janadhvani

Kannada Online News Paper

ದಿಢೀರ್ ಪ್ರಚಾರಕ್ಕೆ ಬಾಂಬ್ ಕರೆ ಮಾಡಿದ ವಸಂತ್- ಮಾನಸಿಕ ಅಸ್ವಸ್ಥ ಪಟ್ಟ ಸಾಧ್ಯತೆ

“ಮಂಗಳೂರು ವಿಮಾನ ನಿಲ್ದಾಣ ಒಂಥರಾ ಆಟದ ಸಾಮಗ್ರಿಯಂತಾಗಿದ್ದು, ಯಾರು ಬೇಕಾದರೂ ಇಲ್ಲಿಗೆ ಬೆದರಿಕೆ ಹಾಕಬಹುದು, ಸ್ಫೋಟಕಗಳನ್ನು ತಂದಿರಿಸಬಹುದು ಎನ್ನುವಂತಾಗಿದೆ. ಈಗಾಗಲೇ ವಿಮಾನ ನಿಲ್ದಾಣಕ್ಕೆ ಹಲವರು ಹುಸಿ ಬಾಂಬ್ ಬೆದರಿಕೆ ಹಾಕಿದ್ದಾರೆ. ಹುಸಿ ಬಾಂಬ್ ಕರೆ ಮಾಡಿದ ಬಹುತೇಕರನ್ನು ಮಾನಸಿಕ ಅಸ್ವಸ್ಥರು ಎಂದು ಹೇಳಲಾಗಿತ್ತು”

ಮಂಗಳೂರು: ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ ಘಟನೆಯ ಹಿಂದೆ ಆರೋಪಿಗೆ ಧಿಡೀರನೆ ಪ್ರಚಾರ ಪಡೆಯುವ ಹಂಬಲವಿತ್ತು ಎಂದು ಮಂಗಳೂರು ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಹೇಳಿದ್ದಾರೆ.

ಶುಕ್ರವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಆಯುಕ್ತರು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿದ ಘಟನೆಯ ಬಗ್ಗೆ ವಿವರಗಳನ್ನು ಬಹಿರಂಗಪಡಿಸಿದ್ದಾರೆ

“ಆಗಸ್ಟ್ 19 ರಂದು ಕಾರ್ಕಳದ ವ್ಯಕ್ತಿಯೊಬ್ಬರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ಮಾನ ನಿಲ್ದಾಣದ ಮಾಜಿ ನಿರ್ದೇಶಕ ವಾಸುದೇವ್ ರಾವ್ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದರು, ವಾಸುದೇವ್ ತಕ್ಷಣ ಪ್ರಸ್ತುತ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಮಾಹಿತಿ ನೀಡಿದರು. ಪ್ರೋಟೋಕಾಲ್ ಪ್ರಕಾರ, ಸಿಐಎಸ್ಎಫ್ ಮತ್ತು ಸ್ಥಳೀಯ ಪೊಲೀಸರ ಸಹಾಯದಿಂದ ಶೋಧ ಕಾರ್ಯಾಚರಣೆ ನಡೆಸಲಾಯಿತು.

“ನಂತರ ಇದು ಹುಸಿ ಕರೆ ಎಂದು ಕಂಡುಬಂದಿದೆ. 33 ವರ್ಷದ ಕಾರ್ಕಳ ಮುದ್ರಾಡಿ ನಿವಾಸಿ ವಸಂತ್ ಶೇರಿಗಾರ್ ಆರೋಪಿಯಾಗಿದ್ದು ಈತ 8 ನೇ ತರಗತಿಯವರೆಗೆ ಶಿಕ್ಷಣ ಪಡೆದಿದ್ದಾರೆ ಆದರೆ ಮೊಬೈಲ್ ಫೋನ್ ಬಳಸುವಲ್ಲಿ ತುಂಬಾ ಪರಿಣಿತರಿದ್ದಾನೆ. ಈ ಹಿಂದೆ ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ಸುಮಾರು ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ್ದನು. ಆತ ಆ ನಂತರದ ದಿನಗಳಲ್ಲಿ ಉಡುಪಿಯ ಹೋಟೆಲ್‌ನಲ್ಲಿ ಕೆಲಸ ಮಾಡಿದ್ದಾಗಿ ತಿಳಿದುಬಂದಿದೆ.

“ಈಗ ಲಾಕ್‌ಡೌನ್ ಕಾರಣ ಮನೆಯಲ್ಲಿದ್ದ. ಅಂತರ್ಜಾಲದಲ್ಲಿ ಬ್ರೌಸ್ ಮಾಡುವ ಮೂಲಕ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕರ ದೂರವಾಣಿ ಸಂಖ್ಯೆ ಪಡೆದುಕೊಂಡಿದ್ದಾನೆ, ಜನವರಿಯಲ್ಲಿ ನಡೆದ ಘಟನೆ ಬಗೆಗೆ ಆತನಿಗೆ ಅರಿವಿತ್ತು. ಆದ್ದರಿಂದ, ಪ್ರಚಾರ ಪಡೆಯಲು, ಅವರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದಾಗಿ ಹುಸಿ ಕರೆ ಮಾಡಿದ್ದಾನೆ.

“ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಜಾಮೀನು ರಹಿತ ಪ್ರಕರಣದ ಮೇಲೆ ಭಾರತೀಯ ದಂಡ ಸಂಹಿತೆಯ ವಿವಿಧ ವಿಭಾಗಗಳಡಿ ಆತನ ಬಂಧನವಾಗಿದೆ”ಆಯುಕ್ತರು ಹೇಳಿದ್ದಾರೆ.

ಆರೋಪಿ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆಯೇ ಎಂದು ಕೇಳಲಾಗಿ , “ಆರೋಪಿಯನ್ನು ಮಾನಸಿಕ ಅಸ್ವಸ್ಥ ಎಂದೆನ್ನುವುದು ತಪ್ಪು. ಅದನ್ನು ಸಾಬೀತುಪಡಿಸಲು ನಮ್ಮಲ್ಲಿ ವೈದ್ಯಕೀಯ ಪ್ರಮಾಣಪತ್ರವಿಲ್ಲದಿದ್ದಾಗ ಹಾಗೆನ್ನಲು ಸಾಧ್ಯವಿಲ್ಲ.” ಎಂದರು.

ಮಂಗಳೂರು ವಿಮಾನ ನಿಲ್ದಾಣ ಒಂಥರಾ ಆಟದ ಸಾಮಗ್ರಿಯಂತಾಗಿದ್ದು, ಯಾರು ಬೇಕಾದರೂ ಇಲ್ಲಿಗೆ ಬೆದರಿಕೆ ಹಾಕಬಹುದು, ಸ್ಫೋಟಕಗಳನ್ನು ತಂದಿರಿಸಬಹುದು ಎನ್ನುವಂತಾಗಿದೆ. ಈಗಾಗಲೇ ವಿಮಾನ ನಿಲ್ದಾಣಕ್ಕೆ ಹಲವರು ಹುಸಿ ಬಾಂಬ್ ಬೆದರಿಕೆ ಹಾಕಿದ್ದಾರೆ. ಹುಸಿ ಬಾಂಬ್ ಕರೆ ಮಾಡಿದ ಬಹುತೇಕರನ್ನು ಮಾನಸಿಕ ಅಸ್ವಸ್ಥರು ಎಂದು ಹೇಳಲಾಗಿತ್ತು. ಹೀಗೆ ಪದೇ ಪದೇ ಹುಸಿ ಬಾಂಬ್ ಕರೆಗಳನ್ನು ಮಾಡಿ, ಮುಂದೊಂದು ದಿನ ನಿಜವಾಗಿಯೂ ಇಂತಹ ಕೃತ್ಯವನ್ನು ನಡೆಸುವ ಯೋಜನೆಯನ್ನು ರೂಪಿಸಲು ಸಂಚು ನಡೆದಿದೆಯೇ ಎನ್ನುವ ಅನುಮಾನಗಳಿಗೆ ಇವು ಕಾರಣವಾಗಿದೆ.

error: Content is protected !! Not allowed copy content from janadhvani.com