janadhvani

Kannada Online News Paper

ಸಯ್ಯಿದ್ ಗುಲ್ಝಾರೇ ಮಿಲ್ಲತ್ ಇಸ್ಮಾಯಿಲ್ ವಾಸ್ತಿ ಇಂದು ಅಲ್ ಖಾದಿಸಾಕೆ

ಕಾವಳಕಟ್ಟೆಯಲ್ಲಿಂದು ಶೈಖ್ ರಿಫಾಯೀ ಕಾನ್ಫರೆನ್ಸ್

ಕಾವಳಕಟ್ಟೆ: ಅಲ್ ಖಾದಿಸ ಕ್ಯಾಂಪಸ್‌ನಲ್ಲಿ ಇಂದು ನಡೆಯಲಿರುವ ಶೈಖ್ ರೀಫಾಯೀ ಕಾನ್ಫರೆನ್ಸ್‌ನಲ್ಲಿ ವಿಶ್ವ ವಿಖ್ಯಾತ ವಿದ್ವಾಂಸ, ಉತ್ತರ ಪ್ರದೇಶದ ಮಾಸ್ವೂಲಿ ಶರೀಫ್ ಸಜ್ದಾದೇ ನಶೀನ್, ಗುಲ್ಝಾರೇ ಮಿಲ್ಲತ್ ಅಲ್ಲಾಮಾ ಮೌಲಾನಾ ಸಯ್ಯಿದ್ ಇಸ್ಮಾಯಿಲ್ ವಾಸ್ತಿ ರಝ್ಝಾಖೀ ಭಾಗವಹಿಸಲಿದ್ದಾರೆ.

ಇಂದು ಸಂಜೆ 4 ಗಂಟೆಗೆ ಆರಂಭವಾಗಲಿರುವ ಪ್ರಸ್ತುತ ಕಾರ್ಯಕ್ರಮದಲ್ಲಿ ಅಲ್ ಖಾದಿಸ ಸಂಸ್ಥೆಯ ಅಧ್ಯಕ್ಷ ಡಾ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಹಝ್ರತ್ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಲಿದ್ದು ಗುಲ್ಝಾರೇ ಮಿಲ್ಲತ್ ಸಯ್ಯಿದ್ ಇಸ್ಮಾಯಿಲ್ ವಾಸ್ತಿ ಮುಖ್ಯ ಭಾಷಣ ಮಾಡಲಿದ್ದಾರೆ.

ಮೌಲಾನಾ ಎಸ್‌ಪಿ ಹಂಝ ಸಖಾಫಿ ಬಂಟ್ವಾಳ, ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ, ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರ್ ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.