janadhvani

Kannada Online News Paper

ಮೆಲ್ಕಾರ್’ನಲ್ಲಿ ಸಾರ್ವಜನಿಕ ಶುದ್ದ ಕುಡಿಯುವ ನೀರಿನ ಘಟಕ- ನಾಳೆ ಉದ್ಘಾಟನೆ

ಬಂಟ್ವಾಳ, ಡಿ.20: ಮೆಲ್ಕಾರ್ ಜಂಕ್ಷನ್‌ನಲ್ಲಿ ಮೆಲ್ಕಾರ್ ರಿಕ್ಷಾ ಚಾಲಕರು ಮಾಲಕರು ಸಂಘದ ಸಹಕಾರದೊಂದಿಗೆ ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಸಮಿತಿ ಕೊಡುಗೆ ಮಾಡಿದಂತಹ ಶುದ್ಧ ಕುಡಿಯುವ ನೀರಿನ ವಾಟರ್ ಕೂಲರ್ ನಾಳೆಯಿಂದ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿದೆ.

ನಾಳೆ ಬೆಳಗ್ಗೆ 11:00 ಗಂಟೆಗೆ ಮೆಲ್ಕಾರ್ ಜಂಕ್ಷನ್’ನಲ್ಲಿ ಸರಳ ರೀತಿಯ ಉದ್ಘಾಟನಾ ಕಾರ್ಯಾಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಎಸ್.ಎಸ್.ಎಫ್ ಬಂಟ್ವಾಳ ಡಿವಿಷನ್ ನಾಯಕರು, ರಿಕ್ಷಾ ಚಾಲಕ ಮಾಲಕ ಸಂಘದ ಸದಸ್ಯರುಗಳು, ಸ್ಥಳೀಯ ಕೌನ್ಸಿಲರ್’ಗಳು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

error: Content is protected !! Not allowed copy content from janadhvani.com