ಕಾಸರಗೋಡು : ಜನರಲ್ ಆಸ್ಪತ್ರೆಗೆ ಕೋವಿಡ್ ಪ್ರತಿರೋಧವನ್ನು ಬೆಂಬಲಿಸುತ್ತಾ ಮೆಡಿಕಲ್ ಉಪಕರಣಗಳನ್ನು ತಲುಪಿಸಿ ಪುತ್ತಿಗೆ ಮುಹಿಮ್ಮಾತ್ ಸಂಸ್ಥೆ ಮತ್ತೊಮ್ಮೆ ಮಾದರಿಯಾಯಿತು.
ಆಸ್ಪತ್ರೆಯಲ್ಲಿ ಈಗ ಅವಶ್ಯಕತೆ ಇರುವ ತೆರ್ಮಲ್ ಸ್ಕ್ಯಾನರ್, ಡಿಜಿಟಲ್ ತರ್ಮೋ ಮೀಟರ್, ಪಲ್ಸ್ ಆಕ್ಸೀ ಮೀಟರ್, ಆಕ್ಸಿಜನ್ ಮಾಸ್ಕ್, ಆಕ್ಸಿಜನ್ ಫ್ಲೋಮೀಟರ್, ಸ್ಟಿಲೈಝರ್ ಮೀಡಿಯಂ, ಫೂಟ್ ಓಪರೇಶನ್, ಡಿಸ್ಪೆನ್ಸರ್, ಫೂಟ್ ಓಪರೇಟಡ್, ಬಾಸ್ಕೆಟ್ ಮುಂತಾದ ಒಂದುವರೆ ಲಕ್ಷದವರೆಗೆ ಬಲೆಬಾಳುವ ಉಪಕರಣಗಳನ್ನು ಮುಹಿಮ್ಮಾತ್ ಕಾರುಣ್ಯ ಪದ್ಧತಿಯ ಮೂಲಕ ನೀಡಲಾಯಿತು.
ಕಳೆದ ವರ್ಷಗಳಲ್ಲಿ ಆಸ್ಪತ್ರೆಯ ವಾರ್ಡ್ ನವೀಕರಣ, ಹೀಟಲ್ ಕುಡಿಯುವ ನೀರಿನ ಪದ್ಧತಿ, ಮೋರ್ಚರಿಯ ಮುಂದೆ ವೈಟಿಂಗ್ ಸೆಲ್ಟರ್ , ಮುಂತಾದ ಹಲವಾರು ಸಾಂತ್ವನ ಕಾರ್ಯಗಳನ್ನು ಈ ಆಸ್ಪತ್ರೆಗೆ ಮುಹಿಮ್ಮಾತ್ ಮಾಡಿ ಕೊಟ್ಟಿದೆ. ಈದ್ ಮಿಲಾದ್ ಪ್ರಯುಕ್ತ ರೋಗಿಗಳಿಗೆ ಮತ್ತು ಸಹಾಯಕರಿಗೆ ಫ್ರೂಟ್ಸ್ ವಿತರಣೆ ವರ್ಷಗಳಿಂದ ನಡೆಯುತ್ತಿದೆ.
ಮೆಡಿಕಲ್ ಉಪಕರಣಗಳ ವಿತರಣಾ ಕಾರ್ಯಕ್ರಮ ಮುಹಿಮ್ಮಾತ್ ಜನರಲ್ ಸೆಕ್ರೆಟರಿ ಬಿ.ಎಸ್ ಅಬ್ದುಲ್ಲಾ ಕುಞ್ಞಿ ಫೈಝಿ ನಿರ್ವಹಿಸಿದರು. ಜನರಲ್ ಆಸ್ಪತ್ರೆಯ ಸೂಪರೆಂಡ್ ಡಾ ರಾಜಾರಾಮ್ ಸ್ವೀಕರಿಸಿದರು. ನೋಡಲ್ ಆಫೀಸರ್ ಡಾ ಕುಞ್ಞಿ ರಾಮನ್ , ನರ್ಸಿಂಗ್ ಸೂಪರೆಂಡ್ ಸ್ನಿಶಿ, ಸ್ಟೋರ್ ಸೂಪರೆಂಡ್ ಅಜಿತ್ ಕುಮಾರ್, ಮುಹಿಮ್ಮಾತ್ ಫಿನಾನ್ಶಿಯಲ್ ಸೆಕ್ರೆಟರಿ ಹಾಜಿ ಅಮೀರಲಿ ಚೂರಿ , ಪಿ ಆರ್ ಸೆಕ್ರೆಟರಿ ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮೂಸ ಸಖಾಫಿ ಕಳತ್ತೂರ್ ಸ್ವಾಗತ ಮತ್ತು ಅಬೂಬಕರ್ ಕಾಮಿಲ್ ಸಖಾಫಿ ಅನ್ನಡುಕ ಕೃತಜ್ಞತೆ ಸಲ್ಲಿಸಿದರು.
ಸಮಾಜದ ಅನಾಥ ಮತ್ತು ನಿರ್ಗತಿಕರಾಗಿರುವ ಸಾವಿರದ ಐನೂರರಷ್ಟು ವಿದ್ಯಾರ್ಥಿಗಳ ಜೀವನ ಜ್ಞಾನ ಮಜಲುಗಳಲ್ಲಿನ ಖರ್ಚು ಉಚಿತವಾಗಿ ವಹಿಸಿಕೊಂಡು ಕಾರ್ಯಾಚರಿಸುತ್ತಿರುವ ಮುಹಿಮ್ಮಾತ್, ಜೀವ ಕಾರುಣ್ಯ ರಂಗದಲ್ಲಿ 28 ವರ್ಷವಾಯಿತು.
ಇದಲ್ಲದೆ ತಂದೆ ಮರಣಹೊಂದಿದ 12 ವರ್ಷ ವಯಸ್ಸಿಗಿಂತ ಚಿಕ್ಕ 300 ಅನಾಥ ಮಕ್ಕಳ ಖರ್ಚಿಗಾಗಿ ಪ್ರತಿ ತಿಂಗಳು ನಿಶ್ಚಿತ ಮೊತ್ತವನ್ನು ತಲುಪಿಸುವ ಪದ್ಧತಿಯೂ ಮುಹಿಮ್ಮಾತಿನ ಅಧೀನದಲ್ಲಿ ನಡೆಯುತ್ತಿದೆ.
















ಇನ್ನಷ್ಟು ಸುದ್ದಿಗಳು
ಚುನಾವಣಾ ಸಂಭ್ರಮಾಚರಣೆ: ಪಟಾಕಿ ಸಿಡಿದು ಮುಸ್ಲಿಂ ಲೀಗ್ ಕಾರ್ಯಕರ್ತ ಮೃತ್ಯು
ತಮ್ಮದೇ ಸರ್ಕಾರ ಮಂಡಿಸಿದ ಜಾತಿ ಸಮೀಕ್ಷೆ ವರದಿಯನ್ನು ಸುಟ್ಟು ಹಾಕಿದ ಕಾಂಗ್ರೆಸ್ ಎಂಎಲ್ಸಿ
ಕರ್ನಾಟಕ ಸರ್ಕಾರವನ್ನು ಬೀಳಿಸಲು ಕೇರಳ ದೇವಸ್ಥಾನದಲ್ಲಿ ಮೃಗ ಬಲಿ – ದೇವಸ್ವಂ ಸಚಿವರು ಹೇಳಿದ್ದೇನು?
ಮಣಿಪುರ: ಚುನಾವಣೆ ಬಹಿಷ್ಕಾರ ಕ್ಕೆ ಕರೆ ಕೊಟ್ಟ ಕುಕಿ!!
ಬಡತನದಿಂದ ಬಳಲುತ್ತಿರುವ ಕುಟುಂಬದ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ
ಸಯ್ಯಿದ್ ಹಸನುಲ್ ಅಹ್ದಲ್ ತಂಙಳರಿಗೆ ಗೌರವ ‘ಅತ್ತಕ್ರೀಂ’- ಸ್ವಾಗತ ಸಮಿತಿ ಅಸ್ತಿತ್ವಕ್ಕೆ
ಪುಟ್ಟ ಬಾಲಕಿಯ ಅತ್ಯಾಚಾರ,ಹತ್ಯೆ ಪ್ರಕರಣ- ಆರೋಪಿ ಅಶ್ಫಾಕ್ ಆಲಂಗೆ ಮರಣ ದಂಡನೆ
ಕಳಮಶ್ಶೇರಿಯಲ್ಲಿ ಬಾಂಬ್ ಸ್ಫೋಟಿಸಿದ್ದು ಡೊಮಿನಿಕ್ ಮಾರ್ಟಿನ್- ದೃಢೀಕರಿಸಿದ ಪೊಲೀಸ್
ಕಳಮಶ್ಶೇರಿಯಲ್ಲಿ ಬಾಂಬ್ ಇಟ್ಟಿದ್ದು ನಾನೇ – ಪೊಲೀಸ್ ಠಾಣೆಯಲ್ಲಿ ಶರಣಾಗಿ ತಪ್ಪೊಪ್ಪಿಗೆ
ಕಳಮಶ್ಶೇರಿ ಘಟನೆ ಬಾಂಬ್ ಸ್ಪೋಟದಿಂದ- ಖಚಿತಪಡಿಸಿದ ಡಿಜಿಪಿ ಶೇಖ್ ದರ್ವೇಶ್