ಗಂಗಾವತಿ : ಮಸ್‌ದರ್ ಎಜ್ಯು ಆಂಡ್ ಚಾರಿಟಿ ವತಿಯಿಂದ ಗಂಗಾವತಿಯ ಇಲಾಹಿ ಕಾಲೊನಿಯಲ್ಲಿರುವ ಮಸ್ಜಿದೇ ಅಶ್ರಫುಲ್ ಫುಖಹಾ ದಲ್ಲಿ ಮಸ್‌ದರ್ ತಹ್ಫೀಝುಲ್ ಖುರ್‌ಆನ್ ಸಂಸ್ಥೆಯನ್ನು ಉದ್ಘಾಟನೆ ಮಾಡಲಾಯಿತು.ಸಂಸ್ಥೆಯ ಕಾರ್ಯಾಧ್ಯಕ್ಷ ಮೌಲಾನಾ ಅಬೂ ಸುಫ್ಯಾನ್ ಮದನಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಸಯ್ಯಿದ್ ಆತಿಫ್ ಅಬ್ರಾರ್ ಅಲ್ ಅಝ್ಹರಿ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಸೂರತುಲ್ ಫಾತಿಹಾ ಓದಿ ಕೊಡುವ ಮೂಲಕ ತಹ್ಫೀಝುಲ್ ಖುರ್‌ಆನಿಗೆ ಚಾಲನೆ ನೀಡಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಲಾಲ್ ಮುಈನಿ ಅಮ್ಜದಿ ಹಾಗೂ ಅಬ್ದುಸ್ಸಮದ್ ರವರ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ನಡೆಯಿತು.ಮೌಲಾನಾ ಉವೈಸ್ ಮಂಝರಿ ಹುಬ್ಬಳ್ಳಿ, ನವಾಝ್ ಹಾಜಿ ಬಳ್ಳಾರಿ, ಹುಸೈನ್ ಸಾಹೇಬ್ ತುಂಗಭದ್ರಾ, ದಾದಾಪೀರ್ ಸಾಹೇಬ್ ಬಳ್ಳಾರಿ, ಮೆಹಬೂಬ್ ಎಂಡಿಎಸ್ ಸಿದ್ದಾಪುರ, ನೂರುದ್ದೀನ್ ರಝ್ವಿ ಗಂಗಾವತಿ, ಆರಿಫ್ ಸಿದ್ದಾಪುರ, ಸಿದ್ದೀಕ್ ಸಖಾಫಿ ಮಂಗಳೂರು, ಸಿನಾನ್ ಸಖಾಫಿ ಕಾಟಿಪಳ್ಳ, ಜಿಎಂ ಶಫೀಕ್ ಸಖಾಫಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್