janadhvani

Kannada Online News Paper

ಎಸ್ಸೆಸ್ಸೆಫ್ : ಸೆಂಚುರಿ ಸಫರ್ ಇಂದಿನಿಂದ ಆರಂಭ

ಮೊದಲ ಹಂತವಾಗಿ ದಕ್ಷಿಣ ಕರ್ನಾಟಕದ 15 ಜಿಲ್ಲೆಗಳ 55 ಡಿವಿಷನ್ ಕೇಂದ್ರಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು ಯೂನಿಟ್ , ಸೆಕ್ಟರ್ , ಡಿವಿಷನ್ ಹಾಗೂ ಜಿಲ್ಲಾ ನಾಯಕರು ಭಾಗವಹಿಸಲಿದ್ದಾರೆ.

ಚಾಮರಾಜನಗರ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಇದರ ಸದಸ್ಯತ್ವ ಸಂಭ್ರಮ ಹಾಗೂ ಸಮಸ್ತ ಸೆಂಟಿನರಿ ಪ್ರಯುಕ್ತ ಆಯೋಜಿಸಿರುವ ಸೆಂಚುರಿ ಸಫರ್ ಇಂದು ಚಾಮರಾಜನಗರದಿಂದ ಶುಭಾರಂಭಗೊಳ್ಳಲಿದೆ.

ಮೊದಲ ಹಂತವಾಗಿ ದಕ್ಷಿಣ ಕರ್ನಾಟಕದ 15 ಜಿಲ್ಲೆಗಳ 55 ಡಿವಿಷನ್ ಕೇಂದ್ರಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು ಯೂನಿಟ್ , ಸೆಕ್ಟರ್ , ಡಿವಿಷನ್ ಹಾಗೂ ಜಿಲ್ಲಾ ನಾಯಕರು ಭಾಗವಹಿಸಲಿದ್ದಾರೆ.
ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ರವರ ನೇತೃತ್ವದಲ್ಲಿ ಮೈಸೂರು-ಬೆಂಗಳೂರು ವಿಭಾಗ, ರಾಜ್ಯ ಪ್ರಧಾನಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ನೇತೃತ್ವದಲ್ಲಿ ಮಲೆನಾಡು ಕರ್ನಾಟಕ ವಿಭಾಗ ಹಾಗೂ ಕೋಶಾಧಿಕಾರಿ ಅನ್ವರ್ ಅಸ್‍ಅದಿ ನೇತೃತ್ವದಲ್ಲಿ ಕರಾವಳಿ ಕರ್ನಾಟಕ ವಿಭಾಗದಲ್ಲಿ ಸಂಚುರಿ ಸಫರ್ ನಡೆಯಲಿದೆ.

ಇಂದು ಮಗ್ರಿಬ್ ನಮಾಝಿನ ಬಳಿಕ ಚಾಮರಾಜನಗರದಿಂದ ಯಾತ್ರೆ ಆರಂಭಗೊಳ್ಳಲಿದ್ದು ನವಂಬರ್ 23ಕ್ಕೆ ಸಮಾರೋಪಗೊಳ್ಳಲಿದೆ ಎಂದು ಕಾರ್ಯದರ್ಶಿ ಮುಜೀಬ್ ಕೊಂಡಂಗೇರಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿರಿ...