janadhvani

Kannada Online News Paper

ಕೊಡಂಗಾಯಿ ಚಾಂಪಿಯನ್ ಲೀಗ್ ವತಿಯಿಂದ ಯಶಸ್ವಿ ರಕ್ತದಾನ ಶಿಬಿರ

ವಿಟ್ಲ : ಇಲ್ಲಿಗೆ ಸಮೀಪದ ಕೊಡಂಗಾಯಿಯ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸಿ ಮುನ್ನುಗ್ಗುತ್ತಿರುವ ಉತ್ಸಾಹಿ ಯುವಕರ ಸಂಘಟನೆಯಾದ ಕೊಡಂಗಾಯಿ ಚಾಂಪಿಯನ್ ಲೀಗ್ (KCL) ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರವು ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಮರ್ಹೂಂ ಎಂ.ಕೆ ಉಮರ್ ಫಾರೂಕ್ ಕೊಡಂಗಾಯಿ ಮತ್ತು ಮುಹಮ್ಮದ್ ಮೋನು ಬಿಕ್ನಾಜೆಯವರ ಸ್ಮರಣಾರ್ಥವಾಗಿ ಆಯೋಜಿಸಿದ ಪ್ರಸ್ತುತ ಕಾರ್ಯಕ್ರಮವನ್ನು ಸ್ಥಳೀಯ ಖತೀಬ್ ಉಸ್ತಾದ್ ಸಿದ್ಧೀಖ್ ಅರ್ಶದಿ ಯವರ ಪ್ರಾರ್ಥನೆಯೊಂದಿಗೆ ಆರಂಭಿಸಲಾಯಿತು.
ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಂಜೆಎಂ ಕೊಡಂಗಾಯಿ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಕೆ ಮುಹಮ್ಮದ್, ರಹೀಮ್ ತಾಯಿಫ್, ಸಮದ್ ಅಬುಧಾಬಿ, ಹ‌ಸೈನಾರ್ ತಾಯಿಫ್, ಉಮ್ಮಿ ಕತರ್ ಅಲ್ಲದೆ ಅನೇಕ ಅತಿಥಿಗಳು ಉಪಸ್ಥಿತರಿದ್ದರು.
ಆರಂಭದಲ್ಲಿ ವ್ಯವಸ್ಥಾಪಕರಾದ ಅಝರುದ್ದೀನ್ RCK ಸ್ವಾಗತಿಸಿ ಕೊನೆಯಲ್ಲಿ ರಫೀಕ್ P ಧನ್ಯವಾದ ಸಲ್ಲಿಸಿದರು. ನೂರಾರು ಜನರು ರಕ್ತ ನೀಡಿ ಸಹಕರಿಸಿದರು.

ವರದಿ: ರಮೀಝ್ ಎಂ ಕೆ ಕೊಡಂಗಾಯಿ.