janadhvani

Kannada Online News Paper

ಪುತ್ತೂರು ಕಮ್ಯುನಿಟಿ ಸೆಂಟರ್ ಮೂಲಕ ಸರಕಾರಿ ಪ್ರೌಡ ಶಾಲೆ ಕೊಂಬೆಟ್ಟುವಿನಲ್ಲಿ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ

ಪುತ್ತೂರು ಕಮ್ಯುನಿಟಿ ಸೆಂಟರ್ ಮೂಲಕ ಸರಕಾರಿ ಪ್ರೌಡ ಶಾಲೆ ಕೊಂಬೆಟ್ಟುವಿನಲ್ಲಿ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ ಆಯೋಜಿಸಲಾಗಿತ್ತು.

ರಫೀಕ್ ಮಾಸ್ಟರ್ ರವರು ನಡೆಸಿಕೊಟ್ಟ ಕಾರ್ಯಾಗಾರದಲ್ಲಿ 268 ವಿಧ್ಯಾರ್ಥಿಗಳು ಭಾಗವಹಿಸಿದರು. ಕುಂಬ್ರ ಪ್ರೌಡ ಶಾಲೆಯಲ್ಲಿ ಪರೀಕ್ಷಾ ತಯಾರಿ ಬಗ್ಗೆ ಮೌಲಾನಾ ಆಝಾದ್ ಸ್ಕೂಲ್ ನ ಉಪ ಪ್ರಾಂಶುಪಾಲರಾದ ತೌಫೀಕ್ (ಬಿ.ಎಡ್. ಎಂ.ಎ ಎಕಾನಮಿಕ್ಸ್) ರವರು ಮಾರ್ಗದರ್ಶನ ನೀಡಿದರು. ಕಳೆದ ಒಂದು ವಾರದಿಂದ ಸುಮಾರು 680 ವಿಧ್ಯಾರ್ಥಿಗಳು ಇದರ ಪ್ರಯೋಜನ ಪಡೆದರು.

ಪುತ್ತೂರು ತಾಲೂಕು ಶಿಕ್ಷಣಾಧಿಕಾರಿ ಶ್ರೀಯುತ ಲೋಕೇಶ್ ರವರ ಮಾರ್ಗದರ್ಶನದಲ್ಲಿ ಈ ಕಾರ್ಯಾಗಾರ ನಡೆಯುತ್ತಿದೆ.