ಬೆಳ್ತಂಗಡಿ:ಮುಸ್ಲಿಂ ಸಮುದಾಯವನ್ನು ಬಾಂಬ್ ಹಾಕಿ ಕೊಲ್ಲಬೇಕು ಎಂದು ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಹಾಕಿದ ಬಾರ್ಯ ಕರ್ಪಾಡಿ ರಘುರಾಮಶೆಟ್ಟಿ ವಿರುದ್ಧ ಕರ್ಪಾಡಿ ನಾಗರಿಕರು ಪುಂಜಾಲಕಟ್ಟೆ ಠಾಣೆಯಲ್ಲಿ ಎಫ್ ಐ ಆರ್ ಮಾಡಿ ಕೇಸು ದಾಖಲಿಸಿದ್ದಾರೆ.
ಬಾರ್ಯ ಪುತ್ತಿಲ ಗ್ರಾಮದ ರಘುರಾಮು ಶೆಟ್ಟಿ ಎಂಬ ವ್ಯಕ್ತಿ ಅಗಸ್ಟ್ 5 ರ ರಾಮಮಂದಿರ ಭೂಮಿ ಪೂಜೆಯಂದು ನೀತಿ ಸಂಹಿತೆ ಉಲ್ಲಂಘಿಸಿ ಪಟಾಕಿ ಸಿಡಿಸಿದ ವಿಚಾರಕ್ಕೆ ಪಂಜಾಲಕಟ್ಟೆ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಆ ಬಳಿಕ ಸಮಾಜಿಕ ಜಾಲದಲ್ಲಿ ತನ್ನನ್ನು ಯಾರಿಗೂ ಏನು ಮಾಡಲು ಸಾದ್ಯವಿಲ್ಲ ಹಾಗೂ ಮುಸ್ಲಿಂ ಸಮುದಾಯವನ್ನು ಬಾಂಬ್ ಹಾಕಿ ನಾಶ ಮಾಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಪಡಿಸುತ್ತಿದ್ದ.
ಆತನ ವಿರುದ್ದ ತಕ್ಷಣವೇ ಕರ್ಪಾಡಿ ನಾಗರಿಕರು ಪುಂಜಾಲಕಟ್ಟೆ ಫೋಲಿಸ್ ಇಲಾಖೆಯ ಗಮನಕ್ಕೆ ತಂದು ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ IPC ಕಲಂ 1860 ರ ಪ್ರಕಾರ u/s 505 (2) 506 ಸೆಕ್ಷನ್ ಪ್ರಕರಣ ದಾಖಲಾಗಿದ್ದು, ಆರೋಪಿಗೆ ಪೋಲೀಸರು ಬಲೆಬೀಸಿದ್ದಾರೆ. ಆರೋಪಿಯು ತಲೆಮರೆಸಿಕೊಂಡಿದ್ದಾಗಿ ತಿಳಿದು ಬಂದಿದೆ.















ಇನ್ನಷ್ಟು ಸುದ್ದಿಗಳು
ಮುಸ್ಲಿಮ್ ಮತ ಸ್ಥಿತಿಗತಿ ಇಂದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಸುದೃಢಗೊಳಿಸಿದೆ,ರಾಜಣ್ಣ ಅರಿಯಲಿ: ಕೆ.ಅಶ್ರಫ್
ಮೊಂಟೆಪದವು ಗುಡ್ಡ ಕುಸಿತ: ಅವಶೇಷಗಳಡಿಯಲ್ಲಿ ಸಿಲುಕಿದ್ದ ಮಗು ಮೃತ್ಯು- ತಾಯಿಯ ರಕ್ಷಣೆ
ದೇರಳಕಟ್ಟೆ : ಮನೆಯ ತಡೆಗೋಡೆ ಕುಸಿದು 10 ವರ್ಷದ ಪುಟ್ಟ ಬಾಲಕಿ ಮೃತ್ಯು
ಭಾರೀ ಮಳೆ: ಮೊಂಟೆಪದವು ಮನೆ ಮೇಲೆ ಗುಡ್ಡ ಕುಸಿದು ಪುಟ್ಟ ಮಗು ಸಹಿತ ಇಬ್ಬರು ಮೃತ್ಯು
ಸದಾ ಸಮುದಾಯದ ಪರ ಧ್ವನಿಯೆತ್ತುವ ಅಲ್ಪಸಂಖ್ಯಾತ ಸಚಿವರು ಕರಾವಳಿಗೆ ಭೇಟಿ ನೀಡದಿರಲು ಕಾರಣವೇನು?
ಉಲಮಾ ಒಕ್ಕೂಟದ ವಖ್ಫ್ ಪ್ರತಿಭಟನೆ : ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ ಸಂಘಟಕರು
ದ.ಕ.ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ: ಜೆಡಿಎಸ್ ಬಂಟ್ವಾಳ ಮೈನಾರಿಟಿ ಅಧ್ಯಕ್ಷ ಮುಹಮ್ಮದ್ ಶಫೀಕ್ ಆಲಡ್ಕ
ಮುಸ್ಲಿಮ್ ಬಸ್ ಪ್ರಯಾಣಿಕನ ಮೇಲೆ ಹಲ್ಲೆ: ಶೀಘ್ರ ಕಾನೂನು ಕ್ರಮ ಕೈಗೊಳ್ಳಬೇಕು- ಕೆ.ಅಶ್ರಫ್
ಸರಕಾರದ ಆದೇಶ, ತುಳುನಾಡಿನ ಜನತೆಯ ಒಗ್ಗಟ್ಟಿನ ಹೋರಾಟದ ಫಲ- ಮುನೀರ್ ಕಾಟಿಪಳ್ಳ
ಮುಸ್ಲಿಮ್ ವರ್ತಕರ ಮೇಲೆ ಹಲ್ಲೆ: ಮುಸ್ಲಿಮ್ ಮುಖಂಡರ ಭೇಟಿ, ಗಂಭೀರ ಪರಿಗಣನೆ- ಕೆ.ಅಶ್ರಫ್