ಕಡಬ: ಜ 4. ಕೊಯಿಲ ಮತ್ತು ರಾಮಕುಂಜ ಗ್ರಾಮ ವ್ಯಾಪ್ತಿಯ ಹಲವಾರು ಹಳ್ಳಿ ಪ್ರದೇಶಗಳಿಗೆ ನಿರಂತರವಾಗಿ ಲೋ ವೋಲ್ಟೇಜ್ ಸಮಸ್ಯೆ ಉದ್ಭವಿಸಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವಂತೆ ಪುತ್ತೂರು ಮೆಸ್ಕಾಂ ಇಲಾಖೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆತೂರು ವಲಯದ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಡಿಪಿಐ ಗ್ರಾಮ ಪಂಚಾಯತ್ ಸದಸ್ಯ ಹಸನ್ ಸಜ್ಜಾದ್ ಮಾತನಾಡಿ ಲೋ ವೋಲ್ಟೇಜ್ ಸಮಸ್ಯೆ ಇವತ್ತು ನಿನ್ನೆಯದಲ್ಲ ಹಲವಾರು ವರ್ಷಗಳಿಂದ ಮೆಸ್ಕಾಂಗೆ ಎಸ್ಡಿಪಿಐ ಸೇರಿದಂತೆ ಹಲವಾರು ನಾಗರಿಕರು ಮನವಿ ಸಲ್ಲಿಸಿದ್ದರು, ಆದರೆ ಈ ಬಗ್ಗೆ ಮೆಸ್ಕಾಂ ಗಣನೆಗೆ ತೆಗೆದುಕೊಳ್ಳದ ಕಾರಣ ಸಮಸ್ಯೆ ಮತ್ತಷ್ಟು ದ್ವಿಗುಣಗೊಂಡಿದ್ದು, ಮನೆಯ ವಿದ್ಯುತ್ ಉಪಕರಣ ಸೇರಿದಂತೆ, ಕೃಷಿಯನ್ನೇ ಅವಲಂಬಿತರಾದ ರೈತರಿಗೆ ಪಂಪ್ ಸೆಟ್ ಮೂಲಕ ತೋಟಕ್ಕೆ ನೀರು ಹಾಯಿಸಲು ಕೂಡಾ ಕಷ್ಟಕರವಾಗಿದ್ದರಿಂದ ಹಲವಾರು ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ, ಈ ಬಗ್ಗೆ ಮೆಸ್ಕಾಂ ಇಲಾಖೆ ಶೀಘ್ರ ಸ್ಪಂದಿಸದಿದ್ದಲ್ಲಿ ಎಸ್ಡಿಪಿಐ ಪಕ್ಷವು ಗ್ರಾಮದ ಮತ್ತು ಊರಿನ ನಾಗರಿಕರ ಜೊತೆಗೂಡಿ ಮೆಸ್ಕಾಂಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಸ್ಡಿಪಿಐ ಕಡಬ ತಾಲೂಕು ಜೊತೆ ಕಾರ್ಯದರ್ಶಿ ಬಶೀರ್ ಹಲ್ಯಾರ, ಎಸ್ಡಿಪಿಐ ಆತೂರು ವಲಯಾಧ್ಯಕ್ಷ ಇಸ್ಮಾಯಿಲ್ ಆತೂರು, ಎಸ್ಡಿಪಿಐ ವಲಯ ಸಮಿತಿ ಸದಸ್ಯ ಶರೀಫ್ ಬಿಎಸ್ ಮುಂತಾದವರು ಉಪಸ್ಥಿತರಿದ್ದರು.
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್