janadhvani

Kannada Online News Paper

ಎಪ್ರಿಲ್ 15 ನೆಲ್ಯಾಡಿ ಸುನ್ನೀ ಸಮ್ಮೇಳನಕ್ಕೆ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್

ನೆಲ್ಯಾಡಿ: ಸುನ್ನೀ ಯುವ ಸಂಘ, ಸುನ್ನೀ ಸ್ಟುಡೆಂಟ್ ಫಡರೇಶನ್ ನೆಲ್ಯಾಡಿ ಇದರ ಜಂಟಿ ಆಶ್ರಯದಲ್ಲಿ 2018 ಎಪ್ರಿಲ್ 15 ರಂದು ಬೃಹತ್ ಸುನ್ನೀ ಮಹಾ ಸಮ್ಮೇಳನ ನಡೆಯಲಿದೆ.

ಕಾರ್ಯಕ್ರಮದ ನೇತೃತ್ವವನ್ನು ಅಖಿಲ ಭಾರತ ಸುನ್ನೀ ಜಂಹಿಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ವಹಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿಯಾದ ಅಸೈಯ್ಯದ್ ಫಝಲ್ ಕೋಯಮ್ಮ ಕೂರ ತಂಞಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಪ್ರಭಾಷಣಗಾರರಾಗಿ ಮುಲ್ಲೂರ್ಕರ ಮುಹಮ್ಮದಲಿ ಸಖಾಫಿ ಆಗಮಿಸಲಿದ್ದಾರೆ.
ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಶೈಖುನಾ ಬೇಕಲ್ ಉಸ್ತಾದ್, ಅಸೈಯ್ಯದ್ ಸದಾತ್ ತಂಞಲ್, ಅಸೈಯ್ಯದ್ ಮಲ್ಜಹ್ ಜಲಾಲುದ್ದೀನ್ ತಂಞಲ್, ಅಸೈಯ್ಯದ್ ಶಿಹಾಬುದ್ದೀನ್ ತಂಞಳ್ ಕಿಲ್ಲೂರು, ಝೈನುಲಾಬಿದೀನ್ ತಂಞಳ್ ಕಾಜೂರು, ಉಜಿರೆ ಇಸ್ಮಾಯಿಲ್ ತಂಞಳ್, ಕಾವಲ್ಕಟ್ಟೆ ಹಝ್ರತ್, ಕರ್ನಾಟಕ ರಾಜ್ಯ ಯೋಜನ ಆಯೋಗದ ಉಪಾಧ್ಯಕ್ಷರಾದ ಸಿ.ಎಂ ಇಬ್ರಾಹಿಂ, ಕರ್ನಾಟಕ ರಾಜ್ಯ ಆಹಾರ ಸಚಿವರಾದ ಯು.ಟಿ ಖಾದರ್, ಸಚಿವರಾದ ತನ್ವೀರ್ ಸೇಠ್, ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈ ಶಾಸಕರಾದ ಜಮೀರ್ ಅಹಮ್ಮದ್ ಖಾನ್, ಜನಾಬ್ ಬಿ. ಎಂ ಫಾರೂಖ್ ಹಾಜಿ, ಎನೋಪ್ಪೋಯ ಅಬ್ದುಲ್ಲಾ ಕುಂಞಿ, ವಿನಯ್ ಕುಮಾರ್ ಸೊರಕೆ, ಮೌಲಾನಾ ಶಾಫೀ ಸಹದಿ ಬೆಂಗಳೂರು, ಅಲ್ಲದೇ ಹಲವಾರು ಉಲಮಾ ಉಮರಾ ನಾಯಕರು ಭಾಗವಹಿಸಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಜಿಲ್ಲೆಯ ನಾನಾ ಕಡೆಗಳಿಂದ ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಚೆಯರ್ಮೇನ್ ಉಸ್ಮಾನ್ ಜೌಹರಿಯವರು ತಿಳಿಸಿದ್ದಾರೆ.

error: Content is protected !! Not allowed copy content from janadhvani.com