ಪುತ್ತೂರು ತಾಲೂಕಿನ ಕುಂಬ್ರದಲ್ಲಿರುವ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಇಪ್ಪತ್ತನೆಯ ವಾರ್ಷಿಕೋತ್ಸವ ಹಾಗೂ “ಅಲ್ ಮಾಹಿರಾ ಸನದುದಾನ” ಸಂಗಮವು ಫೆಬ್ರವರಿ ತಿಂಗಳಲ್ಲಿ ನಡೆಯಲಿದ್ದು ಇದರ ಅಂಗವಾಗಿ ಜನವರಿ 30 ಶನಿವಾರ ಬೆಳಗ್ಗೆ 10 ಗಂಟೆಯಿಂದ 01 ಗಂಟೆಯ ವರೆಗೆ ಸಂಸ್ಥೆಯ ಹಳೆ ವಿದ್ಯಾರ್ಥಿನಿಯರ ಸಂಗಮ “ಅಲುಂನಿ ಅಸೆಂಬ್ಲಿ” ನಡೆಯಲಿದೆ.
ಸಮಾವೇಶದಲ್ಲಿ ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಅಧ್ಯಕ್ಷತೆ ವಹಿಸಲಿದ್ದು ಶರೀಅತ್ ಕಾಲೇಜಿನ ಪ್ರಿನ್ಸಿಪಾಲ್ ಯು.ಕೆ.ಮುಹಮ್ಮದ್ ಸಅದಿ ವಳವೂರು ಉಧ್ಘಾಟಿಸಲಿರುವರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ| ಎಮ್ಮೆಸ್ಸೆಂ. ಝೈನೀ ಕಾಮಿಲ್ ಅಲುಂನೀ ಸಂದೇಶ ನೀಡಲಿದ್ದು ಮರ್ಕಝುಲ್ ಹುದಾ ಸ್ವಾಗತ ಸಮಿತಿಯ ಅಧ್ಯಕ್ಷ ಮುಹಮ್ಮದ್ ಹಾಜಿ ಕುಕ್ಕುವಳ್ಳಿ ಪ್ರಾಸ್ತಾವಿಕ ಮಾತನ್ನಾಡಲಿರುವರು.
ಅಂತಾರಾಷ್ಟ್ರೀಯ ತರಬೇತುದಾರ ಶಹೀರ್ ಅಹ್ಮದ್ ಫಾಝಿಲ್ ಪ್ರೇರಣಾ ಭಾಷಣ ಮಾಡಲಿರುವರು.
ಸಂಸ್ಥೆಯ ಕಾರ್ಯಾಧ್ಯಕ್ಷ ಹಾಜಿ ಪಿ.ಎಂ.ಅಬ್ದುಲ್ ರಹ್ಮಾನ್ ಅರಿಯಡ್ಕ, ಸ್ವಾಗತ ಸಮಿತಿಯ ಕನ್ವೀನರ್ ಹಾಜಿ ಸಿ.ಎ.ಕರೀಂ ಚೆನ್ನಾರ್, ಡಿಗ್ರೀ ಕಾಲೇಜ್ ಪ್ರಿನ್ಸಿಪಾಲ್ ಮುಹಮ್ಮದ್ ಮನ್ಸೂರ್ ಕಡಬ, ಪಿ.ಯು ಕಾಲೇಜ್ ಪ್ರಿನ್ಸಿಪಾಲ್ ಸಂಧ್ಯಾ ಪಿ.ಶೆಟ್ಟಿ ಭಾಗವಹಿಸಲಿರುವರು.
ಹಳೆ ವಿದ್ಯಾರ್ಥಿನಿಯರು ಸಮಾವೇಶದಲ್ಲಿ ಗರಿಷ್ಟ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ| ಝೈನೀ ಕಾಮಿಲ್ ರವರು ವಿನಂತಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಇಡ್ಕಿದು ಗ್ರಾಮದ ಕೋಲ್ಪೆ ವಡ್ಯರ್ಪೆ – ವಾದಿಮಜಲು ರಸ್ತೆ: ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ
ಎಸ್ ಎಂ ಎ ಈಸ್ಟ್ ಜಿಲ್ಲಾ ಸಮಿತಿ ವತಿಯಿಂದ ಎಸ್ ಎಂ ಎ ನಡೆ ಮೊಹಲ್ಲಾ ಕಡೆ- ಸ್ವಾಗತ ಸಮಿತಿ ರಚನೆ
ಬೆಳ್ಳಾರೆಯಲ್ಲಿ ಸುನ್ನೀ ಆದರ್ಶ ಸಮ್ಮೇಳನ- ಬಹು|ವಹ್ಹಾಬ್ ಸಖಾಫಿ ಮಂಬಾಡ್ ಮುಖ್ಯ ಭಾಷಣ
ಕಾಣಿಯೂರು ಹಲ್ಲೆ ಪ್ರಕರಣ: ಅ.28 ರಂದು ಯುವಜನ ಪರಿಷತ್ ಪ್ರತಿಭಟನಾ ಜಾಥಾ- ಯಶಸ್ವಿಗೊಳಿಸಲು ಕರೆ
ಅ.5 ರಂದು ಪುತ್ತೂರಿನಲ್ಲಿ ಮೀಲಾದ್ ರ್ಯಾಲಿ- SYS ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಸುಳ್ಯ ವಿದ್ಯಾರ್ಥಿಗೆ ಹಲ್ಲೆ ಪ್ರಕರಣ: ಕಲಂ 307 ಅಡಿಯಲ್ಲಿ ಪ್ರಕರಣ ದಾಖಲಿಸಲು ಕ್ಯಾಂಪಸ್ ಫ್ರಂಟ್ ಡಿವೈಎಸ್ಪಿಗೆ ಮನವಿ
ಕ್ಯಾಂಪಸ್ ಫ್ರಂಟ್ ಸದಸ್ಯತ್ವ ಅಭಿಯಾನಕ್ಕೆ ಪುತ್ತೂರಿನಲ್ಲಿ ಚಾಲನೆ
ಪುತ್ತೂರು: ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸಿಎಫ್ಐ ವತಿಯಿಂದ ಸನ್ಮಾನ
ಪಠ್ಯಕ್ರಮದಲ್ಲಿ ಆರೆಸ್ಸೆಸ್ ಸಂಸ್ಥಾಪಕ ಹೆಡ್ಗೆವಾರ್ ಭಾಷಣ ಸೇರ್ಪಡೆ- ಹಿಂಪಡೆಯಲು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ
ಬನ್ನೂರು: ತಾಜುಲ್ ಉಲಮಾ ಸುನ್ನಿ ಚಾರಿಟೇಬಲ್ ಟ್ರಸ್ಟ್ ನ ಘೋಷಣಾ ಸಮಾವೇಶ