ನವದೆಹಲಿ: ಚುನಾವಣಾ ಗುರುತಿನ ಚೀಟಿಯ (Voter Id) ಡಿಜಿಟಲ್ ಆವೃತಿ ಸೋಮವಾರ ಅಂದರೆ ಜನವರಿ 25ರಿಂದ ಲಭ್ಯವಾಗಲಿದೆ. ಇದಕ್ಕಾಗಿ ಚುನಾವಣಾ ಆಯೋಗವು (Election Commission) e-EPIC ಆ್ಯಪನ್ನು ಬಿಡುಗಡೆ ಮಾಡಲಿದೆ. ಈ ಆ್ಯಪ್ ನ ಸಹಾಯದಿಂದ ಆಧಾರ್ ಕಾರ್ಡ್ ನಂತೆಯೇ ವೋಟರ್ ಐಡಿಯನ್ನುಕೂಡಾ ಆನ್ ಲೈನ್ ನಲ್ಲಿ ಪಡೆಯಬಹುದಾಗಿದೆ.
ಈ ಅಪ್ಲಿಕೇಶನ್ ಅನ್ನು ಎರಡು ಹಂತಗಳಲ್ಲಿ ಪ್ರಾರಂಭಿಸಲಾಗುವುದು. ಮೊದಲ ಹಂತ ಜನವರಿ 25 ರಿಂದ ಜನವರಿ 31 ರವರೆಗೆ ನಡೆಯಲಿದೆ. ಈ ವೇಳೆ 19 ಸಾವಿರ ಹೊಸ ಮತದಾರರಿಗೆ ಈ ಸೌಲಭ್ಯ ಲಾಭ ಪಡೆಯಲು ಅನುವು ಮಾಡಿಕೊಡಲಾಗಿದೆ. ಎರಡನೇ ಹಂತ ಫೆಬ್ರವರಿ 1 ರಿಂದ ಪ್ರಾರಂಭವಾಗಲಿದ್ದು, ಇದರಲ್ಲಿ ಎಲ್ಲಾ ಮತದಾರರು ಈ ಸೌಲಭ್ಯದ ಲಾಭ ಪಡೆಯಬಹುದಾಗಿದೆ.
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸುವಾಗ ಮೊಬೈಲ್ (Mobile) ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ. ಮತದಾರರ ಪಟ್ಟಿಯಲ್ಲಿ(Voter List) ಮೊಬೈಲ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಿದ ನಂತರ, ಫೋನ್ (Phone) ಮೂಲಕ ಸಂದೇಶವನ್ನು ರವಾನಿಸಲಾಗುತ್ತದೆ. ನಂತರ ಸಿಗುವ ಒಟಿಪಿಯನ್ನುಬಳಸಿ e-EPIC ಆ್ಯಪನ್ನು ಡೌನ್ ಲೋಡ್ ಮಾಡಲು ಸಾಧ್ಯವಾಗುತ್ತದೆ.
ಹಳೆಯ ಮತದಾರರು ಕೆವೈಸಿ ಪಡೆಯಬೇಕಾಗುತ್ತದೆ:
ಈಗಾಗಲೇ ವೋಟರ್ ಐಡಿ (Voter ID) ಹೊಂದಿರುವವರು, ಡಿಜಿಟಲ್ ಕಾರ್ಡ್ ಗಾಗಿ ಡಿಜಿಟಲ್ ವೇರಿಫಿಕೆಶನ್ ಮಾಡಿಸಿಕೊಳ್ಳಬೇಕಾಗುತ್ತದೆ. ಇದು ಬ್ಯಾಂಕಿನ (Bank) ಕೆವೈಸಿ ಪ್ರಕ್ರಿಯೆಯನ್ನು ಹೋಲುತ್ತದೆ. ಇಲ್ಲಿಯೂ, ಮತದಾರ ತನ್ನಮೊಬೈಲ್ ನಂಬರ್ ಮತ್ತು ಇಮೇಲ್ ಐಡಿಯನ್ನುನೀಡಬೇಕು. ಈ ಪೋನ್ ನಂಬರ್ ಮತ್ತು ಇಮೇಲ್ ಐಡಿ ಮೂಲಕವೇ ಮಾಹಿತಿಯನ್ನು ನೀಡಲಾಗುತ್ತದೆ.
ಡಿಜಿಟಲ್ ಕಾರ್ಡ್ ನಿಂದ ಆಗುವ ಲಾಭ :
ಇನ್ನು ವೋಟರ್ ಐಡಿ ಪಡೆಯಲು ಬಹಳ ಸಮಯದವರೆಗೆ ಕಾಯುವ ಅಗತ್ಯವಿರುವುದಿಲ್ಲ. ಹೊಸ ಗುರುತಿನ ಚೀಟಿ ಪಡೆಯಲು ಅಥವಾ ಗುರುತಿನ ಚೀಟಿಯನ್ನು ಬದಲಾಯಿಸಲು ಕಚೇರಿಗಳಿಗೆ ಸುತ್ತುವ ಅಗತ್ಯವೂ ಇಲ್ಲ. ಪೋನಿನಲ್ಲಿಯೇ e-EPIC ಆ್ಯಪನ್ನು ಡೌನ್ ಲೋಡ್ ಮಾಡಿಕೊಂಡು, ಡಿಜಿಟಲ್ ವೋಟರ್ ಐಡಿ ಕಾರ್ಡನ್ನು ಪಡೆಯಬಹುದಾಗಿದೆ. ಒಂದು ವೇಳೆ ವೋಟರ್ ಐಡಿ ಕಳೆದು ಹೋದಲ್ಲಿ 25 ರೂಪಾಯಿಯನ್ನು ಪಾವತಿಸಿ ಕಾರ್ಡಿನ ನಕಲು ಪ್ರತಿಯನ್ನು ಪಡೆದುಕೊಳ್ಳಬಹುದಾಗಿದೆ.
















ಇನ್ನಷ್ಟು ಸುದ್ದಿಗಳು
ವಾಟ್ಸ್ಆ್ಯಪ್ನಲ್ಲಿ ಬರಲಿದೆ ಬಹುನಿರೀಕ್ಷಿತ ‘ಶೆಡ್ಯೂಲ್ ಮೆಸೇಜ್’ ಫೀಚರ್!
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಹೊಸ ರೂಪದಲ್ಲಿ ಆನ್ಲೈನ್ ವಂಚನೆ- ಗ್ರಾಹಕರಿಗೆ ಎಚ್ಚರಿಕೆ ನೀಡಿದ ಎಸ್ಬಿಐ
ಅಡ್ಮಿನ್ಗಳಿಗೆ ಸುಪರ್ ಪವರ್ ನೀಡಿದ ವ್ಯಾಟ್ಸ್ಆ್ಯಪ್- ಅನಗತ್ಯ ಸಂದೇಶಗಳಿಗೆ ಕಡಿವಾಣ
ವಾಟ್ಸಾಪ್: ಡಿಲೀಟ್ ಮಾಡಿದ ಮೆಸೇಜ್ ಮರಳಿ ಪಡೆಯುವ ಹೊಸ ಅಪ್ಡೇಟ್
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಏರ್ಟೆಲ್ ಗ್ರಾಹಕರ ಕಿಸೆಗೆ ಕತ್ತರಿ: ಶೇ.25ರಷ್ಟು ಟ್ಯಾರಿಫ್ ಹೆಚ್ಚಳ- ನ. 26ರಿಂದ ಜಾರಿ
ಗ್ಯಾಸ್ ಸಿಲಿಂಡರ್ ಒಂದಕ್ಕೆ 266₹ ಹೆಚ್ಚಳ
ಫೋನ್ಪೇ ಬಳಕೆದಾರರಿಗೆ ಶಾಕ್- ಇನ್ಮುಂದೆ ಯುಪಿಐ ಸೇವೆಗೆ ಶುಲ್ಕ