ಚೆ ನಡೆಯಲಿದೆ ಎಂದು ಕೆಮ್ಮಾರ ಮುಹ್ಯಿಯುದ್ದೀನ್ ಜುಮುಅ ಮಸ್ಜಿದ್ ಆಡಳಿತ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

ಇದನ್ನೂ ಓದಿರಿ...