ಕುಪ್ಪೆಪದವು: ವಿವಿಧತೆಯಲ್ಲಿ ಏಕತೆಯನ್ನು ಮೈಗೂಡಿಸಿಕೊಂಡ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಪ್ರತೀಯೋರ್ವ ನಾಗರಿಕನಿಗೆ ಮತದಾನ ಹಕ್ಕಾಗಿದ್ದು ಈ ಒಂದು ನಿಟ್ಟಿನಲ್ಲಿ ಪ್ರಜ್ಞಾವಂತ, ನಿಷ್ಠಾವಂತ ಸಮುದಾಯಕ್ಕಾಗಿ ಧ್ವನಿ ಎತ್ತುವ ಅರ್ಹ ಅಭ್ಯರ್ಥಿಗಳನ್ನು ಆರಿಸುವ ಮೂಲಕ ಈ ಬಾರಿಯ ಚುನಾವಣೆಯು ಸಾರ್ಥಕವಾಗಲಿ ಎಂದು ಬದ್ರಿಯಾ ಜುಮಾ ಮಸ್ಜಿದ್ ಕುಪ್ಪೆಪದವು ಇದರ ಖತೀಬರಾದ ಅಬೂ ಝೈದ್ ಶಾಫಿ ಮದನಿ ಕರಾಯ ಜುಮಾ ನಂತರದ ಪ್ರಭಾಷಣದಲ್ಲಿ ಕರೆ ನೀಡಿದರು.
NRC CAA ಮುಂತಾದ ಸಂವಿಧಾನ ವಿರೋಧಿ ಕಾಯ್ದೆಗಳು ಮುಂದಿನ ದಿನಗಳಲ್ಲಿ ಜಾರಿಗೊಳಿಸಲು ಸಂಘ ಪರಿವಾರಗಳ ಅಜಂಡಾಗಳಾಗಿದ್ದು ಇದರ ವಿರುದ್ಧ ಗ್ರಾಮದಿಂದಲೇ ಶಬ್ದವೆತ್ತುವ ಜನ ಪ್ರತಿನಿಧಿಗಳನ್ನು ಆರಿಸುವ ಮೂಲಕ ಸಂವಿಧಾನ ಸಂರಕ್ಷಣೆ ಗ್ರಾಮದಿಂದಲೇ ಆರಂಭವಾಗಲಿ ಎಂದು ತಿಳಿಸಿದರು.
ಚುನಾವಣೆಯ ನೆಪವೊಡ್ಡಿ ಪರಸ್ಪರ ಪ್ರೀತಿ ವಿಶ್ವಾಸಕ್ಕೆ ದಕ್ಕೆಯಾಗದಂತೆ ಮೊಹಲ್ಲಾಗಳಲ್ಲಿ ಅನ್ಯೋನ್ಯತೆಯನ್ನು ಉಳಿಸುವ ಮೊಹಲ್ಲಾಗಳು ಶಿಥಿಲಗೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ. ಈ ಒಂದು ನಿಟ್ಟಿನಲ್ಲಿ ಸೌಹಾರ್ದಯುತವಾಗಿ ಪರಸ್ಪರ ಅನ್ಯೋನ್ಯವಾಗಿ ಜೀವಿಸಬೇಕೆಂದು ಕರೆ ನೀಡಿದರು.
ಪ್ರತಿಯೊಂದು ಕಾರ್ಯದಲ್ಲಿ ಅಲ್ಲಾಹನ ಸಂಪ್ರೀತಿ ಗಳಿಸುವ ಮೂಲಕ ನೈಜ ಮಾನವರಾಗಿ ಜೀವಿಸಬೇಕೆಂದು ಹೇಳಿದ ಅವರು, ಪ್ರಚಲಿತ ಸನ್ನಿವೇಶದಲ್ಲಿ ಬಾರ್ ಗಳು, ಮಾಲ್ ಳು ಇನ್ನಿತರ ಎಲ್ಲಾ ಕಾರ್ಯಕ್ಷೇತ್ರಗಳು ಕಾರ್ಯಾಚರಿಸುತ್ತಾ ಬರುತ್ತಿದ್ದು ಶಿಕ್ಷಣದ ವಿಷಯದಲ್ಲಿ ಕೋವಿಡ್-19 ನ ನೆಪವೊಡ್ಡಿ ದಿನದಿಂದ ದಿನಕ್ಕೆ ಶಿಕ್ಷಣ ಕ್ಷೇತ್ರಗಳು ಕ್ಷೀಣಿಸಲ್ಪಡುತ್ತಾ ಬರುತ್ತಿರುವುದು ವಿಶಾಧನೀಯವಾಗಿದೆ. ಇದರಿಂದ ಅವಿದ್ಯಾವಂತ ಸಮಾಜ ಸ್ರಷ್ಟಿಯಾಗುತ್ತಿದ್ದು ಇದರ ವಿರುದ್ಧ ಪ್ರತೀಯೊಂದು ಮೊಹಲ್ಲಾಗಳು ಜಾಗ್ರತವಾಗಬೇಕಿದೆ ಎಂದು ತಿಳಿಸಿದರು.
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್